ಇಂದು ಪ್ರಧಾನಿ ನರೇಂದ್ರ ಮೋದಿಯವರು ಬೆಳಿಗ್ಗೆ ಜನರ ಮುಂದೆ ವಿಡಿಯೋ ಒಂದರ ಮೂಲಕ ಬಂದು ಏಪ್ರಿಲ್ 5 ರ ರಾತ್ರಿ ಒಂಬತ್ತು ಗಂಟೆಗೆ ದೇಶದ ಜನತೆ ತಮ್ಮ ಮನೆಗಳ ಮುಂದೆ ದೀಪವನ್ನು ಹೊತ್ತಿಸುವಂತೆ ಸಂದೇಶವನ್ನು ನೀಡಿದ್ದು, ಈ ವಿಷಯವಾಗಿ ಮಾದ್ಯಮವೊಂದರ ಜೊತೆ ಮಾತನಾಡಿರುವ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರು ಅನೇಕ ವಿಷಯಗಳನ್ನು ಈ ಸಂದರ್ಭದಲ್ಲಿ ಹೇಳಿದ್ದಾರೆ. ಅಲ್ಲದೆ ದೀಪ ಹಚ್ಚಲು ಪ್ರಧಾನಿಯವರು ಕೊಟ್ಟಿರುವ ಕರೆಯನ್ನು ಅವರು ಮೆಚ್ಚಿ ಮಾತನಾಡಿದ್ದಾರೆ. ಮೋದಿಯವರು ಹೇಳಿದ ವಿಚಾರ ಚೆನ್ನಾಗಿದೆ, ಅರ್ಥ ಪೂರ್ಣವಾಗಿದೆ ಎಂದಿದ್ದಾರೆ ಶಿವಣ್ಣ.

ದೀಪವನ್ನು ಹಚ್ಚಿದಾಗ ನಮ್ಮ ಪ್ರಾರ್ಥನೆ ಆ ದೇವರಿಗೆ ತಲುಪಲಿದೆ ಎಂದಿರುವ ಶಿವಣ್ಣ, ಈ ಮೂಲಕ ಎಲ್ಲಾ ಸಮಸ್ಯೆ ಬಗೆಹರಿಯಲಿ ಎಂದು ಕೋರುವ ಆಲೋಚನೆ ಅರ್ಥಪೂರ್ಣವಾಗಿದೆ ಎಂದಿದ್ದಾರೆ. ಹಳೆಯ ಆಚರಣೆಗಳು ಅಥವಾ ಪ್ರಯತ್ನಗಳು ಸದಾ ಕಾಲ ಉತ್ತಮ ಫಲಿತಾಂಶ ನೀಡುತ್ತದೆ ಎಂದು ಕೂಡಾ ಹೇಳಿದ್ದಾರೆ. ಇನ್ನು ಲಾಕ್ ಡೌನ್ ಕುರಿತಾಗಿ ಅವರು ಕೆಲವರಿಗೆ ಅದು ಋಣಾತ್ಮಕ ಆಗಿದೆ. ಆದರೆ ಇದೆಲ್ಲಾ ನಮಗಾಗಿ, ನಮಗೆ ತೊಂದರೆ ಆಗಬಾರದು ಅಂತ ಮಾಡಿರೋದು ಅನ್ನೋದನ್ನು ಗಮನದಲ್ಲಿರಿಸಿ ನಾವು ಅದನ್ನು ಅನುಸರಿಸಬೇಕು ಎಂದಿದ್ದು, ಅಗತ್ಯ ವಸ್ತುಗಳನ್ನು ತರಲು ಒಬ್ಬರು ಹೋಗಿ, ಮನೆ ಮಂದಿಯೆಲ್ಲಾ ಹೋಗುವುದು ಬೇಡ ಎಂದಿದ್ದಾರೆ.

ಇನ್ನು ದಿನಗೂಲಿ ಮಾಡುವವರ ಜೀವನ ಮೊದಲಿನಂತೆ ಆಗಲು ಆದಷ್ಟು ಬೇಗ ಜನರು ಕೊರೊನಾ ವಿರುದ್ಧ ಜಯ ಸಾಧಿಸಲಿ ಎಂದು ಅವರು ಕೋರಿದ್ದಾರೆ. ಅಲ್ಲದೆ ಈಗಾಗಲೇ ಹಲವು ಕಡೆಗಳಲ್ಲಿ ಬಡವರಿಗೆ ಆಹಾರ ಪೂರೈಕೆ ಮಾಡುತ್ತಿರುವುದರ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಮನೆಯಲ್ಲಿ ಸಮಯ ಕಳೆಯಲು ಟಿವಿ ನೋಡುವುದು, ನ್ಯೂಸ್ ನೋಡುಬಹದು ಹೀಗೆ ಮಾಡಬಹುದು ಎಂದು ಅವರು ಹೇಳಿದ್ದಾರೆ. ಅಲ್ಲದೆ ಪ್ರತಿಯೊಬ್ಬರು ಅವರ ಜೀವವನ್ನು ಪ್ರೀತಿಸಬೇಕು, ಅವರಿಗಾಗಿ ಅವರ ಕುಟುಂಬಕ್ಕಾಗಿ ಹಾಗೂ ಅವರ ಸುತ್ತ ಮುತ್ತಲಿನ ಜನರಿಗಾಗಿ ಬದುಕ ಬೇಕು ಎಂಬ ಸಂದೇಶ‌ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here