ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಿನ್ನೆ ನಡೆದ ಸೈನಿಕರ ನರಮೇಧವನ್ನು ಕುರಿತು ಸಂತಾಪವನ್ನು ಸೂಚಿಸಿದ್ದಾರೆ. ಅವರು ತಮ್ಮ ಮಾತುಗಳಲ್ಲಿ ಇಂತಹ ಒಂದು ಘಟನೆ ನಡೆಯಬಾರದಿತ್ತು ಆದರೆ ಅದು ನಡೆದು ಹೋಗಿದೆ. ಕಾಶ್ಮೀರದಲ್ಲಿ ನಡೆದ ಆ ಘಟನೆಯು ನಮ್ಮ ಎಲ್ಲರಿಗೂ ನೋವನ್ನು ತಂದಿದೆ ಎಂದು ಅವರು ಹೇಳಿದ್ದಾರೆ. ವೈಯಕ್ತಿಕವಾಗಿ ತನಗೆ ಬಹಳ ವೇದನೆ ಆಗಿದೆ ಅಂತ ಅವರು ಹೇಳಿಕೊಂಡಿದ್ದಾರೆ. ಎಷ್ಟೋ ಜನ ಯೋಧರು ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ ಅವರ ಕುಟುಂಬಗಳಿಗೆ ಯಾವ ರೀತಿ ಸಮಾಧಾನ ಹೇಳಬೇಕು ಅನ್ನೋದು ಅರ್ಥ ಆಗ್ತಿಲ್ಲ ಅಂತ ಅವರು ಹೇಳಿದ್ದಾರೆ.

ಅವರಿಗೆ ಸರಳವಾಗಿ ಹೇಗೆ ಹೇಳಬಹುದು, ಬೇಜಾರು ಮಾಡಿಕೊಳ್ಳಬೇಡಿ ಅಥವಾ ದುಃಖವನ್ನು ತಾಳಬೇಡಿ ಅಂತ ಹೇಳಬಹುದು. ಆದರೆ ನೋವು ಪಡದೆ ಇರೋದು ಅಷ್ಟು ಸುಲಭವಾದ ಕೆಲಸವಲ್ಲ ಎಂದು ಅವರು ನುಡಿದಿದ್ದಾರೆ. ಆದರೆ ಆ ನೋವನ್ನು ಸಹಿಸುವ ಶಕ್ತಿಯನ್ನು ದೇವರು ಆ ಕುಟುಂಬಗಳಿಗೆ ಕೊಡಲಿ ಎಂದು ಅವರು ಹೇಳಿದ್ದಾರೆ. ಏನು ನಷ್ಟ ಆಗಿದೆ ಅದನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ದೇವರು ಅವರಿಗೆ ನೀಡಲಿ ಎಂದು ಶಿವಣ್ಣ ಹೇಳಿದ್ದಾರೆ. ಅವರಿಗೆ ಸಹಿಸಿಕೊಳ್ಳುವ ಶಕ್ತಿಯನ್ನು ತುಂಬೋದಿಕ್ಕೆ ನಾವು ನಿಮ್ಮ ಜೊತೆ ಇರ್ತೀವಿ ಅಂತ ಅವರು ಹೇಳಿದ್ದಾರೆ.

ಇವತ್ತು ನಾವೇನಾದರೂ ಸುಖವಾಗಿದ್ದೇವೆ ಅಂದರೆ ಅದಕ್ಕೆ ಮುಖ್ಯ ಕಾರಣ ಯೋಧರು ಎಂಬ ವಾಸ್ತವದ ಮಾತನ್ನು ಅವರು ಹೇಳಿದ್ದಾರೆ. ಆ ಘಟನೆ ನಡೆಯಬಾರದಿತ್ತು. ಅದನ್ನು ನಾವು ಖಂಡಿಸುತ್ತೇವೆ, ಯಾರಿಗೇ ಆಗಲಿ ಏನಕ್ಕೆ ಆಗಲಿ ಪ್ರಾಣ ತೆಗೆಯೋ‌ ಹಕ್ಕಿಲ್ಲ, ಅಷ್ಟಕ್ಕೂ ಪ್ರಾಣ ಏಕೆ ತೆಗೀಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ನೀವು ಮಾಡಿರೋದು ತಪ್ಪು ಮುಂದೆ ಇಂತ ತಪ್ಪು ಮಾಡಬೇಡಿ ಎಂದು ಅವರು ಹೇಳಿದ್ದಾರೆ. ಎಲ್ಲಾ ಸೈನಿಕರಿಗೂ ನಾವಿದ್ದೇವೆ ಎಂದು ಹೇಳುತ್ತಾ ಅಗಲಿದ ಯೋಧರಿಗೆ ಅವರು ಸಂತಾಪವನ್ನು ಸೂಚಿಸಿದ್ದಾರೆ.

ಈ ವೀಡಿಯೋ ಇಲ್ಲಿದೆ ನೋಡಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here