ದಕ್ಷಿಣ ಭಾರತದ ಖ್ಯಾತ ನಟ ,ಹಾಗೂ ಕನ್ನಡದ ಅರ್ಜುನ್ ಸರ್ಜಾ ಅವರ ಮೇಲೆ ಖ್ಯಾತ ನಡಿ ಶೃತಿ‌ ಹರಿಹರನ್ ಹೊಸ ಬಿಗ್ ಬಾಂಬ್ ಸಿಡಿಸಿದ್ದಾರೆ‌. ಅರ್ಜುನ್ ಸರ್ಜಾ ಜೊತೆ ವಿಶ್ಮಯ ಎನ್ನುವ ಚಿತ್ರದಲ್ಲಿ ನಟಿಸಿದ್ದ ಶೃತಿ ಹರಿಹರನ್ ಅವರು ಅರ್ಜುನ ಸರ್ಜ ಅವರು ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು. ನನ್ನನ್ನು ಹಲವು ಬಾರಿ ರೆಸಾರ್ಟ್ ಗೆ ಕರೆದಿದ್ದರು ಎನ್ನುವ ಹೇಳಿಕೆಯನ್ನು ಖಾಸಗಿ ವಾರಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ‌ . ಶೃತಿ ಹರಿಹರನ್ ಅವರ ಈ ಹೇಳಿಕೆಯಿಂದಾಗಿ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜ ಅವರ ಬಗ್ಗೆ ಈಗ ಎಲ್ಲರೂ ಅನುಮಾನದಿ ನೋಡುವಂತಾಗಿದ್ದು ಇಂದು ಈ ಘಟನೆಯ ಬಗ್ಹೆ ಪೂರ್ಣ ವಿವರವನ್ನು ಒದಗಿಸುವುದಾಗಿ ಶೃತಿ ಹರಿಹರನ್ ತಿಳಿಸಿದ್ದಾರೆ‌.

ಕಳೆದ ವರ್ಷ ನಾನೊಂದು ಸಿನಿಮಾದಲ್ಲಿ ನಟಿಸಿದ್ದೆ , ಅದರ ಹೆಸರು ವಿಸ್ಮಯ. ಅದರಲ್ಲಿ ಅರ್ಜುನ್ ಸರ್ಜಾ ಅವರು ನಾಯಕನಟರಾಗಿದ್ದರು. ನಾನು ಅರ್ಜುನ ಸರ್ಜಾ ಅವರ ಜೊತೆ ಖುಷಿಯಾಗಿ ನಟಿಸಲು ಒಪ್ಪಿಕೊಂಡಿದ್ದೆ. ಚಿತ್ರೀಕರಣ ಆರಂಭವಾದ ನಂತರ ಅರ್ಜುನ್ ಸರ್ಜಾ ಜೊತೆ ನಾನು ರಿಹರ್ಸಲ್ ನಲ್ಲಿ ಭಾಗಿಯಾಗುವಂತೆ ನಿರ್ದೇಶಕರು ಹೇಳಿದ್ದರು‌. ನಾನು ಖುಷಿಯಿಂದಾಗಿ ರಿಹರ್ಸಲ್ ನಲ್ಲಿ ಭಾಗವಹಿಸಿದ್ದೆ ಆದರೆ ರಿಹರ್ಸಲ್ ಸಮಯದಲ್ಲಿ ಅರ್ಜುನ್ ಸರ್ಜಾ ಅವರು ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ಇನ್ನೂ ಸ್ವಲ್ಪ ಹೊತ್ತು ಹೀಗೇ ಇರೋಣ ಎಂದು ಹೇಳಿದರು

ನನಗೆ ಒಂದು ಜ್ಷಣ ಗಾಬರಿ ಆಯಿತು ನಂತರ ಅರ್ಜುನ ಸರ್ಜಾ ಅವರು ನನ್ನನ್ನು ಹಲವು ಬಾರಿ ರೆಸಾರ್ಟ್ ಗೆ ಬರುವಂತೆ ಒತ್ತಾಯಿಸಿದರು.ನಾನು ಅಂದಿನಿಂದ ವಿಸ್ಮಯ ರಿಹರ್ಸಲ್ ನಲ್ಲಿ ಭಾಗವಹಿಸದೇ ಕೇವಲ ಶೂಟಿಂಗ್ ನಲ್ಲಿ ಮಾತ್ರ ಭಾಗವಹಿಸುತ್ತೇನೆ ಎಂ್ಉ ವಿಶ್ಮಯ ಚಿತ್ರದ ನಿರ್ದೇಶಕರ ಬಳಿ‌ ಹೇಳಿ ಹೊರಟು ಹೋದೆ.ಆದರೆ ನಂತರ ಚಿತ್ರೀಕರಣ ಸಮಯದಲ್ಲಿ ಸಹ ಅರ್ಜುನ್ ಸರ್ಜಾ ಅವರು ನನ್ನನ್ನು ಹಲವಾರು ಬಾರಿ ರೆಸಾರ್ಟ್ ಗೆ ಬರುವಂತೆ ಒತ್ತಾಯಿಸಿದರು ಎಂದು ಖಾಸಗಿ ಪತ್ರಿಕೆಗೆ ಶೃತಿ ಹರಿಹರನ್ ಗಂಭೀರವಾಗಿ ಅರ್ಜುನ್ ಸರ್ಜಾ ಅವರ ಬಗ್ಗೆ ಆರೋಪ ಮಾಡಿದ್ದಾರೆ.

ಅಷ್ಟೇ ಅಲ್ಲದೇ ಇಂದು ನಾನು ಆ ಘಟನೆಯ ಬಗ್ಗೆ ಪೂರ್ಣ ಮಾಹಿತಿ‌ ನೀಡುವುದಾಗಿ ತಿಳಿಸಿದ್ದಾರೆ‌. ಶೃತಿ ಹರಿಹರನ್ ಅವರ ಈ‌ ಹೇಳಿಕೆ ಇಡೀ ದಕ್ಷಿಣ ಭಾರತದ ಸಿನಿಮಾ ವಲಯದಲ್ಲಿ ಬಿರುಗಾಳಿ  ಎಬ್ಬಿಸಿದೆ. ಯಾಕೆಂದರೆ ಅರ್ಜುನ್ ಸರ್ಜಾ ಅವರು ದಕ್ಷಿಣ ಭಾರತದಲ್ಲಿ ಸಾಕಷ್ಟು ಹೆಸರು ಮಾಡಿರುವ ನಟರಾಗಿದ್ದು ಶೃತಿ ಹರಿಹರನ್ ಅವರ ಈ ಆರೋಪಕ್ಕೆ ಅರ್ಜುನ್ ಸರ್ಜಾ ಅವರು ಯಾವ ರೀತಿ ಪ್ರತಿಕ್ರಿಯೆ ಕೊಡುತ್ತಾರೆ ಕಾದು ನೋಡಬೇಕಿದೆ‌ . ವಿಸ್ಮಯ ಚಿತ್ರದಲ್ಲಿ ಅರ್ಜುನಸರ್ಜಾ ಅವರ ಹೆಂಡತಿಯ ಪಾತ್ರದಲ್ಲಿ ಶೃತಿ ಹರಿಹರನ್ ನಟಿಸಿದ್ದರು. ಕಳೆದ ಬರ್ಷ ವಿಶ್ಮಯ ತೆರೆಗೆ ಬಂದಿತ್ತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here