ಸಿಯಾಚಿನ್‍ನಲ್ಲಿ ಇಂದು ಮಧ್ಯಾಹ್ನ ಹಿಮಪಾತ ಸಂಭವಿಸಿದೆ. ಈ ರೀತಿ ಹಿಮಪಾತವಾದ ಕಾರಣದಿಂದಾಗಿ ಸ್ಥಳದಲ್ಲಿ ಇದ್ದು ಸುಮಾರು 8 ಕ್ಕೂ ಹೆಚ್ಚು ಯೋಧರು ಹಿಮಪಾತದಲ್ಲಿ ಸಿಲುಕಿದ್ದಾರೆಂದು ಸೇನೆಯ ಮೂಲಗಳು ಮಾಹಿತಿಯನ್ನು ನೀಡಿದ್ದು, ಪ್ರತಿದಿನದಂತೆ ಯೋಧರು ಇಲ್ಲಿ ಗಸ್ತಿನಲ್ಲಿದ್ದರು. ಆ ಸಂದರ್ಭದಲ್ಲಿ ಇಂತಹುದೊಂದು ಅವಘಡ ಸಂಭವಿಸಿದೆ. ಸೋಮವಾರ ಮಧ್ಯಾಹ್ನ 3.30 ರ ವೇಳೆಯಲ್ಲಿ ಈ ಅನಿರೀಕ್ಷಿತವಾದ ಘಟನೆಯೊಂದು ನಡೆದಿದೆ. ಹಿಮಪಾತದಲ್ಲಿ ಸಿಲುಕಿರುವ ಸೈನಿಕರನ್ನು ರಕ್ಷಿಸಲು ಸದ್ಯ ಸೈನಿಕರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ಈ ಹಿಂದೆ ಅಂದರೆ 2016 ರಲ್ಲಿ ಕೂಡಾ ಇಂತಹುದೇ ಒಂದು ಹಿಮಪಾತ ಸಿಯಾಚಿನ್ ನಲ್ಲಿ ಸಂಭವಿಸಿತ್ತು. ಆಗ ಸಂಭವಿಸಿದ್ದ ಭೀಕರವಾದ ಹಿಮಪಾತದಲ್ಲಿ ಸಿಲುಕಿ ಕರ್ನಾಟಕದ ವೀರಯೋಧ ಹನುಮಂತಪ್ಪ ಕೊಪ್ಪದ್ ಅವರು ಕೊರೆಯುವ ಚಳಿಯಲ್ಲಿ, ಹಿಮದ ನಡುವೆಯೇ ಸಿಲುಕಿದ್ದರು. ಅವರ ರಕ್ಷಣಾ ಕಾರ್ಯಾಚರಣೆ ನಡೆದು 6 ದಿನಗಳ ಬಳಿಕ ಅವರು ಪತ್ತೆಯಾಗಿದ್ದರು. ಜೀವಂತವಾಗಿ ಪತ್ತೆಯಾದರೂ ಸಹಾ ತೀವ್ರ ಚಳಿಯಿಂದ ಮತ್ತು ಹಿಮದಡಿಯಲ್ಲಿ ಸಿಕ್ಕು ಬಹು ಅಂಗಾಂಗ ವೈಫಲ್ಯದಿಂದ ಅವರು ವೀರ ಮರಣ ಹೊಂದಿದ್ದರು.

ಆದರೆ ಸಾವನ್ನು ಎದುರಿಸಿ‌ ಹಿಮದ ನಡುವೆ ಜೀವನ್ಮರಣ ಹೋರಾಟ ನಡೆಸಿದ್ದ ವೀರ ಯೋಧ ಹನುಮಂತಪ್ಪ ಅವರ ಆ ಹೋರಾಟ ಎಂದಿಗೂ ಮರೆಯುವಂತಹುದು ಅಲ್ಲ. ಅನಂತರ ಭಾರತ ಸರ್ಕಾರ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿಯನ್ನು ನೀಡುವ ಮೂಲಕ ವೀರ ಯೋಧನನ್ನು ಗೌರವಿಸಿತ್ತು. ಗಡಿಯಲ್ಲಿ ಅದರಲ್ಲೂ ಕೊರೆವ ಚಳಿಯಲ್ಲಿ ದೇಶ ಕಾಯುವ ಯೋಧರ ತ್ಯಾಗ ಹಾಗೂ ಸೇವೆಗೆ ಸರಿ ಸಾಟಿ ಇನ್ನಾವುದೂ ಇಲ್ಲ ಎಂದೇ ಹೇಳಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here