ಕರ್ನಾಟಕ ರಾಜ್ಯದ ಮಹಾ ಶಿವಯೋಗಿ, ನಡೆದಾಡುವ ದೈವ ಶ್ರೀ ಶಿವಕುಮಾರ ಸ್ವಾಮಿಗಳ ಆರೋಗ್ಯ ಸುಧಾರಣೆಗೆ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಚೆನ್ನೈನ ರೇಲಾ ಆಸ್ಪತ್ರೆಗೆ ನಿನ್ನೆ ಕರೆದೊಯ್ಯಲಾಗಿತ್ತು‌. ಆಸ್ಪತ್ರೆಗೆ ಹೋದಾಗಿನಿಂದ ಶ್ರೀಗಳ ಯೋಗ ಕ್ಷೇಮದ ಮಾಹಿತಿಯನ್ನು ಮಾದ್ಯಮಗಳಲ್ಲಿ ನೀಡುತ್ತಲೇ ಬರಲಾಗುತ್ತಿದೆ. ಇಂದು ಡಾ.ಮಹಮ್ಮದ್ ರೇಲಾ ಅವರ ನೇತೃತ್ವದಲ್ಲಿ ಶ್ರೀಗಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಲಿವರ್ ಬೈಪಾಸ್ ಸರ್ಜರಿಗೆಂದು ಅವರನ್ನು ಚೆನ್ನೈಗೆ ಕರೆದೊಯ್ಯಲಾಗಿತ್ತು‌. ಈಗ ಶಸ್ತ್ರ ಚಿಕಿತ್ಸೆಯ ನಂತರ ಶ್ರೀಗಳು ಚೇತರಿಕೆಯಿಂದ ಇದ್ದರೆಂದು ಹೇಳಲಾಗಿದೆ. ಇನ್ನು ಶ್ರೀಗಳ ಚೇತರಿಕೆ ಕಂಡು ಆಸ್ಪತ್ರೆ ಸಿಬ್ಬಂದಿ ಕೂಡಾ ಚಕಿತರಾಗಿದ್ದಾರೆ.

ಇನ್ನು ನಡೆದಾಡುವ ದೇವರಿಗೆ ಸುಮಾರು ಮೂರುವರೆ ತಾಸಿನ ಕಾಲ ಶಸ್ತ್ರ ಚಿಕಿತ್ಸೆ ಮಾಡಲಾಯಿತು.ಸಿದ್ದಗಂಗಾ ಶ್ರೀಗಳಿಗೆ ಸ್ಟಂಟ್ಸ್ ಅಳವಡಿಸುವ ಸಮಯದಲ್ಲಿ ಶ್ರೀಗಳಿಗೆ ಅರೆವಳಿಕೆ ಮದ್ದು ನೀಡಲಾಗಿತ್ತು.ವೈದ್ಯ ಲೋಕದ ಪ್ರಕಾರ ಶಸ್ತ್ರಚಿಕಿತ್ಸೆ ನಂತರ ನಡೆದಾಡುವ ದೇವರಿಗೆ ಪ್ರಜ್ಞೆ ಸಹಜ ಸ್ಥಿತಿಗೆ ಬರುವುದಕ್ಕೆ ಕನಿಷ್ಠ ಮೂರರಿಂದ ನಾಲ್ಕು ತಾಸು ಬೇಕಿತ್ತು ( ಶಸ್ತ್ರಚಿಕಿತ್ಸೆ ನಂತರ ) . ಶಸ್ತ್ರಚಿಕಿತ್ಸೆ ನಂತರ ನಡೆದಾಡುವ ದೇವರ ಬಳಿ‌ ನರ್ಸ್ ಗಳನ್ನು ಇರಿಸಿ ವೈದ್ಯರು ಹೊರಗಿದ್ದರು.ಈ ಸಮಯದಲ್ಲಿ ಸಿದ್ದಗಂಗಾ ಶ್ರೀಗಳು ಶಸ್ತ್ರಚಿಕಿತ್ಸೆ ಆದ ಒಂದೇ ತಾಸಿಗೆ ತಮಗೆ ಉಸಿರಾಡಲು ಹಾಕಿದ್ದ ಮಾಸ್ಕ್ ತೆಗೆದು ಹಾಕಿ‌ ನರ್ಸ್ ಗಳನ್ನು ಕರೆದು ಕಿಟಕಿಗಳ ಸ್ಕ್ರೀನ್ ತೆಗೆಯಿರಿ ನಾನೀಗ ಚೆನ್ನಾಗಿದ್ದೇನೆ.

ನನ್ನನ್ನು ನನ್ನ ಮಠಕ್ಕೆ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ.ನಡೆದಾಡುವ ದೇವರ ಈ ಅಚ್ಚರಿ ಕಂಡು ವೈದ್ಯರು ಸೇರಿದಂತೆ ಅಲ್ಲದ್ದ ಸಿಬ್ಬಂದಿಗಳು ಸಹ ಬೆಚ್ಚಿ ಬೆರಗಾಗಿದ್ದಾರೆ.ನಂತರ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ಬಗ್ಗೆ ತಿಳಿಸಿ ಅವರಿಗೆ ಈಗ ಬೆಡ್ ರೆಸ್ಟ್ ಅವಶ್ಯಕತೆ ಇರುವುದನ್ನು ವೈದ್ಯರು ಮತ್ತು ಸುತ್ತೂರು ಶ್ರೀಗಳು ಮನವರಿಕೆ ಮಾಡಿ ಸಮಾಧಾನ ಪಡಿಸಿದ್ದಾರೆ. ಇದಕ್ಕೆ ಮುನ್ನ ಚೆನೈ ಆಸ್ಪತ್ರೆಯಲ್ಲಿ

ಶ್ರೀಗಳ ವಿಶೇಷ ಕಾಳಜಿ ವಹಿಸುತ್ತಿರುವ ವೈದ್ಯರು ಆಸ್ಪತ್ರೆಯಲ್ಲಿ ಶ್ರಿ ಗಳನ್ನು ನೀವು ದೇವರನ್ನು ನೋಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ‌. ಆ ಸಂದರ್ಭದಲ್ಲಿ ಶ್ರೀಗಳು ವೈದ್ಯರಿಗೆ ಒಂದು ಅರ್ಥಬದ್ಧವಾದ ಹಾಗೂ ಉದಾತ್ತವಾದ ಉತ್ತರವನ್ನು ನೀಡಿದ್ದಾರೆ‌‌. ದೇವರ ಬಗ್ಗೆ ವೈದ್ಯರ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು ತಮ್ಮ ಮಠದಲ್ಲಿರುವ ಎಲ್ಲಾ ಮಕ್ಕಳು ನನಗೆ ದೇವರು ಎಂದು ಉತ್ತರ ನೀಡಿದ್ದಾರೆ‌. ಬಹುಶಃ ದೇವಮಾನವರ ಆಲೋಚನೆಗಳು ಹೀಗೆಯೇ ಅನಿಸುತ್ತದೆ. ಏಕೆಂದರೆ ನಮ್ಮಲ್ಲಿ ಮಕ್ಕಳು ದೇವರ ರೂಪ ಎಂದು ಹೇಳುವುದು ವಾಡಿಕೆ‌. ಶ್ರೀಗಳ ಉತ್ತರ ನಿಜಕ್ಕೂ ಪರಮಾರ್ಥದಿಂದ ಕೂಡಿದೆ.

ಇನ್ನು ಶ್ರೀಗಳ ಶಸ್ತ್ರ ಚಿಕಿತ್ಸೆ ಬಹಳ ಎಚ್ಚರಿಕೆಯಿಂದ ಮಾಡಬೇಕಾದ ಅವಶ್ಯಕತೆ ಇತ್ತೆಂದು, ಕಾರಣ ಅವರ ಇಳಿ ವಯಸ್ಸು‌. ಅರವಳಿಕೆ ನೀಡಿ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಿದ ನಂತರ , ಬಹುಶಃ ಎಚ್ಚರಗೊಂಡಾಗ ಅವರು ಆಯಾಸ ಪಡಬಹುದೆಂದು ವೈದ್ಯರು ಭಾವಿಸಿದ್ದರು. ಆದರೆ ಅವರ ಆಲೋಚನೆಗೆ ಭಿನ್ನವಾಗಿ ಎಚ್ಚರಗೊಂಡ ಕೂಡಲೇ ಶ್ರೀಗಳು ಯಾವುದೇ ಆಯಾಸವಿಲ್ಲದಂತೆ ಕಂಡು ಬಂದಿದ್ದಾರೆ ಹಾಗೂ ವೈದ್ಯರೊಡನೆ ಕೋಣೆಯಲ್ಲಿ ತಮ್ಮವರಾರು ಇಲ್ಲದನ್ನು ನೋಡಿ ಅದನ್ನು ಕೂಡಾ ವಿಚಾರಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here