ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದೆ.

ವಿಶ್ವದಾದ್ಯಂತ ಕೊರೊನಾ ಹರಡುತ್ತಿದ್ದ ಸಂದರ್ಭದಲ್ಲೇ ನಮ್ಮ ದೇಶದಿಂದ ಹೊರಹೋಗುವ ಮತ್ತು ಒಳ ಬರುವ ವಿಮಾನಯಾನವನ್ನು ಬಂದ್ ಮಾಡಿದ್ದರೆ ಇಂಥ ಸಂಕಷ್ಟದ ದಿನಗಳನ್ನು ದೇಶದ ಜನ ಎದುರಿಸಬೇಕಾದ ಪರಿಸ್ಥಿತಿ ಉದ್ಭವವೇ ಆಗುತ್ತಿರಲಿಲ್ಲ. ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವುದಕ್ಕೆ ಕೇಂದ್ರ ಸರ್ಕಾರದ ವೈಫಲ್ಯ ಕಾರಣವೇ ಹೊರತು ತಬ್ಲಿಗಿ ಜಮಾತ್ ಸಮ್ಮೇಳನಗಳಾಗಲೀ, ಒಂದು ಸಮುದಾಯದ ಜನರಾಗಲಿ ಅಲ್ಲ. ಇಟಲಿ, ಅಮೇರಿಕಾದಂತಹ ದೇಶಗಳು ಕೊರೊನಾ ಇಂದ ತತ್ತರಿಸಿ ಹೋಗಿವೆ, ಅಲ್ಲಿ ಜಮಾತ್ ಸಮ್ಮೇಳನಗಳು ನಡೆದಿತ್ತೆ? ಕೊರೊನಾ ನಮ್ಮ ದೇಶದಲ್ಲಿ ಕಾಣಿಸಿಕೊಂಡ ನಂತರವೂ ತಬ್ಲಿಗಿ ಜಮಾತ್ ಸಮಾವೇಶಕ್ಕೆ ಅನುಮತಿ ನೀಡಿದ್ದು ಯಾರು? ಮತ್ತು ಏಕೆ? ದೆಹಲಿ ಪೊಲೀಸ್ ಇಲಾಖೆ ಯಾರ ಅಧೀನದಲ್ಲಿದೆ? ಸಮಾವೇಶಕ್ಕೆ ಅನುಮತಿ ನೀಡಿ, ಈಗ ಅವರನ್ನೇ ದೂರುವುದು ಕೇವಲ ರಾಜಕೀಯ ಪ್ರೇರಿತ ಹೇಳಿಕೆಗಳಾಗುತ್ತದೆಯಷ್ಟೆ ಎಂದು ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಪೂರ್ವಸಿದ್ಧತೆ ಇಲ್ಲದೆ ಲಾಕ್‌ಡೌನ್ ಹೇರಿದ್ದರಿಂದ ಇಂದು ಕೋಟ್ಯಂತರ ಮಂದಿ ಕಾರ್ಮಿಕರು ಇತ್ತ ಆಹಾರ, ವಸತಿಯೂ ಇಲ್ಲದೆ, ಸ್ವಂತ ಊರುಗಳಿಗೂ ತೆರಳಲು ಸಾಧ್ಯವಾಗದೆ ನರಳುವಂತಾಗಿದೆ. ಕನಿಷ್ಠ ಎರಡು-ಮೂರು ದಿನ ಸಮಯವಕಾಶ ನೀಡಿದ್ದರೂ ನಗರಗಳಲ್ಲಿ ಹಸಿವಿನಿಂದ ಬಳಲುತ್ತಿರುವ ಕಾರ್ಮಿಕರು ತಮ್ಮ ಊರುಗಳಿಗಾದರೂ ಹೋಗಿರುತ್ತಿದ್ದರು. ಈಗಲೂ ವಲಸೆ ಕಾರ್ಮಿಕರಿಗೆ ಊರಿಗೆ ಮರಳಲು ಸೂಕ್ತ ವ್ಯವಸ್ಥೆಯಿಲ್ಲ, 5.50 ಲಕ್ಷ ಮಂದಿ ವಲಸೆ ಕಾರ್ಮಿಕರು ತವರಿಗೆ ಮರಳಲು ಅನುಮತಿ ಪತ್ರಕ್ಕಾಗಿ ಅರ್ಜಿ ಸಲ್ಲಿದ್ದಾರೆ, ಅವರಲ್ಲಿ 60 ಸಾವಿರ ಮಂದಿಗಷ್ಟೇ ಅನುಮತಿ ನೀಡಲಾಗಿದೆ. ಇವರೆಲ್ಲ ದುಡಿಮೆಯೂ ಇಲ್ಲದೆ, ಮನೆಗೂ ಮರಳಲಾಗದೆ ನರಳುವಂತಾಗಿದೆ. ಈವರೆಗೂ ಪಿಎಂ ಕೇರ್ಸ್‌ಗೆ ಅಂದಾಜು ರೂ.35,000 ಕೋಟಿ ಹಣ ಸಂಗ್ರಹವಾಗಿದೆ, ನಮ್ಮ ರಾಜ್ಯದಿಂದಲೇ ಕನಿಷ್ಠ ರೂ.3000 ಕೋಟಿ ನೀಡಲಾಗಿದೆ. ಜನರು ನೀಡಿದ ಹಣದಲ್ಲಿ ಬಡ ಕಾರ್ಮಿಕರಿಗಾಗಿ ಖರ್ಚು ಮಾಡಲು ಸರ್ಕಾರ ಮೀನಾಮೇಷ ಎಣಿಸುತ್ತಿರುವುದೇಕೆ?

ಗ್ರಾಮ ಪಂಚಾಯತಿಗಳಿಗೆ ಬಿಜೆಪಿ ಸದಸ್ಯರನ್ನು ನಾಮನಿರ್ದೇಶನ ಮಾಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯದಿದ್ದರೆ ಲಾಕ್‌ಡೌನ್ ಇದ್ದರೂ ನಾವು ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ. ಈಗಿರುವ ಸದಸ್ಯರ ಕಾಲಾವಧಿಯನ್ನೇ ಮುಂದೂಡಿ, ಮುಂದಿನ 6 ತಿಂಗಳೊಳಗೆ ಚುನಾವಣೆ ನಡೆಸಲಿ. ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here