ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿವೆ. ಆದರೆ ದೊಡ್ಡ ದೊಡ್ಡ ಶಾಲಾ ಕಾಲೇಜುಗಳಲ್ಲಿ ಆನ್ಲೈನ್ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೇ ಪದವಿ ಶಿಕ್ಷಣ ಕೂಡಾ ಆನ್ಲೈನ್ ಮೂಲಕ ನಡೆಯುತ್ತಿದೆ‌. ಇಂತಹ ಆನ್ಲೈನ್ ಶಿಕ್ಷಣವನ್ನು ವಿರೋಧಿಸಿ, ಸರ್ಕಾರದ ನಡೆಯನ್ನು ಪ್ರಶ್ನಿಸಿ ಮಾಜಿ ಸಿಎಂ ಸಿದ್ಧರಾಮಯ್ಯನವರು ಟೀಕೆ ಮಾಡಿದ್ದಾರೆ. ಸರ್ಕಾರ ಆನ್ಲೈನ್ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದಕ್ಕೆ ಸಿದ್ಧರಾಮಯ್ಯನವರು ಟ್ವೀಟ್ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ರಾಜ್ಯ ಸರ್ಕಾರದ ನಡೆಯನ್ನು ಅವರು ವಿರೋಧಿಸಿದ್ದಾರೆ.

ಸಿದ್ಧರಾಮಯ್ಯನವರು ತಮ್ಮ ಟ್ವೀಟ್ ನಲ್ಲಿ “ಭಾರತದ ಅಸ್ತಿತ್ವ ಇರುವುದು ಹಳ್ಳಿಗಳಲ್ಲಿ. ಅಲ್ಲೆಲ್ಲ ಕಂಪ್ಯೂಟರ್, ಲ್ಯಾಪ್ ಟಾಪ್ -ಸ್ಮಾರ್ಟ್ ಪೋನ್‌ಗಳೆಲ್ಲಿಂದ ಬರಬೇಕು? ಪೋನ್ ಇದ್ದರೂ ನೆಟ್‌ವರ್ಕ್ ಎಲ್ಲಿದೆ?
ಆನ್ ಲೈನ್ ಶಿಕ್ಷಣದಲ್ಲಿ ಹಳ್ಳಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದು ಹೇಗೆ? ದೇಶ ಆಳುವ ನಾಯಕರಿಗೆ ಈ ಪ್ರಾಥಮಿಕ ಜ್ಞಾನ ಬೇಡವೇ?” ಎಂದು ಸರ್ಕಾರಗಳು ಹಾಗೂ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ. ಅದು ಮಾತ್ರವೇ ಅಲ್ಲದೇ ಅವರು ಮತ್ತೊಂದು ಟ್ವೀಟ್ ನಲ್ಲಿ ಕೂಡಾ ಪದವಿ ಶಿಕ್ಷಣದಲ್ಲಿ ಆನ್ಲೈನ್ ಶಿಕ್ಷಣದ ಬಗ್ಗೆ ಟೀಕೆ ಮಾಡಿದ್ದಾರೆ.‌

ತಮ್ಮ ಇನ್ನೊಂದು ಟ್ವೀಟ್ ನಲ್ಲಿ ಅವರು “ಪದವಿ ಮತ್ತು ವೃತ್ತಿಪರ ಶಿಕ್ಷಣವನ್ನು ಆನ್‌ಲೈನ್ ತರಗತಿಗಳ ಮೂಲಕ ನೀಡುವ ಪ್ರಧಾ‌ನಿ ಮೋದಿಯವರ ಪ್ರಸ್ತಾವ, ದೇಶದ ಸಾಮಾಜಿಕ ವಾಸ್ತವದ ಅರಿವಿಲ್ಲದವರ ಕುರುಡುತನದ ಆಲೋಚನೆ! ಇದರಿಂದ ಸಮಾಜದ ದೊಡ್ಡ ವರ್ಗ ಶಿಕ್ಷಣದಿಂದ ವಂಚಿತವಾಗಲಿದೆ” ಎಂದು ತಮ್ಮ ಕಳವಳವನ್ನು ಹೊರಹಾಕಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here