ರಾಜ್ಯದಲ್ಲಿ ನಡೆಯಲಿರುವ ಎರಡನೇ ಹಂತದ ಲೋಕಸಭಾ ಚುನಾವಣೆಗೆ ಪ್ರಚಾರ ಕಾರ್ಯ ಬಹಳ ಭರ್ಜರಿಯಾಗಿ ನಡೆಯುತ್ತಿದೆ. ವಿವಿಧ ಪಕ್ಷಗಳ ದಿಗ್ಗಜರು ಈಗಾಗಲೇ ಚುನಾವಣೆ ನಡೆಯಬೇಕಿರುವ ಪ್ರಾಂತ್ಯಗಳಲ್ಲಿ ತಮ್ಮ ವಾಕ್ ಚಾತುರ್ಯದಿಂದ ಭಾಷಣಗಳನ್ನು ಮಾಡುತ್ತಾ, ವಿರೋಧಿಗಳ ಮೇಲೆ ಟೀಕಾಸ್ತ್ರಗಳನ್ನು ಪ್ರಯೋಗಿಸುತ್ತಾ ಬಹಳಷ್ಟು ಪ್ರಚಾರವನ್ನು ಮಾಡುತ್ತಾ, ತಮ್ಮ ಅಭ್ಯರ್ಥಿಗಳ ಪರ ಮತಯಾಚನೆಯನ್ನು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯನವರು ದಾವಣಗೆರೆಗೆ ಆಗಮಿಸುತ್ತಿರುವ ವೇಳೆ , ತನಿಖಾ ದಳದ ಸಿಬ್ಬಂದಿಗಳು ಹೆಲಿಪ್ಯಾಡ್, ಸಿದ್ದರಾಮಯ್ಯ ಪ್ರಯಾಣ ಮಾಡುವ ಕಾರು ತಪಾಸಣೆ ಮಾಡಿದ್ದಾರೆ. ಕಾರಿನ ತಪಾಸಣೆಯ ವೇಳೆ, ಕಾರಿನಲ್ಲಿ ಅವರಿಗೆ ದೊರೆತ ವಸ್ತುವೊಂದು ಈಗ ಬಹಳ ಆಶ್ಚರ್ಯ ಉಂಟು ಮಾಡಿದೆ.

ಸಿದ್ಧರಾಮಯ್ಯನವರ ಕಾರಿನಲ್ಲಿ ಯಾವುದೇ ಹಣದ ಪೆಟ್ಟಿಗೆಯಾಗಲೀ, ಕಾಗದ ಪತ್ರಗಳಾಗಲೀ, ಅಥವಾ ಯಾವುದೇ ಡೈರಿಯಾಗಲೀ ದೊರೆತಿಲ್ಲ. ಬದಲಿಗೆ ಅವರ ಕಾರಿನಲ್ಲಿ ಒಂದು ಬೊಂಬೆ ದೊರೆತಿದೆ. ವಿಧ್ವಂಸಕ ಕೃತ್ಯ ತಪಾಸಣಾ ತನಿಖಾದಳದ ಸಿಬ್ಬಂದಿ ಎಲ್ಲ ವಾಹನಗಳ ತಪಾಸಣೆ ನಡೆಸಿದ್ದಾರೆ, ಈ ಸಂದರ್ಭದಲ್ಲಿ ಅವರಿಗೆ ಸಿದ್ಧರಾಮಯ್ಯನವರ ಕಾರಿನಲ್ಲಿ ಗೊಂಬೆಯೊಂದು ಸಿಕ್ಕಿದೆ. ಈ ಆಟಿಕೆಯನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದು, ಮಾಜಿ ಸಿಎಂ ಸಂಚರಿಸಬೇಕಾದ ಕಾರಿನಲ್ಲಿ ಗೊಂಬೆ ಹೇಗೆ ಬಂತು ಅನ್ನೋ ಪ್ರಶ್ನೆ ಉದ್ಭವಿಸಿದೆ.

ಮೊನ್ನೆಯಷ್ಟೇ ಅವರು ಮಾದ್ಯಮದವರ ಮುಂದೆ ಒಂದು ನಿಂಬೆ ಹಣ್ಣು ಹಿಡಿದು ಪ್ರತ್ಯಕ್ಷವಾಗಿದ್ದರು. ಅನಂತರ ಏರ್ ಪೋರ್ಟ್ ನಲ್ಲಿ ಅದನ್ನು ಯಾರೋ ನೀಡಿದರು ಅಂತ ಹೇಳಿ, ಅದನ್ನು ಪತ್ರಕರ್ತರ ಜೇಬಿಗೆ ಹಾಕಿ, ಆಗೋದಾದ್ರೆ ನಿಮಗೆ ಒಳ್ಳೆಯದಾಗಲಿ ಬಿಡಪ್ಪ ಎಂದು ಹಾಸ್ಯ ಚಟಾಕಿ ಹಾರಿಸಿದ್ದ ವಿಡಿಯೋ ಹಾಗೂ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಈಗ ಅವರ ಕಾರಿನಲ್ಲಿ ದೊರೆತಿರುವ ಗೊಂಬೆ ಎಲ್ಲಿಂದ ಬಂತು ಎಂಬ ಗುಸು ಗುಸು ಆರಂಭವಾಗಿದೆ. ಅದಕ್ಕೆ ಉತ್ತರ ಸಿದ್ಧರಾಮಯ್ಯನವರೇ ಹೇಳಬೇಕು ಅಥವಾ ಅವರಿಗೆ ತಿಳಿಯದೇ ಬಂದಿದ್ದರೂ ಬಂದಿರಬಹುದು ಎಂದು ಊಹಿಸಿಕೊಳ್ಳಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here