ರಾಜ್ಯದ ವಿಪಕ್ಷ ನಾಯಕರಾದ ಸಿದ್ದರಾಮಯ್ಯನವರ ಆಪ್ತ ಬಳಗದಲ್ಲಿ ತನ್ನನ್ನು ಗುರುತಿಸಿಕೊಂಡಿದ್ದ ಮಾಜಿ ಸಚಿವ ಸಿ.ಎಚ್. ವಿಜಯ್ ಶಂಕರ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ರಾಜೀನಾಮೆ ನಂತರ ಅವರು ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪನವರ ಸಮ್ಮುಖದಲ್ಲಿ ಮತ್ತೆ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಅವರು ತಾನು ಬಿಜೆಪಿ ಸೇರುವ ಬಗ್ಗೆ ಕೆಲವು ದಿನಗಳ ಹಿಂದೆಯೇ ಸಭೆಯೊಂದನ್ನು ನಡೆಸಿ, ತಮ್ಮ ಬೆಂಬಲಿಗರೊಡನೆ ಚರ್ಚೆ ಮಾಡಿದ್ದರು. ಈಗ ಅವರ ಕಾಂಗ್ರೆಸ್ ಗೆ ರಾಜೀನಾಮೆಯನ್ನು ನೀಡಿ, ಕಾಂಗ್ರೆಸ್ ನಿಂದ ಹೊರ ಬಂದಿದ್ದಾದೆ.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ವಿಜಯ್ ಶಂಕರ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಮೈಸೂರಿನಿಂದ ಕಣಕ್ಕಿಳಿದಿದ್ದರು. ಆದರೆ ಮೈಸೂರಿನಲ್ಲಿ ಇವರ ಪ್ರತಿಸ್ಪರ್ಧಿ ಬಿಜೆಪಿಯ ಪ್ರತಾಪ್ ಸಿಂಹ ವಿರುದ್ಧ ಸೋಲನ್ನು ಅನುಭವಿಸಬೇಕಾಯಿತು. ಈಗ ವಿಜಯ್ ಶಂಕರ್ ಕಾಂಗ್ರೆಸ್‌ ನಿಂದ ಹೊರ ಬಂದಿರುವುದು ಸಿದ್ದರಾಮಯ್ಯನವರಿಗೆ ಆದ ಹಿನ್ನಡೆ ಎಂದೇ ಹೇಳಲಾಗಿದೆ. ಈ ಹಿಂದೆ ಒಮ್ಮೆ ಮಾದ್ಯಮದ ಮುಂದೆ ವಿಜಯ್ ಶಂಕರ್ ಅವರು ರಾಜಕಾರಣಿ ಎಷ್ಟು ವರ್ಷ ಮನೆಯಲ್ಲಿ ಕೂರಲು ಸಾಧ್ಯವೆಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ತಾನು ಬದಲಾವಣೆ ಬಯಸಿ ಜನರ ಅಭಿಪ್ರಾಯ ಕೇಳುತ್ತಿದ್ದೇನೆ. ಹುಣಸೂರು ಉಪ ಚುನಾವಣೆ ದೃಷ್ಟಿಯಿಂದ ಇಂತಹ ನಿರ್ಧಾರ ಮಾಡುತ್ತಿಲ್ಲವೆಂದಿದ್ದ ಅವರು, ಒಂದು ರಾಷ್ಟ್ರೀಯ ಪಕ್ಷಕ್ಕೆ ತಾನು ಷರತ್ತು ವಿಧಿಸಿ ಸೇರಲಾಗುವುದಿಲ್ಲ, ಈ ವಿಚಾರವಾಗಿ ಒಂದು ವಾರದಲ್ಲಿ ಸ್ಪಷ್ಟ ತೀರ್ಮಾನ ಮಾಡುವುದಾಗಿ ಹೇಳಿದ್ದರು. ಬಿಜೆಪಿ ಸೇರುವ ನಿರ್ಧಾರವೇನಾದರೂ ಮಾಡಿದರೆ, ಅದಕ್ಕೆ ಕಾರಣ ನೀಡುತ್ತೇನೆಂದು ಅವರು ಹೇಳಿದ್ದರು. ವಿಶೇಷ ಎಂದರೆ ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ವಿಜಯ್ ಶಂಕರ್ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎನ್ನುವ ವಿಚಾರಗಳು ಕೂಡಾ ದಟ್ಟವಾಗಿವೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here