ಇತ್ತೀಚೆಗೆ ರಾಜ್ಯ ರಾಜಕೀಯವಲಯದಲ್ಲಿ ಸಾಕಷ್ಟು ಹೆಸರು ಮಾಡಿದ ಧರ್ಮಸ್ಥಳದ ಶಾಂತಿವನದಲ್ಲಿ ಸಿದ್ದರಾಮಯ್ಯ ಅವರು ಮಾತನಾಡಿರುವ ವೀಡಿಯೋ ಬಗ್ಗೆ ಈಗ ರಾಜ್ಯ ರಾಜಕೀಯ ಕೇಂದ್ರಬಿಂದು ಆಗಿದೆ.ಈ ವೀಡಿಯೋ ವೈರಲ್ ಆದ ನಂತರ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ವಿರುದ್ದ ಬಹಿರಂಗವಾಗಿ ಅಸಮಧಾನ ಹೊರಹಾಕಿದ್ದರು.ರಾಜ್ಯದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಬಜೆಟ್ ಮಂಡನೆ ಮಾಡಲು ತಯಾರಿ ನಡೆಸುತ್ತಿರುವ ಕುರಿತು ಸಿದ್ದರಾಮಯ್ಯ ಅವರು ಮಾತನಾಡಿದ್ದರು.ಜೆಡಿಎಸ್ ಪಕ್ಷವು ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿಲ್ಲ,ಜೆಡಿಎಸ್ ಪಕ್ಷವು ಕಾಂಗ್ರೆಸ್ ಪಕ್ಷದ ಬೆಂಬಲದಿಂದ ರಾಜ್ಯದಲ್ಲಿ ಸರ್ಕಾರ ನಡೆಸುತ್ತಿದೆ.

 

ಹೀಗಾಗಿ ನಮ್ಮ ಸರ್ಕಾರ ಈ ಹಿಂದೆ ಅನುಸ್ಥಾನಗೊಳಿಸಿದ್ದ ಯೋಜನೆಗಳನ್ನು ಮುಂದುವರಿಸಬೇಕು ಅದು ಬಿಟ್ಟು ಹೇಗೆ ಹೊಸ ಬಜೆಟ್ ಮಂಡಿಸುತ್ತಾರೆ ? ರಾಹುಲ್ ಗಾಂಧಿ ಹೇಗೆ ಅವರಿಗೆ ಬಜೆಟ್ ಮಂಡಿಸಲು ಅವಕಾಶ ಕೊಡುತ್ತಾರೆ ಎಂದು ಸಿದ್ದರಾಮಯ್ಯ ಅವರು ಮಾತನಾಡಿದ ವೀಡಿಯೋ ವೈರಲ್ ಆಗಿತ್ತು‌.ಈ ವೀಡಿಯೋ ವೈರಲ್ ಆದ ನಂತರ ಹೆಚ್ ಡಿ ಕುಮಾರಸ್ವಾಮಿ ಅವರು ಸಿದ್ದತೆ ಅವರ ವಿರುದ್ದ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು.ನಾನು ಯಾರ ಒತ್ತಡದಲ್ಲೂ ಇಲ್ಲ ನಾನು ಅಧಿಕಾರದಲ್ಲಿ ಇರುವ ತನಕ ಜನರಿಗೆ ಉತ್ತಮ ಕಾರ್ಯಕ್ರಮ ನೀಡುತ್ತೇನೆ ,ನಾನು ಮತ್ತೊಬ್ಬರ ಹಾಗೆ ಅಧಿಕಾರಿಗಳನ್ನು ಬೆದರಿಸಿ ,ಮರ್ಯಾದೆ ನೀಡದೆ ದುರುಪಯೋಗ ಮಾಡಿಕೊಳ್ಳುತ್ತಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದರು.

 

ಇದೀಗ ಧರ್ಮಸ್ಥಳದ ಶಾಂತಿವನದ ಸಿದ್ದರಾಮಯ್ಯ ಅವರ ವೀಡಿಯೋ ಅನ್ನು ಬೇಕೆಂತಲೇ ಮಾಧ್ಯಮಗಳಿಗೆ ಲೀಕ್ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.ಧರ್ಮಸ್ಥಳದ ಶಾಂತಿವನದಲ್ಲಿ ಸಿದ್ದರಾಮಯ್ಯ ಅವರಿಗೆ ಎಸ್ ಪಿ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದದ್ದು ಒಳಗೆ ಹೋಗುವವರ ಮೇಲೆ ಸಂಪೂರ್ಣ ನಿಗಾ ವಹಿಸಲಾಗುತ್ತದೆ.ಅದು ಅಲ್ಲದೇ ಸಿದ್ದರಾಮಯ್ಯ ಅವರ ಬಳಿ ಪ್ರಭಾವಿ ವ್ಯಕ್ತಿಗಳಿಗೆ ಶಾಸಕರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.ಹೀಗಿರುವಾಗ ವೀಡಿಯೋ ಹೇಗೆ ತೆಗೆಯಲು ಸಾಧ್ಯ ಎಂಬುದು ಹಲವರ ಪ್ರಶ್ನೆ ಆಗಿದ್ದು ಈ ವೀಡಿಯೋ ಅನ್ನು ಸಿದ್ದರಾಮಯ್ಯ ಅವರ ಪ್ರಭಾವ ಎಷ್ಟಿದೆ ಎಂಬುದನ್ಬು ಹಲವರಿಗೆ ಮನದಟ್ಟು ಮಾಡಲು ಸಿದ್ದರಾಮಯ್ಯ ಅವರ ಆಪ್ತರೇ ವೈರಲ್ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here