ಮಾಜಿ ಮುಖ್ಯಮಂತ್ರಿ ಹಾಗೂ ಪ್ರಸ್ತುತ ವಿರೋಧ ಪಕ್ಷದ ನಾಯಕರಾಗಿರುವ ಸಿದ್ಧರಾಮಯ್ಯನವರು ತಮಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ತಮಗೆ ನೀಡಲಾಗಿರುವ Z+ ಭದ್ರತೆಯನ್ನು ಮುಂದುವರೆಸಬೇಕೆಂದು ಮನವಿ ಮಾಡುತ್ತಾ ಸಿಎಂ ಯಡಿಯೂರಪ್ಪ ಅವರಿಗೆ ಪತ್ರವನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಸಿದ್ಧರಾಮಯ್ಯನವರು, ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿಯಾದ ನನಗೆ Z+ ಭದ್ರತೆಯನ್ನು ಒದಗಿಸಲಾಗಿದೆ. ರಾಜ್ಯಾದ್ಯಂತ ನಿರಂತರವಾಗಿ ಪ್ರವಾಸ ಕೈಗೊಳ್ಳುತ್ತೇ‌ನೆ. ಈ ಸಂದರ್ಭದಲ್ಲಿ ಅಸಂಖ್ಯಾತ ಜನರನ್ನು ಭೇಟಿಯಾಗುತ್ತೇನೆ.

ಅಲ್ಲದೇ ನನಗೆ ಜೀವ ಬೆದರಿಕೆಯ ಪತ್ರಗಳು ಕೂಡಾ ಬಂದಿರುವುದಿಂದ, ಮುಂಗಾವಲು ಹಾಗೂ ಬೆಂಗಾವಲು ಪಡೆಯ ರಕ್ಷಣೆ ಅಗತ್ಯವಾಗಿ ಬೇಕಾಗಿರುತ್ತದೆ. ಆದ್ದರಿಂದ ನನಗೆ ನೀಡಲಾಗಿರುವ Z+ ಭದ್ರತೆಯನ್ನು ಮುಂದುವರೆದಬೇಕಾಗಿ ಸಂಬಂಧ ಪಟ್ಟವರಿಗೆ ಸೂಚಿಸುವಂತೆ ಕೋರುತ್ತೇನೆ ಎಂದು ಅವರು ಸಿಎಂ ಅವರಿಗೆ ಪತ್ರವನ್ನು ಬರೆದಿದ್ದಾರೆ. ಮಾಜಿ ಸಿಎಂ ಅವರ ಭದ್ರತೆಯನ್ನು ರಾಜ್ಯ ಗೃಹ ಇಲಾಖೆ ಹಿಂಪಡೆದಿದ್ದು ಸಿದ್ಧರಾಮಯ್ಯನವರ ಅಭಿಮಾನಿಗಳು ಇದರಿಂದ ಅಸಮಾಧಾನಗೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಗೃಹ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸನ್ಮಾನ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭದ್ರತೆಯನ್ನು ಯಾವುದೇ ಕಾರಣವಿಲ್ಲದೆ, ಮಾಹಿತಿಯನ್ನೂ ಸಹ ತಿಳಿಸದೇ ಕೇವಲ ದ್ವೇಷದ ಭಾವದಿಂದ ಕಡಿತಗೊಳಿಸಿದ ರಾಜ್ಯ ಸರ್ಕಾರ ತನ್ನ ವಿಕೃತಿಯಲ್ಲಿ ರಾಜತಾಂತ್ರಿಕತೆ ಮರೆತು ಅಧಿಕಾರದ ಮದದಲ್ಲಿ ತೇಲುತ್ತಿದೆ. ಭದ್ರತೆ ಕಡಿಮೆ ಮಾಡಬಹುದು, ಜನರ ಮನಸಿನಲ್ಲಿ ಸಿದ್ದರಾಮಯ್ಯರೆಡೆಗಿನ ಸುಭದ್ರವಾಗಿರುವ ಪ್ರೀತಿಯನ್ನು ಕಡಿಮೆ ಮಾಡಲು ಸಾಧ್ಯವೇ..! ಎಂದು ಪೋಸ್ಟ್ ಮಾಡುವ ಮೂಲಕ ಅವರ ಅಭಿಮಾನಿಗಳು ತಮ್ಮ ಸಿಟ್ಟನ್ನು ತೋರಿಸಿಕೊಂಡಿದ್ದಾರೆ.

https://m.facebook.com/story.php?story_fbid=1537682603060644&id=100004567575669

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here