ಆಪರೇಷನ್ ಕಮಲದ ಕಾರಣದಿಂದ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಅನರ್ಹ ಶಾಸಕರು ಚುನಾವಣೆಯಲ್ಲಿ ಗೆದ್ದ ನಂತರ ಸಚಿವರಾಗಿದ್ದಾರೆ. ಈ ವಿಷಯ ಬಹುತೇಕ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಆದರೆ ಕಾಂಗ್ರೆಸ್ ತೊರೆದು ಬಿಜೆಪಿ ಪಾಳೆಯ ಸೇರಿರುವ ಎಲ್ಲಾ ಶಾಸಕರು ಹಾಗೂ ಸಚಿವರು ಸಿದ್ಧರಾಮಯ್ಯನವರು ಕರೆದರೆ ಕೂಡಲೇ ಕಾಂಗ್ರೆಸ್ಸಿಗೆ ಮರಳಿ ಬರುವರು ಎಂದು ಹೇಳಿದ್ದಾರೆ ಮಾಜಿ ಕೇಂದ್ರ ಸಚಿವೆಯಾದಂತಹ ಮಾರ್ಗರೇಟ್‌ ಆಳ್ವ ಅವರು. ಅವರ ಈ ಹೇಳಿಕೆ ಈಗ ಎಲ್ಲರ ಗಮನವನ್ನು ಸೆಳೆದಿರುವುದಂತೂ ವಾಸ್ತವ. ಮಾರ್ಗರೆಟ್ ಆಳ್ವ ಅವರು ಸಿದ್ಧರಾಮಯ್ಯನವರ ಸಮ್ಮುಖದಲ್ಲೇ ಇಂತಹುದೊಂದು ಮಾತನ್ನು ಹೇಳಿದ್ದಾರೆ.

ವಿಜಯನಗರದ ಕಾಸಿಯ ಭವನದಲ್ಲಿ ನಡೆದಂತಹ ಸಿಎಎ ಮತ್ತು ಎನ್.ಆರ್.ಸಿ. ಕುರಿತ ಕಾರ್ಯಾಗಾರದಲ್ಲಿ ಮಾತನಾಡುವ ಸಂದರ್ಭದಲ್ಲಿ ಮಾರ್ಗರೇಟ್‌ ಆಳ್ವ ಅವರು ರಾಜ್ಯದಲ್ಲಿ ಶಾಸಕರ ಕೊಳ್ಳುವಿಕೆ ಹಾಗೂ ಮಾರಾಟ ನಡೆದು ಬಿಜೆಪಿ ಸರ್ಕಾರವನ್ನು ರಚಿಸಿದೆ. ಸಿದ್ಧರಾಮಯ್ಯನವರಿಗೆ ಇದೆಲ್ಲಾ ಗೊತ್ತಿದ್ದು, ದುಡ್ಡು ತೆಗೆದುಕೊಂಡು ಹೋದವರು ಎಷ್ಟು ದಿನ ಇರ್ತಾರೆ, ಸಿದ್ಧರಾಮಯ್ಯನವರು ಯಾವಾಗ ವಾಪಸ್ಸು ಕರೆಯುವರೋ ಆಗ ಎಲ್ಲರೂ ವಾಪಸ್ಸು ಬರುವರು ಎಂದು ಮಾರ್ಗರೇಟ್‌ ಆಳ್ವ ಅವರು ಹೇಳಿದ್ದಾರೆ.

ಆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯನವರು ಕೂಡಾ ಇದ್ದರು. ಇನ್ನು ಮಾರ್ಗರೇಟ್‌ ಆಳ್ವ ಅವರ ಹೇಳಿಕೆಯನ್ನು ಗಮನಿಸಿದರೆ ಸಿದ್ಧರಾಮಯ್ಯನವರಿಗೆ ಆಪರೇಷನ್ ಕಮಲದ ಎಲ್ಲಾ ವಿಚಾರ, ಸಂಪೂರ್ಣ ವಿವರ ಇತ್ತು, ಅವರು ಕರೆದಾಗ ಶಾಸಕರು ಮರಳಿ ಬರುವರು ಎಂಬ ಮಾತನ್ನು ಕೇಳಿ ಕಾರ್ಯಕ್ರಮದಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಚಪ್ಪಾಳೆಯನ್ನು ಹೊಡೆದು ಸಂತಸ ಪಟ್ಟಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here