ನಿನ್ನೆ ಪ್ರಧಾನಿ ಮೋದಿಯವರು ಇದೇ ಭಾನುವಾರ ಅನುಸರಿಸಬೇಕಾದ ಜನತಾ ಕರ್ಫ್ಯೂ ಬಗ್ಗೆ ಹೇಳಿದ್ದರು. ಈ ವಿಷಯವಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಜನತಾ ಕರ್ಫ್ಯೂ ಎಂದರೇನು? ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಅವರು ಮಾತನಾಡುತ್ತಾ ಜನರು ರಾಜ್ಯದಲ್ಲಿ ಈಗಾಗಲೇ ಮನೆಯಲ್ಲೇ ಇದ್ದಾರೆ, ರಾಜ್ಯದಲ್ಲಿ ಕರ್ಫ್ಯೂ ರೀತಿಯ ಪರಿಸ್ಥಿತಿ ಇದೆ. ಇದನ್ನು ಮೋದಿಯವರು ವಿಶೇಷವಾಗಿ ಹೇಳುವುದೇನು? ಎನ್ನುವ ಮೂಲಕ ಜನತಾ ಕರ್ಫ್ಯೂ ಬಗ್ಗೆ ಪ್ರಧಾನಿಯವರು ಹೇಳಿರುವ ವಿಚಾರದ ಬಗ್ಗೆ ಟೀಕೆ ಮಾಡಿದ್ದಾರೆ. ವಿಧಾನ ಸೌಧದಲ್ಲಿ ಮಾತನಾಡಿದ ಸಂದರ್ಭದಲ್ಲಿ ಅವರು ಈ ವಿಷಯವನ್ನು ಹೇಳಿದ್ದಾರೆ.‌

ಮೋದಿಯವರು ಕೇವಲ ಭಾಷಣವನ್ನು ಮಾಡಿದ್ದು, ಅವರ ಭಾಷಣದಲ್ಲಿ ಏನೂ ಸತ್ವವಿಲ್ಲ ಎಂದಿರುವ ಸಿದ್ಧರಾಮಯ್ಯನವರು ಕೊರೊನಾ ತಡೆಗೆ ಸಂಬಂಧಿಸಿದಂತೆ ಯಾವುದೇ ಮುಂಜಾಗ್ರತಾ ಕ್ರಮಗಳ ಕುರಿತಾಗಿ ಅವರು ಹೇಳಿಲ್ಲ. ಕೇಂದ್ರವು ಕೈಗೊಳ್ಳುವ ತುರ್ತು ಕ್ರಮಗಳ ಬಗ್ಗೆ ತಿಳಿಸಿಲ್ಲ. ಬೇರೆ ದೇಶಗಳಲ್ಲಿ ಅಲ್ಲಿನ ಸರ್ಕಾರಗಳು ಕೊರೊನಾ ತಡೆಗೆ ಸಾಕಷ್ಟು ಹಣವನ್ನು ಬಿಡುಗಡೆ ಮಾಡಿದೆ. ಆದರೆ ಇಲ್ಲಿ ಕೇಂದ್ರ ಸರ್ಕಾರ ಆ ರೀತಿ ಯಾವುದೇ ಹಣವನ್ನು ಬಿಡುಗಡೆ ಮಾಡಿಲ್ಲ.

ಕೇವಲ ಭಾಷಣದಿಂದ ಕೊರೊನಾ ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ನಿರ್ಭಯಾ ಪ್ರಕರಣದ ಆರೋಪಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ವಿಷಯದ ಬಗ್ಗೆ ಕೂಡಾ ಪ್ರತಿಕ್ರಿಯೆ ನೀಡುತ್ತಾ, ಕೊನೆಗೂ ನ್ಯಾಯ ಸಿಕ್ಕಿದೆ. ಅತ್ಯಾಚಾರ ಮಾಡುವ ಯಾರಿಗೇ ಆಗಲಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಅವರು ಹೇಳಿದ್ದಾರೆ. ನಿರ್ಭಯಾ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿರುವುದನ್ನು ತಾನು ಸ್ವಾಗತಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here