ಸದಾ ಒಂದಿಲ್ಲೊಂದು ಕಾರಣದಿಂದ ಸರ್ಕಾರದ ವಿರುದ್ಧ ಗುಡುಗುವ ಮಾಜಿ ಸಿಎಂ ಸಿದ್ಧರಾಮಯ್ಯನವರು ಇದೀಗ ಮತ್ತೊಮ್ಮೆ ಸರ್ಕಾರದ ವಿರುದ್ಧ ಮತ್ತೊಮ್ಮೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿ ಅವರು ಅಖಿಲ ಭಾರತ ಕೈಮಗ್ಗ ಮಂಡಳಿ ರದ್ದು ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿರುವುದನ್ನು ವಿರೋಧಿಸುತ್ತಾ ಈ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿ ಟ್ವಿಟರ್ ನಲ್ಲಿ ಟ್ವೀಟ್ ಮಾಡಿತ್ತಾ, ಆತ್ಮ ನಿರ್ಭರದ ಮುಖವಾಡ ಕಳಚಿ ಬಿದ್ದಿದೆ ಎಂದು ಸರ್ಕಾರವನ್ನು ಕಟುವಾದ ಶಬ್ದಗಳಿಂದ ಟೀಕೆ ಮಾಡಿದ್ದಾರೆ.

ಸಿದ್ಧರಾಮಯ್ಯನವರು ತಮ್ಮ ಟ್ವೀಟ್ ನಲ್ಲಿ “ಅಖಿಲ ಭಾರತ ಕೈಮಗ್ಗ‌ ಮಂಡಳಿಯನ್ನು ರದ್ದುಪಡಿಸುವ ಮೂಲಕ‌ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ’ದ ಮುಖವಾಡ ಕಳಚಿಬಿದ್ದಿದೆ.‌ ನೀತಿ ನಿರೂಪಣೆ,‌‌ ಕಾರ್ಯಕ್ರಮಗಳ ಮೇಲುಸ್ತುವಾರಿ‌‌ ಮತ್ತು‌ ಕುಂದುಕೊರತೆಗಳ ನಿವಾರಣೆಯ‌ ಕೆಲಸ ಮಾಡುತ್ತಾ, ಕೇಂದ್ರ ಸರ್ಕಾರ ಮತ್ತು ನೇಕಾರರ ನಡುವೆ ಕೊಂಡಿಯಂತಿದ್ದ ಮಂಡಳಿ ರದ್ದತಿ ಖಂಡನೀಯ” ಎಂದು ಬರೆದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here