ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಮಾನ್ಯ ಸಿದ್ದರಾಮಯ್ಯನವರು ಕಳೆದ ಕೆಲವು ದಿನಗಳ ಹಿಂದೆ ಅವರ ಹೂಬ್ಲೋಟ್ ವಾಚ್ ವಿಚಾರ ಮುನ್ನೆಲೆಗೆ ಬಂದ ಕಾರಣ, ಆ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅವರು ಅದರ ಬಗ್ಗೆ ಮಾತನಾಡುತ್ತಾ ಅದು ಮುಗಿದು ಹೋದ ಕಥೆ ಮತ್ಯಾಕೆ? ಎನ್ನುತ್ತಲೇ ನಾನು ಯಡಿಯೂರಪ್ಪರ ಹಳೆ ಕೇಸ್ ಬಗ್ಗೆ ಮಾತಾಡ್ಲಾ? ಎನ್ನುವ ಮೂಲಕ ಹೂಬ್ಲೋಟ್ ವಾಚ್ ಬಗ್ಗೆ ಮಾತನಾಡಿದ್ದ ಬಿಜೆಪಿ ಎನಾಯಕರಿಗೆ ಸಿದ್ದರಾಮಯ್ಯನವರು ತಮ್ಮ ಮಾತಿನ ಮೂಲಕ ತಿರುಗೇಟು ನೀಡಿದ್ದಾರೆ.

ಅವರು ಇಂದು ಮೈಸೂರಿನಲ್ಲಿ ಮಾದ್ಯಮಗಳ ಜೊತೆ ಮಾತನಾಡುವ ಸಂದರ್ಭದಲ್ಲಿ ಆ ವಾಚ್ ವಿಚಾರ ಮುಗಿದಿದೆ, ನಾನು ಸರ್ಕಾರಕ್ಕೆ ಅದನ್ನು ವಾಪಸ್ಸು ಕೊಟ್ಟಿದ್ದೇ‌ನೆ. ಅಲ್ಲದೇ ಅದಕ್ಕೆ ಎಸಿಬಿ ತನಿಖೆ ಕೂಡಾ ನಡೆಸಿ ಕ್ಲೀನ್ ಚಿಟ್ ಸಿಕ್ಕಿದೆ ಎಂದು ಹೇಳಿದ್ದಾರೆ. ಅವರು ಈ ಸಂದರ್ಭದಲ್ಲಿ ನಾನೇನು ವಾಚನ್ನು ಸರ್ಕಾರದ ಹಣದಿಂದ ತೆಗೆದುಕೊಂಡಿದ್ದನಾ? ಅಥವಾ

ಸರ್ಕಾರದಿಂದ ಲೂಟಿ ಮಾಡಿದ ದುಡ್ದಿನಿಂದ ವಾಚ್ ಖರೀದಿ ಮಾಡಿದ್ದೆನಾ? ಯಾರೋ ಅದನ್ನು ಕೊಟ್ಟಿದ್ದರು, ಅದಕ್ಕೆ ಅವರು ಅಫಿಡೇವಿಟ್ ನೀಡಿದ್ದಾರೆ. ಈಗ ಆ ವಿಷಯವನ್ನು ಮತ್ತೆ ಏಕೆ ತೆಗೆದಿದ್ದಾರೆ. ಜನರನ್ನು ದಾರಿ ತಪ್ಪಿಸುವ ಕೆಲಸ ಇದು ಎಂದು ಅಸಮಾಧಾನ ಹೊರಹಾಕಿರುವ ಸಿದ್ಧರಾಮಯ್ಯನವರು, ನಾನು ವಾಚ್ ಪ್ರಕರಣದ ಬಗ್ಗೆ ಮಾತನಾಡೋಲ್ಲ ಎಂದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here