ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯನವರು ಮಾತನಾಡುತ್ತಾ ಒಂದು ಹೇಳಿಕೆಯನ್ನು ನೀಡಿದ್ದು, ಅವರ ಈ ಹೇಳಿಕೆ ಎಲ್ಲರ ಗಮನವನ್ನು ಸೆಳೆದಿದೆ. ಸಿದ್ಧರಾಮಯ್ಯನವರು ಮಾತನಾಡುತ್ತಾ,ಓದುವ ದಿನಗಳಲ್ಲಿ ನಾನು ಒಬ್ಬ ಆ್ಯವರೇಜ್ ಸ್ಟುಡೆಂಟ್ ಆಗಿದ್ದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ನಾನು ಆಗ ಶೇಕಡಾ 50 ರಿಂದ ಶೇಕಡಾ 70 ಅಂಕ ಅಷ್ಟೇ ಪಡೆಯುತ್ತಿದ್ದೆ. ಆದರೆ ನೋಡಿ ನಾನು ಮುಖ್ಯಮಂತ್ರಿ ಆಗಲಿಲ್ವಾ? ಎಂದು ಹೇಳಿದ್ದಾರೆ. ಅಲ್ಲದೆ ಜೀವನದಲ್ಲಿ ಯಶಸ್ಸನ್ನು ಪಡೆಯಲು ಅಗತ್ಯವಾದ ಅಂಶಗಳು ಯಾವುದು? ಎಂಬುದನ್ನು ಕೂಡಾ ಅವರು ವಿವರಿಸಿ ಹೇಳಿದ್ದಾರೆ.

ಸಿದ್ಧರಾಮಯ್ಯನವರು ಮಾತನಾಡುತ್ತಾ ಯಶಸ್ಸನ್ನು ಪಡೆಯಲು ಬದುಕಿನಲ್ಲಿ ಛಲ ಮುಖ್ಯ ಎಂದು ಹೇಳಿದ್ದು, ಕಷ್ಟ ಪಟ್ಟವರು ಮಾತ್ರ ಜೀವನದಲ್ಲಿ ಮೇಲೆ ಬರಲು ಸಾಧ್ಯವೆಂದು ಯಶಸ್ಸಿನ ಮೂಲ ಮಂತ್ರ ಏನೆಂಬುದನ್ನು ಅವರು ಹೇಳಿದ್ದಾರೆ. ಬಾದಾಮಿ ನಗರದಲ್ಲಿ ಇಂದು ನಡೆದಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿದ್ಧರಾಮಯ್ಯನವರು ಈ ಮೇಲಿನಂತೆ ಮಾತನಾಡಿದ್ದಾರೆ. ಹಾವೆ ಅವರು ತಮ್ಮ ಮಾತು ಮುಂದುವರೆಸಿ ಕೆಲವರು ಸಿದ್ದರಾಮಯ್ಯ ಯಾಕೆ ಸಿಎಂ ಎಂದರೆ ಅದು ಅವರ ಹಣೆಬರಹದಲ್ಲಿತ್ತು ಅಂತ ಹೇಳುತ್ತಾರೆ. ಆದರೆ ನನ್ನ ತಮ್ಮ ಸಿಎಂ ಆಗಬಾರದು ಅಂತ ಬರೆದಿತ್ತಾ? ಅದೇ ಸುಳ್ಳು ಎಂದಿದ್ದಾರೆ.

ಅವರು ಮಾತನಾಡುತ್ತಾ ಯಾರ ಹಣೆಬರಹವನ್ನು ಯಾರೂ ಬರೆಯೋದಿಲ್ಲ. ಈ ಸಮಾಜದಲ್ಲಿ ಬುದ್ಧಿವಂತರು ಅನ್ನಿಸಿಕೊಂಡವರು ಈ ತರ ಉಳಿದವರನ್ನು ನಂಬಿಸಿದ್ದಾರೆ ಅಷ್ಟೇ. ಇಂದಿನ ಸಮಾಜದಲ್ಲಿ ಜನರನ್ನು ದಾರಿ ತಪ್ಪಿಸುವವರು ಇದ್ದಾರೆ. ಆದರೆ ನೀವು ಹುಷಾರಾಗಿರಬೇಕು ಎಂದು ಸಿದ್ಧರಾಮಯ್ಯನವರು ಒಂದು ಸಲಹೆಯನ್ನು ಕೂಡಾ ನೀಡಿದ್ದಾರೆ. ಸಿದ್ಧರಾಮಯ್ಯನವರು ಹೇಳಿದ ಈ ಮಾತುಗಳು ಅಕ್ಷರಶಃ ಸತ್ಯ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here