ಧರ್ಮಸ್ಥಳದ ಶಾಂತಿವನದಲ್ಲಿ ನಡೆದ ಮಾತುಕತೆಯ ವೀಡಿಯೋ ಬಗ್ಗೆ ಇದೇ ಮೊದಲ ಬಾರಿಗೆ ಮಾದ್ಯಮಗಳ ಮುಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ.ನಾನು ಲೋಕಾಭಿರಾಮವಾಗಿ ಮಾತನಾಡುವ ಸಮಯದಲ್ಲಿ ಯಾರೋ ಕಿಡಿಕೇಡಿಗಳು ಕದ್ದು ಮುಚ್ಚಿ ವೀಡಿಯೋ ಮಾಡಿದ್ದಾರೆ.ನನ್ನ ಹೇಳಿಕೆಗಳನ್ನು ಪೂರ್ತಿಯಾಗಿ ವೀಡಿಯೋ ಮಾಡಿಲ್ಲ ಅದರಲ್ಲಿ ನಾನು ಮಾತನಾಡಿದ ವಿಷಯಗಳು ಪೂರ್ತಿಯಾಗಿ ತಿಳಿಯದೇ ಅದರ ಬಗ್ಗೆ ಮಾತನಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ನಾನು ಬಿಜೆಪಿ ಕೋಮುವಾದ ಪಕ್ಷ ಯಾವುದೇ ಕಾರಣಕ್ಕೂ ಬಿಜೆಪಿ ಅಂತಹ ಕೋಕುವಾದ ಪಕ್ಷವು ಅಧಿಕರ ಮಾಡಲು ಬಿಡಬಾರದು ಎಂಬ ಉದ್ದೇಶದಿಂದಲೇ ಜೆಡಿಎಸ್ ಜೊತೆ ಕೈ ಜೋಡಿಸಿ ಸಮ್ಮಿಶ್ರ ಸರ್ಕಾರ ರಚಿಸಿದ್ದೇವೆ

ಎಂದು ಸಿದ್ದರಾಮಯ್ಯ ಅವರು ನಮಗೆ ಕುಮಾರಸ್ವಾಮಿ ಅವರ ಮೇಲೆ ಯಾವುದೇ ಮುನಿಸು ಇಲ್ಲ.ನಮಗೆ ಈ ಹಿಂದೆ ನಮ್ಮ ಸರ್ಕಾರ ಜಾರಿಗೆ ತಂದಿರುವ ಅನ್ನ ಭಾಗ್ಯ ,ಕ್ಷೀರ ಭಾಗ್ಯ ,ಶಾಧಿ ಭಾಗ್ಯ ಅಂತಹ ಜನಪ್ರಿಯ ಯೋಜನೆಗಳನ್ನು ಮುಂದುವರಿಸಬೇಕು ನಮ್ಮ ಸರ್ಕಾರ ಸಾಕಷ್ಟು ಅಭಿವೃದ್ಧಿ ಪರ ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳನ್ನು ಮುಂದುವರಿಸಬೇಕೆಂದು ತಿಳಿಸಿದ್ದೇನೆ ಎಂದರು.ಇದೇ ವೇಳೆ ಸಾಲ ಮನ್ನಾ ಮಾಡುವುದಾದರೆ ಸಂತೋಷ ನಾನ್ಯಾಕೆ ಅದನ್ನು ಬೇಡ ಅನ್ನಲಿ ರೈತರಿಗೆ ಅನುಕೂಲ ಆಗುವ ಕೆಲಸಗಳಿಗೆ ನಾನಾಗಲಿ ನಮ್ಮ ಪಕ್ಷವಾಗಲಿ ವಿರೋಧ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.ಇಂದು ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅವರು ವೀರಪ್ಪ ಮೊಯ್ಲಿ ,ಜಿ ಪರಮೇಶ್ವರ್ ಮತ್ತು ಡಿಕೆ ಶಿವಕುಮಾರ್ ಅವರ ಜೊತೆ

ಚರ್ಚಿಸಿ ನಮ್ಮ ಸರ್ಕಾರದ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಕೈ ಬಿಡಬೇಡಿ ಎಂದು ಹೇಳಿದ್ದಾರೆ ಎಂದೂ ತಿಳಿದುಬಂದಿದೆ.ಪರಮೇಶ್ವರ್ ಮತ್ತು ಡಿಕೆ ಶಿವಕುಮಾರ್ ಅವರಿಗೆ ಸಿದ್ದರಾಮಯ್ಯ ಅವರು ಈ ರೀತಿ ಹೇಳಿದ್ದು ಯಾವುದೇ ಕಾರಣಕ್ಕು ಕಾಂಗ್ರೆಸ್‌ ಸರ್ಕಾರದ ಯೋಜನೆಗಳನ್ನು ಕೈಬಿಡಬಾರದು ಒಂದು ವೇಳೆ ನೀವು ಸರ್ಕಾರ ಯೋಜನೆಗಳಿಗೆ ತಿಲಾಂಜಲಿ ಇಟ್ಟರೆ ಈಗ ನಾವು ಏನೇ ಉತ್ತಮ ಕಾರ್ಯ ಜಾರಿಗೆ ತಂದರೂ ಅದರ ಕ್ರೆಡಿಟ್ ಜೆಡಿಎಸ್ ಗೆ ಹೋಗಲಿದೆ ಎಂದು ಸಿದ್ದರಾಮಯ್ಯ ವರು ಅವರು ಕಾಂಗ್ರೆಸ್ ಸಭೆಯಲ್ಲಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

Photos credit :- DK Shivakumar Facebook Page

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here