ನಿನ್ನೆ ಮೈತ್ರಿ ಸರ್ಕಾರದ 13 ಶಾಸಕರು ರಾಜೀನಾಮೆ ನೀಡಿದಕ್ಕೆ ಸಿದ್ದರಾಮಯ್ಯನವರು ಇಂದು ಕೂಲ್​ ಆಗಿಯೇ ರಿಯಾಕ್ಟ್​ ಮಾಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ,‘’ 13 ಶಾಸಕರು ರಾಜೀನಾಮೆ ಕೊಟ್ಟಿರೋದ್ರಿಂದ ಸರ್ಕಾರಕ್ಕೆ ಏನೂ ಆಗಲ್ಲ. ಸಾಕಷ್ಟು ಶಾಸಕರ ಜೊತೆ ಮಾತಾಡಿದ್ದೇವೆ. ಸಿಎಂ ವಾಪಸ್ ಬಂದ ನಂತರ ಮತ್ತೆ ಮಾತುಕತೆ ಮಾಡಿ ಅತೃಪ್ತರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡ್ತೇವೆ. ರಾಜೀನಾಮೆ ನೀಡಿರುವ ಅಷ್ಟು ಶಾಸಕರು ನಮ್ಮ ಜೊತೆಯೇ ಇದ್ದರು. ಹೀಗ್ಯಾಕೆ ಮಾಡಿದ್ರೋ ಗೊತ್ತಿಲ್ಲ.

ರಾಮಲಿಂಗಾರೆಡ್ಡಿಗೆ ಸಚಿವ ಸಂಪುಟದಲ್ಲಿ ಅವಕಾಶ ಕೊಡುವ ಬಗ್ಗೆಯೂ ಹೇಳಿದ್ದೆ. ಆದರೆ ಅವರೂ ರಾಜೀನಾಮೆ ನೀಡಿದ್ದಾರೆ. ಪಕ್ಷ ಒಡೆಯುವ ಕೆಲಸ ಮಾಡುತ್ತಿರುವವರು ಬಿಜೆಪಿಯವರೇ. ಇದಕ್ಕೆಲ್ಲ ಕಾರಣ ಅವರೇ’’ ಎಂದು ಸಿದ್ದುಆರೋಪಿಸಿದ್ದಾರೆ.ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಂದಿನ ಮುಖ್ಯಮಂತ್ರಿಯಾಗ್ತಾರಾ ಅನ್ನೋ ಪ್ರಶ್ನೆಗೆ ನಗರದಲ್ಲಿ ಸುದ್ದಿಗಾರರಿಗೆ ಉತ್ತರಿಸಿದ ಸಿದ್ದರಾಮಯ್ಯ, ಖರ್ಗೆ ಮುಖ್ಯಮಂತ್ರಿ ಆಗಲು ಸಿಎಂ ಕುರ್ಚಿ ಖಾಲಿ ಎಲ್ಲಿದೆ? ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಯಾರು ಹೇಳಿದ್ದಾರೆ.

ಯಾರಾದರೂ ನಿಮಗೆ ಹೇಳಿದ್ದಾರಾ ಎಂದು ಪ್ರಶ್ನಿಸಿದ ಮಾಜಿ ಸಿಎಂ, ರಾಮಲಿಂಗಾ ರೆಡ್ಡಿ ಅವರಿಗೆ ಎರಡನೇ ಬಾರಿ ಮಂತ್ರಿ ಮಾಡುತ್ತಿದ್ದೆವು. ಫೋನ್ ಅಲ್ಲಿ ಸಿಎಂ ಜೊತೆ ಮಾತನಾಡಿದ್ದೀನಿ. ಇಂದು ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದಾರೆ ಎಂದರು.ಶಾಸಕರನ್ನ ಸಂಪರ್ಕ ಮಾಡುವ ಕೆಲಸ ಮಾಡುತ್ತಿದ್ದೇನೆ. ಈಗಾಗಲೇ ಐದಾರು ಜನರ ಜೊತೆ ಸಂಪರ್ಕದಲ್ಲಿದ್ದೇನೆ. ಅವರ ಜೊತೆ ಈಗಾಗಲೇ ಮಾತಾಡಿದ್ದೇನೆ. ಬಿಜೆಪಿಯಲ್ಲಿ ಇರುವವರೆಲ್ಲ ನನ್ನ ಸ್ನೇಹಿತರೇ ಆಗಿದ್ದಾರೆ. ಕಾಂಗ್ರೆಸ್ ನಲ್ಲಿ ಇರುವವರೆಲ್ಲಾ ನನ್ನ ಆಪ್ತ ಸ್ನೇಹಿತರು ಎಂದಿದ್ದಾರೆ.ಜನರ ತೀರ್ಪು ಧಿಕ್ಕರಿಸಿದ್ರೆ ಜನರೇ ಪಾಠ ಕಲಿಸ್ತಾರೆ. ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಎಲ್ಲರೂ ಆಪ್ತರೇ, ಜೆಡಿಎಸ್ ಅವರ ಬಿಟ್ಟು ಎಲ್ಲರೂ ನಮ್ಮ ಜೊತೆ ಇದ್ದರು ಎಂದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here