ನಿನ್ನೆ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದೆ‌.‌ ಪಿಯುಸಿ ಫಲಿತಾಂಶದ ಕುರಿತಾಗಿ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕನೂ ಆಗಿರುವ ಮಾನ್ಯ ಸಿದ್ಧರಾಮಯ್ಯನವರು ಈ ವಿಷಯವಾಗಿ ಮಾತನಾಡಿದ್ದು, ಪಿಯುಸಿ ಫಲಿತಾಂಶವು ಕುಸಿಯಲು ಉಪನ್ಯಾಸಕರ ಕೊರತೆ ಇದೆ ಎಂಬುದು ಕೂಡಾ ಸ್ಪಷ್ಟ ಎಂದು ಹೇಳಿದ್ದಾರೆ. ಇದರ ಹೊಣೆಯನ್ನು ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವ ಮಾನ್ಯ ಶಿಕ್ಷಣ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ವಹಿಸಿಕೊಳ್ಳಬೇಕಾಗುವುದು ಎಂದು ಹೇಳಿದ್ದಾರೆ ಸಿದ್ಧರಾಮಯ್ಯನವರು. ‌

ಈ ವಿಷಯವಾಗಿ ಮಾಜಿ ಸಿಎಂ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಒಂದನ್ನು ಮಾಡುವ ಮೂಲಕ ವಿಷಯವನ್ನು ತಿಳಿಸಿದ್ದಾರೆ. ಸಿದ್ಧರಾಮಯ್ಯನವರು ತಮ್ಮ ಟ್ವೀಟ್ ನಲ್ಲಿ “ಪಿಯುಸಿ ಉಪನ್ಯಾಸಕರ ಹುದ್ದೆಗೆ 2018ರಲ್ಲಿ ಬರೆದಿದ್ದ ಪರೀಕ್ಷೆಯ‌ಲ್ಲಿ ಉತ್ತೀರ್ಣರಾದ 1298 ಅಭ್ಯರ್ಥಿಗಳ ಆಯ್ಕೆಪಟ್ಟಿ ಅಂತಿಮವಾಗಿತ್ತು.
ಆದರೆ ಸುರೇಶ್ ಕುಮಾರ್ ಮಧ್ಯೆಪ್ರವೇಶಿಸಿ‌‌ ಸ್ಥಳ ನಿಯುಕ್ತಿ ಕೌನ್ಸಿಲಿಂಗ್ ಪ್ರಕ್ರಿಯೆ ಸ್ಥಗಿತಗೊಳಿಸಿರುವುದು ಅಭ್ಯರ್ಥಿಗಳಿಗಷ್ಟೇ ಅಲ್ಲ ವಿದ್ಯಾರ್ಥಿಗಳಿಗೂ ಮಾಡಿರುವ ಅನ್ಯಾಯ” ಎಂದು ತಿಳಿಸಿದ್ದಾರೆ.

ಸಿದ್ಧರಾಮಯ್ಯನವರು ಈ ಮೂಲಕ ಈ ಬಾರಿ ಪಿಯುಸಿ ಫಲಿತಾಂಶ ಕುಸಿತಕ್ಕೆ ಕಾರಣ ಕೇವಲ ವಿದ್ಯಾರ್ಥಿಗಳಲ್ಲ, ಬದಲಿಗೆ ಉಪನ್ಯಾಸಕರ ನೇಮಕಾತಿ ನಡೆಯದೆ, ಉಪನ್ಯಾಸಕರ ಕೊರತೆ ಕೂಡಾ ಒಂದು ಪ್ರಮುಖ ಕಾರಣವೆಂದು ಹೇಳುತ್ತಾ, ಈ ವಿಷಯದಲ್ಲಿ ಶಿಕ್ಷಣ ಸಚಿವರು ತಮ್ಮ‌ ಹೊಣೆಯನ್ನು ವಹಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ. ಇದಕ್ಕೆ ಮಾನ್ಯ ಶಿಕ್ಷಣ ಸಚಿವರ ಉತ್ತರ ಏನಾಗಲಿದೆ ಎಂಬುದು ಮಾತ್ರ ಇನ್ನೂ ಬಂದಿಲ್ಲ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here