ರಾಜ್ಯ ಸರ್ಕಾರದ ಆಡಳಿತದಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ಧರಾಮಯ್ಯನವರೇ ಸೂಕ್ತವಾದ ವ್ಯಕ್ತಿ ಎಂದಿದ್ದಾರೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು. ಸಿದ್ಧರಾಮಯ್ಯನವರಿಗಿಂತ ಯೋಗ್ಯರಾದ ನಾಯಕ ಮತ್ತೊಬ್ಬರು ತಮ್ಮ ಪಕ್ಷದಲ್ಲಿ ಸಿಗುವುದಿಲ್ಲ ‌ಎಂದು ಮಾಜಿ ಸಿಎಂ ಸಿದ್ಧರಾಮಯ್ಯನವರನ್ನು ಹೊಗಳಿದ್ದಾರೆ ರಮೇಶ್ ಕುಮಾರ್. ಕೋಲಾರದ ಸುಗಟೂರು ಗ್ರಾಮದಲ್ಲಿ ಮಾತನಾಡಿದ ರಮೇಶ್ ಕುಮಾರ್ ಅವರು ನಮ್ಮ ಪಕ್ಷದಲ್ಲಿ ವಿರೋಧ ಪಕ್ಷದ ನಾಯಕನನ್ನಾಗಿ ಯಾರನ್ನು ಆಯ್ಕೆ ಮಾಡಬೇಕೆಂಬ ವಿಚಾರದಲ್ಲಿ ಇಲ್ಲಿಯವರೆಗೂ ಯಾವುದೇ ಚರ್ಚೆ ನಡೆದಿಲ್ಲವೆಂದು, ಅಂತಹ ಮಾತುಗಳು ಕೇವಲ ಊಹಾಪೋಹಗಳು ಎಂದು ಅವರು ಹೇಳಿದ್ದಾರೆ.

ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ ತಾನು ಮತ್ತೆ ಕಾಂಗ್ರೆಸ್ ನ ಸದಸ್ಯತ್ವ ಪಡೆದಿದ್ದು, ಪಕ್ಷ ತನಗೆ ನೀಡುವ ಕಾರ್ಯವನ್ನು ಮಾಡಿಕೊಂಡು ಹೋಗುವೆನೆಂದು ತಮ್ಮ ಮುಂದಿನ ನಡೆಯ ಬಗ್ಗೆ ಅವರು ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ವಿಪಕ್ಷ ಪಕ್ಷದ ನಾಯಕನಾಗಿ ಕಾರ್ಯ ಮಾಡಲು ಎಲ್ಲರಿಗಿಂತ ಯೋಗ್ಯ ವ್ಯಕ್ತಿ ಎಂದರೆ ಅದು ಸಿದ್ಧರಾಮಯ್ಯನವರು ಮಾತ್ರ ಎಂದಿರುವ ರಮೇಶ್ ಕುಮಾರ್ ಅವರು, ಪಕ್ಷವನ್ನು ಬಲಪಡಿಸಲು ಸಿದ್ಧರಾಮಯ್ಯನವರ ಸಮರ್ಥ ನಾಯಕತ್ವದ ಅಗತ್ಯವಿದೆ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ನೂತನ ಸರ್ಕಾರದ ಬಗ್ಗೆ ಮಾತನಾಡಿದ ಅವರು ಯಡಿಯೂರಪ್ಪನವರು ಒಬ್ಬರೇ ರಾಜ್ಯವನ್ನು ಅಭಿವೃದ್ಧಿ ಮಾಡುವುದಾದರೆ ಮಾಡಲಿ, ಅವರಿಗೆ ಟಿಪ್ಪು ಜಯಂತಿ ಹಿಡಿಸಲಿಲ್ಲ ಅದಕ್ಕೆ ರದ್ದು ಮಾಡಿದ್ದಾರೆ. ಕಾನೂನು ಪ್ರಕಾರವಾಗಿ ಅವರು ಅಧಿಕಾರವನ್ನು ಪಡೆದಿದ್ದು ಅದರ ಬಗ್ಗೆ ನಾನೇನು ಮಾತನಾಡುವುದಿಲ್ಲ. ಆಗುತ್ತಿರುವ ಬೆಳವಣಿಗೆಗಳನ್ನು ಜನರೇ ನೋಡುತ್ತಿದ್ದಾರೆ, ಬುದ್ಧಿಬಂತರಾದ ಜನರು ಕಾಲಕಾಲಕ್ಕೆ ಅವರೇ ಸರಿಯಾದ ನಿರ್ಧಾರ ಕೈಗೊಳ್ಳುವರು ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here