ರಾಜಕೀಯ ಎಂಬುದು ಹೀಗೇ ಒಮ್ಮೆ ಹೇಳಿದ ಮಾತಿಗೆ ಮರುಕ್ಷಣದಲ್ಲೇ ಬೆಲೆ ಕಳೆದುಕೊಂಡಡಿರುತ್ತದೆ.ಇದು ಎಲ್ಲಾ ಪಕ್ಷಗಳ ನಾಯಕರ ಸ್ಥಿತಿ ಗತಿ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜೆಡಿಎಸ್ ನ ದೇವೇಗೌಡರ ಮತ್ತು ಕುಮಾರಸ್ವಾಮಿ ಅವರ ಮೇಲೆ ವಾಗ್ದಾಳಿ ನಡೆಸುತ್ತಿದ್ದ ಸಿದ್ದರಾಮಯ್ಯ ಅವರು ನೆನ್ನೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಬಂತು.ಇನ್ನು ಸ್ಪಷ್ಟ ಬಹುಮತ ಸಿಗದಿದ್ದರೆ ವಿರೋಧ

ಪಕ್ಷದಲ್ಲಿ ಕುಳಿತುಕೊಳ್ಳುತ್ತೆವೆ ವಿನಃ ಯಾರೊಂದಿಗೂ ಮೈತ್ರಿ ಇಲ್ಲ ಎಂದಿದ್ದ ಹೆಚ್ ಡಿ ಕೆ ಈಗ ಕಾಂಗ್ರೆಸ್ ಬೆಂಬಲ ಪಡೆದರು.ಈ ವಿಷಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿವೆ‌.ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಸರ್ಕಾರ ರಚನೆಗೆ ಬೇಕಾದಷ್ಟು ನಂಬರ್ ಸಿಗಲಿಲ್ಲ. ಆಡಳಿತಾರೂಢ ಕಾಂಗ್ರೆಸ್‍ಗೆ ತೀವ್ರ ಮುಖಭಂಗವಾದರೂ, ಬಿಜೆಪಿಗೆ ಬಹುಮತ ಸಿಕ್ಕಿಲ್ಲವಲ್ಲ ಅನ್ನೋದು ಕಾಂಗ್ರೆಸ್ ಪಾಲಿಗೆ ನಿರಾಳ. ಆದರೆ, ರಾಷ್ಟ್ರೀಯ ಪಕ್ಷಗಳು ಎಷ್ಟೇ ಬಲಶಾಲಿಯಾದರೂ ಪ್ರಾದೇಶಿಕ ಪಕ್ಷಗಳಿಗೆ ತನ್ನದೇ

ಆದ ಪವರ್ ಇದೆ ಅನ್ನೋದು ಸಾಬೀತಾಗಿರೋದ್ರಿಂದ ಜೆಡಿಎಸ್ ಈಗ ಬೀಗ್ತಿದೆ.ಫಲಿತಾಂಶದಲ್ಲಿ ಕಿಂಗ್ ಆಗದಿದ್ದರೂ ಸರ್ಕಾರ ರಚನೆ ವಿಷಯದಲ್ಲಿ ಕಿಂಗ್‍ಮೇಕರ್ ಆಗಿದೆ. ಇನ್ನು, ಸಿದ್ದರಾಮಯ್ಯ ನೀಚ ಅಂತ ದೇವೇಗೌಡರೂ ಅಪ್ಪನಾಣೆ ಕುಮಾರಸ್ವಾಮಿ ಸಿಎಂ ಆಗಲ್ಲ ಅಂತ ಸಿದ್ದರಾಮಯ್ಯ ಅವರೂ ಬೈದಾಡಿಕೊಂಡಿದ್ದರು. ಆದ್ರೀಗ, ಕಾಲ ರಾಜಕೀಯ ನೋಡಿ ಒಂದು ಕಾಲದ ಗುರು-ಶಿಷ್ಯರಾದ ದೇವೇಗೌಡ್ರು-ಸಿದ್ದರಾಮಯ್ಯ ಅಷ್ಟು ಕೆಸರೆರಚಾಡಿಕೊಂಡರೂ ಈಗ ಒಂದೇ ಮುಖಾಮುಖಿ ಆಗ್ತಿದ್ದಾರೆ.

ಎಲ್ಲಾ ಸುಸೂತ್ರವಾದರೆ ಪ್ರಮಾಣ ವಚನ ಕಾರ್ಯಕ್ರಮದಲ್ಲೂ ಒಂದೇ ವೇದಿಕೆಯಲ್ಲಿ ಇಬ್ಬರೂ ಕಾಣಿಸಿಕೊಳ್ಳಲಿದ್ದಾರೆ.ಇತ್ತ ಬಿಜೆಪಿ ಸರ್ಕಾರ ರಚನೆಗೆ ಎರಡು ದಿನಗಳ ಅವಕಾಶ ಕೋರದಿ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ತಮ್ಮ ಪಕ್ಷದ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲು ರೆಸಾರ್ಟ್ ರಾಜಕೀಯದ ಮೊರೆ ಹೋಗಬಹುದು. ಬಿಜೆಪಿ ಬಹುಮತ ಸಾಬೀತು ಮಾಡೋವರೆಗೆ ತಮ್ಮ ಶಾಸಕರನ್ನು ಅವರಿಗೆ ಸಿಗದಂತೆ ನೋಡಿಕೊಳ್ಳುವಂತೆ ಮಾಡುವ ಸಾಧ್ಯತೆಗಳಿವೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here