ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕರಾದ ಎಸ್.ಎಂ.ಕೃಷ್ಣ ಅವರ ಅಳಿಯ ಕೆಫೆ ಕಾಫಿ ಡೆ ಸಂಸ್ಥಾಪಕ ಉದ್ಯಮಿ ಸಿದ್ಧಾರ್ಥ್ ಹೆಗ್ಗಡೆ ಅವರ ನಿಗೂಢ ಕಣ್ಮರೆ, ತದನಂತರ ಶವವಾಗಿ ಪತ್ತೆಯಾಗಿದ್ದು ಎಲ್ಲವೂ ಈಗ ಅನೇಕ ಅನುಮಾನಗಳನ್ನು ಹುಟ್ಟು ಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ಆರಂಭವಾಗಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎನಿಸಿದರೂ, ಅದೇ ಸಂದರ್ಧದಲ್ಲಿ ಕೆಲವು ವಿಷಯಗಳನ್ನು ಗಮನಿಸುವಂತೆ ಮಾಡಿದೆ. ಈಗ ಅವರದು ಆತ್ಮಹತ್ಯೆ ಅಲ್ಲ ಎನ್ನಲು ಕಾರಣವಾದ ಅನುಮಾನ ಹುಟ್ಟಿಸಿರುವ ವಿಷಯಗಳು ಯಾವುದು ಎನ್ನುವುದನ್ನು ತಿಳಿಯೋಣ.

ಮೊದಲನೆಯದಾಗಿ ಅವರ ಶವ ಪತ್ತೆಯಾದಾಗ ಅವರ ಟೀ ಶರ್ಟ್ ಹಾಗೂ ಬನಿಯನ್ ಇರಲಿಲ್ಲ. ಅವರು ನದಿಗೆ ಹಾರುವ ಮೊದಲು ಟೀ ಶರ್ಟ್ ಹಾಗೂ ಬನಿಯನ್ ತೆಗೆದು ಹಾರಿದ್ದರೆ ? ಶವ ಹಿನ್ನೀರಿನಲ್ಲಿ ಬಂದ ಕಾರಣ ಆ ಬಟ್ಟೆಗಳನ್ನು ಶಾರ್ಕ್ ಅಥವಾ ದೊಡ್ಡ ಮೀನುಗಳು ತಿನ್ನುವ ಅವಕಾಶವಿಲ್ಲ.
ಅವರು ಸೇತುವೆ ಮೇಲೆ ಇದ್ದಾಗ ರಾತ್ರಿ ಎಂಟು ಗಂಟೆ. ಆ ಸಮಯದಲ್ಲಿ ಅಲ್ಲಿ ವಾಹನ ದಟ್ಟಣೆ ಇರುತ್ತದೆ. ಅಲ್ಲದೆ ಪಾದಾಚಾರಿಗಳು ಕೂಡಾ ಓಡಾಡುತ್ತಿರುತ್ತಾರೆ. ಸಿದ್ಧಾರ್ಥ್ ಅವರು ತಮ್ಮ ಅಂಗಿ ಕಳಚಿ ನೀರಿಗೆ ಧುಮುಕುವುದನ್ನು ವಾಹನ ಸವಾರರಾಗಲೀ, ಪಾದಚಾರಿಗಳಾಗಲೀ ನೋಡಲಿಲ್ಲವೇ? ತಡೆಯಲಿಲ್ಲವೇ? ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಹಣೆಯಲ್ಲಿ ಗಾಯವಿದೆ, ಶವ ಕೊಳೆತ ಸ್ಥಿತಿಗೆ ಬಂದಿಲ್ಲ, ಶವ ನೀರು ತುಂಬಿ ಊದಿಕೊಂಡಿಲ್ಲ. ಕಾಲಿಗೆ ಧರಿಸಿದ ಶೂ ಕೂಡ ಕಳಚದೆ ಹಾಗೇ ಇತ್ತು. ಏಕೆಂದರೆ ಶರೀರ ಸಂಕುಚಿಸಿದಾಗ ಶೂ ತಾನೇ ಸಡಿಲವಾಗುತ್ತದೆ. ಆದರೆ ಅಂತಹ ಬದಲಾವಣೆಗಳಾಗಿರಲಿಲ್ಲ. ಎಲ್ಲದ್ದಕ್ಕಿಂತ ಮುಖ್ಯವಾಗಿ ಅವರ ಶವ ಪತ್ತೆಯಾಗುವವರೆಗೂ ಅವರ ಕುಟುಂಬಸ್ಥರು ಯಾರೂ ಸ್ಥಳಕ್ಕೆ ಬರದಿರುವುದು ಅನುಮಾನ ಹುಟ್ಟಿಸಿದೆ. ಕುಟುಂಬದ ಮುಖ್ಯಸ್ಥ ಕಾಣೆಯಾದರೂ ಎಂದರೆ ಸಾಮಾನ್ಯವಾಗಿ ಕುಟುಂಬ ಸದಸ್ಯರು ಆತಂಕದಿಂದ ತಾವೇ ಖುದ್ದು ರಂಗಕ್ಕೆ ಇಳಿಯುತ್ತಾರೆ. ಆದರೆ ಇಲ್ಲಿ ಅಂತಹ ಯಾವುದೇ ಆತಂಕ ಕಂಡು ಬಂದಿಲ್ಲ. ಈ ಎಲ್ಲಾ ವಿಷಯಗಳನ್ನು ಗಮನಿಸಿದ ಹಲವರು ಸಮಾಜಿಕ ಜಾಲತಾಣಗಳಲ್ಲಿ ಈ ವಿಷಯಗಳನ್ನು ಚರ್ಚೆ ಮಾಡುತ್ತಾ, ಸಿದ್ಧಾರ್ಥ್ ಅವರ ಸಾವು ಆತ್ಮಹತ್ಯೆ ಅಲ್ಲ ಎಂಬಂತೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here