ಬಹುದಿನಗಳ ಕನಸೊಂದು ನನಸಾಗುವ ಕಾಲ ಕೂಡಿ ಬರುತ್ತಿದೆ. ಸಿಗಂಧೂರು ಶ್ರೀ ಚೌಡೇಶ್ವರಿ ದೇವಿಯ ಭಕ್ತರಿಗೆ ಇದು ಬಹಳ ಖುಷಿಯ ವಿಚಾರ.ಮಾತ್ರವಲ್ಲ ಅಲ್ಲಿನ ಸುತ್ತಮುತ್ತಲ ಜನರ ಪಾಲಿಗೆ ಇದು ಜೀವನದ ಕನಸು ಎಂದೇ ಹೇಳಬಹುದು. ಅದೇನೆಂದರೆ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಳೆಬಾಗಿಲು-ಸಿಗಂದೂರು ಸಂಪರ್ಕ ಸೇತುವೆಗೆ ಕೇಂದ್ರ ಸರಕಾರ ಹಸಿರು ನಿಶಾನೆ ತೋರಿದೆ. ಇದೇ ಫೆಬ್ರವರಿ 19ರಂದು ಶಂಕು ಸ್ಥಾಪನೆಯೂ ನೆರವೇರಲಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಶಂಕು ಸ್ಥಾಪನೆ ಮಾಡಲಿದ್ದಾರೆ. ಈ ಮೂಲಕ ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಶರಾವತಿ ಹಿನ್ನೀರಿನಲ್ಲಿ ಸೇತುವೆ ನಿರ್ಮಾಣಕ್ಕೆ ಕಾಲ ಕೂಡಿ ಬಂದಿರುವುದು ಈ ಭಾಗದ ಜನರಲ್ಲಿ ಭಾರೀ ಸಂತೋಷಕ್ಕೆ ಕಾರಣವಾಗಿದೆ.

ಈ ಭಾಗದ ಮುಳುಗಡೆ ಸಂತ್ರಸ್ತರ ಬಹು ದಿನದ ಬೇಡಿಕೆ ಇದಾಗಿದೆ. ಇಲ್ಲಿನ ಜನರು ತಮ್ಮನ್ನು ಮುಳುಗಿಸಿಕೊಂಡು ರಾಜ್ಯಕ್ಕೆ ವಿದ್ಯುತ್ ನೀಡಿದರು. ದ್ವೀಪದಂತಿರುವ ತುಮರಿ, ಬ್ಯಾಕೋಡು ಭಾಗಕ್ಕೆ ಸಂಪರ್ಕಕ್ಕಾಗಿ ಎರಡು ಲಾಂಚ್ ಗಳನ್ನ ನೀಡಲಾಗಿದೆ. ಆದರೆ ಈ ಲಾಂಚ್ ಗಳು ಮಳೆಗಾಲದಲ್ಲಿ ಮಾತ್ರ ಸೇವೆಗೆ ಲಭ್ಯವಾಗುತ್ತವೆ. ಕೆಲವು ಬಾರಿ ಬೇಸಿಗೆಯಲ್ಲಿ ನೀರು ಕಡಿಮೆಯಾದರೆ ನಿಲ್ಲಿಸಬೇಕಾದ ಪರಿಸ್ಥಿತಿ ಅಥವಾ ಜನರನ್ನಷ್ಟೆ ಕರೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗುತ್ತದೆ. ಕತ್ತಲಾಗುತ್ತಿದ್ದಂತೆ ಲಾಂಚ್ ದಡ ಸೇರುವುದರಿಂದ ಇಲ್ಲಿನ ಜನರು ಬೇಗ ಮನೆ ಸೇರಬೇಕಿದೆ.ಇತ್ತಿಚ್ಚಿಗೆ ಇಲ್ಲಿನ ಚೌಡೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತರ ಪ್ರಮಾಣ ಹೆಚ್ಚಾಗುತ್ತಿದ್ದು, ಸ್ಥಳೀಯರ ಸೇವೆಗೆ ನಿಯೋಜನೆಯಾಗಿರುವ ಲಾಂಚ್ ಗಳಲ್ಲಿ ಸ್ಥಳವಿಲ್ಲದೆ ಕುರಿ ತುಂಬುವ ಹಾಗೆ ತುಂಬಿಕೊಂಡು ಹೋಗುತ್ತಿರುವ ಪರಿಸ್ಥಿತಿ ಕೂಡ ಇದೆ. ಕಳೆದ ವರ್ಷ ಇಲ್ಲಿನ ಜನರು ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಇಷ್ಟೆಲ್ಲಾ ಸಮಸ್ಯೆಗಳಿಗೆ ಪರಿಹಾರೋಪಾದಿಯಾಗಿ ಸೇತುವೆ ಮಾಡಲು ಮುಂದಾಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here