ಕನ್ನಡ ಬೆಳ್ಳಿ ತೆರೆ ಹಾಗೂ ಕಿರು ತೆರೆಯ ಹಿರಿಯ ಹಾಸ್ಯ ನಟ ಸಿಹಿಕಹಿ ಚಂದ್ರು ಅವರ ಮಗಳು ಹಿತಾ ಚಂದ್ರಶೇಖರ್ ಅವರಯ ಇಂದು ತಮ್ಮ ಗೆಳೆಯ ನಟ ಕಿರಣ್ ಶ್ರೀನಿವಾಸ್ ಜೊತೆ ವಿವಾಹ ಜೀವನಕ್ಕೆ ಅಡಿಯಿಡುವ ಮೂಲಕ ಹೊಸ ಜೀವನಕ್ಕೆ ಪ್ರವೇಶ ಮಾಡಿದ್ದಾರೆ. ಗುರು ಹಿರಿಯರು, ಬಂಧುಗಳು, ಮಿತ್ರರ ಸಮ್ಮುಖದಲ್ಲಿ ನಿಶ್ಚಯವಾಗಿದ್ದ ಶುಭ ಮುಹೂರ್ತದಲ್ಲಿ ಹಿತಾ ಅವರ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ ಕಿರಣ್ ಶ್ರೀ ನಿವಾಸ್ ಅವರು. ಸಂಪ್ರದಾಯ ಬದ್ಧವಾಗಿ ವಿವಾಹ ಅದ್ದೂರಿಯಾಗಿ ನಡೆಯಿತು. ಕಿರು ತೆರೆ ಹಾಗೂ ಬೆಳ್ಳಿತೆರೆಯ ಕಲಾವಿದರು ಮದುವೆಗೆ ಆಗಮಿಸಿ ನೂತರ ವಧು ವರನಿಗೆ ಶುಭ ಹಾರೈಸಿದ್ದಾರೆ.

ಕಿರಣ್ ಮತ್ತು ಹಿತಾ ಇಬ್ಬರು ಪರಸ್ಪರ ಪ್ರೀತಿಸಿದ್ದರು. ಮೇ ತಿಂಗಳಲ್ಲಿ ಹಿತಾ ಮತ್ತು ಕಿರಣ್ ಶ್ರೀನಿವಾಸ್ ಅವರ ನಿಶ್ಚಿತಾರ್ಥ ಕುಟುಂಬದ ಹಿರಿಯರ ಮುಂದೆ ನಡೆದಿತ್ತು. ವಿಶೇಷ ಎಂದರೆ ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ಅವರು ತಮ್ಮ ಪ್ರೀತಿಯ ವಿಚಾರದ ಬಗ್ಗೆ ಹೆಚ್ಚಾಗಿ ಎಲ್ಲೂ ಮಾತನಾಡಿರಲಿಲ್ಲ. ಅವರಿಬ್ಬರು ನಾವು ಸ್ನೇಹಿತರು ಎಂದು ಹೇಳುತ್ತಿದ್ದರು. ನಟಿ ಸೋನು ಗೌಡ ಅವರಿಬ್ಬರ ನಡುವಿನ ಪ್ರೇಮದ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ಮಾಡಿದ್ದರು. ಹಿತಾ ಮತ್ತು ಕಿರಣ್ ಅವರ ಮದುವೆ ಲವ್ ಕಮ್ ಅವೇಂಜ್ಡ್‌ ಮ್ಯಾರೇಜ್ ಆಗಿದೆ.

ಒಂಥರಾ ಬಣ್ಣಗಳಲ್ಲಿ ಸಿನಿಮಾದಲ್ಲಿ ಒಬ್ಬರಿಗೊಬ್ಬರು ಪರಿಚಯವಾದ ಹಿತಾ ಮತ್ತು ಕಿರಣ್ ಅವರ ನಡುವೆ ಸ್ನೇಹ ಮೂಡಿತ್ತು. ಈ ಸ್ನೇಹ ಪ್ರೇಮವಾಗಿ ಎರಡೂ ಕುಟುಂಬದವರಿಗೆ ವಿಷಯ ತಿಳಿಸಿ, ಅವರ ಸಮ್ಮತಿಯೊಂದಿಗೆ ಇಬ್ಬರು ಸಪ್ತಪದಿ ತುಳಿದಿದ್ದಾರೆ.
ಕಿರಣ್ 2008ರಲ್ಲಿ ‘ಹಾಗೇ ಸುಮ್ಮನೆ’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್ ಪ್ರವೇಶಿಸಿದರೆ, ಹಿತಾ ಅವರು ಕಾಲ್ ಕೆಜಿ ಪ್ರೀತಿ ಸಿನಿಮಾ‌ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು‌. ಕಿರಣ್ ಸಿನಿಮಾ ಜೊತೆಗೆ ಧಾರಾವಾಹಿಗಳಲ್ಲಿ ಕೂಡಾ ನಟಿಸಿದ್ದಾರೆ. ಹಿತಾ ಇತ್ತೀಚಿಗೆ ಬಂದ ಪ್ರೀಮಿಯರ್ ಪದ್ಮಿನಿಯಲ್ಲಿ ಒಂದು ಪ್ರಮುಖವಾದ ಪಾತ್ರವನ್ನು ವಹಿಸಿದ್ದರು.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here