ಜನರ ಆಶೀರ್ವಾದ ಹಾಗೂ ಜನರ ಬೆಂಬಲ ದೊರಕಿದರೆ ನಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗುವೆ ಎಂಬ ಆತಂಕಕಾರಿ ಹೇಳಿಕೆಯನ್ನು ಕೊಟ್ಟು ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದ್ದರು , ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು. ಆ ವಿಷಯಕ್ಕೆ ಸಂಬಂಧಿಸಿದಂತೆ ಹಲವು ವಾದಗಳು, ವಿವಾದಗಳು ನಡೆಯುತ್ತಿರವ ಬೆನ್ನಲ್ಲೇ , ಇನ್ನೂ ವಿಷಯ ಪೂರ್ತಿ ತಣ್ಣಗಾಗುವ ಮೊದಲೇ , ಪ್ರತಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಅವಸರ ಹಾಗೂ ಭರದಲ್ಲಿ, ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೀಡಿರುವ ಹೇಳಿಕೆಯೊಂದು ಈಗ ಎಲ್ಲರ ಗಮನ ಸೆಳೆದಿದೆ ಹಾಗೂ, ಇದು ಯಾವ ಬೆಳವಣಿಗೆಗೆ ಕಾರಣವಾಗುವುದೋ ಗೊತ್ತಿಲ್ಲ.

ಗುರುವಾರ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ ನಂತರ ಹೆಚ್.ಡಿ.ಕುಮಾರಸ್ವಾಮಿಯವರು, ಕರ್ನಾಟಕ ಭವನದ ಕಡೆ ಬಂದಿದ್ದಾರೆ. ಆ ಸಮಯಕ್ಕೆ ದೆಹಲಿ ವಿಮಾನ ನಿಲ್ದಾಣದಿಂದ ಬಂದ ಕಂದಾಯ ಸಚಿವ ದೇಶಪಾಂಡೆ ಕೂಡಾ ಮುಖ್ಯಮಂತ್ರಿ ಅವರ ಜೊತೆಗೆ ಕರ್ನಾಟಕ ಭವನ ತಲುಪಿದ್ದಾರೆ. ಅಲ್ಲಿ ಮುಖ್ಯಮಂತ್ರಿ ಅವರ ಬರುವಿಕೆಗಾಗಿ ಕಾದಿದ್ದ ಪತ್ರಕರ್ತರು ಸಿದ್ಧರಾಮಯ್ಯನವರು ನೀಡಿರುವ ಹೇಳಿಕೆಯ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರನ್ನು ಪ್ರಶ್ನೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ನೀಡಿದ ಉತ್ತರ ಯಾವ ತಾತ್ಪರ್ಯ ನೀಡುತ್ತದೆಂಬುದು ಮಾತ್ರ ಸರಿಯಾಗಿ ತಿಳಿದಿಲ್ಲ.

ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡುತ್ತಾ ಕುಮಾರಸ್ವಾಮಿ ಅವರು, ಹಿರಿಯರಾದ ಆರ್.ವಿ.ದೇಶಪಾಂಡೆ ಅವರು ಸಹಾ ಮುಖ್ಯಮಂತ್ರಿಗಳಾಗಬೇಕೆಂಬುದು ಹಲವರ ಬಯಕೆ, ಹಾಗೆಂದ ಮಾತ್ರಕ್ಕೆ ಅದನ್ನು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಆಗ ತಕ್ಷಣ ಮುಖ್ಯಮಂತ್ರಿ ಅವರು ತಮ್ಮ ಹೇಳಿಕೆಗೆ ಸಮರ್ಥನೆ ನೀಡುವ ಪ್ರಯತ್ನ ಮಾಡಿದ್ದು, ಆದರೆ ಅಲ್ಲಿಯೇ ಇದ್ದ ದೇಶಪಾಂಡೆಯವರು, ಮಧ್ಯೆ ಪ್ರವೇಶಿಸಿ, ನನಗೆ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ, ಆದರೆ ಅವಕಾಶವಿಲ್ಲ, ಅದರ ಬಗ್ಗೆ ಬೇಸರವೇನಿಲ್ಲ ಎಂದು ಹೇಳಿದ್ದಾರೆ.

Photos credit :- CM OF Karnataka

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here