ಬಿಗ್​ ಬಾಸ್​ 6’ ರ ರನ್ನರ್​ ಅಪ್​ ಆಗಿದ್ದ ಗಾಯಕ ಹಾಗೂ ಸಂಗೀತ ನಿರ್ದೇಶಕ ನವೀನ್​ ಸಜ್ಜು ಅವರು ಈಗ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಅಡಿಯಿಡಲು ಸಿದ್ಧರಾಗುತ್ತಿದ್ದಾರೆಂಬ ಮಾತು ಗಾಂಧಿ ನಗರದ ಅಂಗಳದಲ್ಲಿ ತುಂಬಾ ದಿನಗಳಿಂದ ಇತ್ತಾದರೂ, ಈಗ ಈ ವಿಷಯವು ಅಧಿಕೃತವಾಗಿ ಹೊರಬಂದಿದ್ದು, ನವೀನ್​ ಸದ್ಯದಲ್ಲೇ ಪ್ರಾಜೆಕ್ಟ್​ ಒಂದನ್ನು ಫೈನಲ್​ ಮಾಡಿದ್ದು, ಚಿತ್ರ ಬಹಳ ಬೇಗ ಸೆಟ್ಟೇರಲಿದೆ. ಕೆಮೆಸ್ಟ್ರಿ ಆಫ್​ ಕರಿಯಪ್ಪ’ ಚಿತ್ರದ ನಂತರ ನಿರ್ದೇಶಕ ಕುಮಾರ್​ ಅವರು ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದು ಅದಕ್ಕೆ ‘ಚಾರ್ಲಿ ಚಾಪ್ಲಿನ್​’ ಎನ್ನುವ ಶೀರ್ಷಿಕೆ ಇಟ್ಟಿದ್ದಾರೆ. ಈ ಸಿನಿಮಾದಲ್ಲಿ ಹಾಸ್ಯವೇ ಪ್ರಧಾನವಾಗಿರುವ ಕಾರಣಕ್ಕೆ ಈ ಶೀರ್ಷಿಕೆ ನೀಡಲಾಗಿದೆ. ಈ ಚಿತ್ರಕ್ಕೆ ನವೀನ್​ ಸಜ್ಜು ನಾಯಕನಾಗಿ ನಟಿಸುತ್ತಿದ್ದಾರೆ.

ಚಿತ್ರದ ವಿಶೇಷ ಏನೆಂದರೆ ಇದೊಂದು ಜರ್ನಿ ಸಿನಿಮಾ ಆಗಿದ್ದು, ತಂಡವೊಂದು ಬೆಂಗಳೂರಿನಿಂದ ಮಡಿಕೇರಿಗೆ ತೆರಳಿದಾಗ ಅಲ್ಲಿ ಏನೆಲ್ಲಾ ನಡೆಯುತ್ತದೆಯೆಂಬುದು ಸಿನಿಮಾದ ಕಥಾ ಹಂದರದಲ್ಲಿ ಮೂಡಿ ಬರಲಿದೆ. ‘ಚಾರ್ಲಿ ಚಾಪ್ಲಿನ್​’ ನಲ್ಲಿ ಹಾಸ್ಯವೇ ಪ್ರಧಾನವಾಗಿದ್ದರೂ ಇದೊಂದು ವಿಭಿನ್ನ ಸಿನಿಮಾ ಆಗಲಿದೆಯೆಂದು ನಿರ್ದೇಶಕ ಕುಮಾರ್ ಹೇಳಿದ್ದಾರೆ. ಇದೇ ಮೊದಲ‌ ಬಾರಿಗೆ ನಾಯಕನಾಗುತ್ತಿರುವ ನವೀನ್ ಸಜ್ಜು ಅವರು ಇದ್ದಕ್ಕಿಂತ ಮೊದಲೇ ಬಂದ ನಾಯಕ ನಾಟ ಅವಕಾಶಗಳನ್ನು, ಕಥೆಗಳನ್ನು ರಿಜೆಕ್ಟ್ ಮಾಡಿದ್ದರು. ಆದರೆ ಈಗ ಈ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಬಿಗ್​ ಬಾಸ್​ ಮನೆಯಿಂದ ಹೊರ ಬಂದ ಮೇಲೆ ಅವಕಾಶಗಳು ಸಾಕಷ್ಟು ಬಂದಿವೆಯಾದರೂ, ಅವರಿಗೆ ಕಥೆ ಹಿಡಿಸದ ಕಾರಣದಿಂದ ಯಾವ ಅವಕಾಶಗಳನ್ನು ಒಪ್ಪಿಕೊಂಡಿರಲಿಲ್ಲ. ಆದರೆ ‘ಕೆಮೆಸ್ಟ್ರಿ ಆಫ್​ ಕರಿಯಪ್ಪ’ ಸಿನಿಮಾ ನೋಡಿ ಇಂಪ್ರೆಸ್​ ಆಗಿದ್ದ ನವೀನ್ ಸಜ್ಜು ಅವರಿಗೆ, ಇದೇ ವೇಳೆ ನಿರ್ದೇಶಕ ಕುಮಾರ್  ಒಂದು ಕಥೆ ಹೇಳಿದಾಗ ಅವರಿಗೆ ಕಥೆ ಇಷ್ಟವಾಗಿದ್ದರಿಂದ ಈ ಸಿನಿಮಾವನ್ನು ಒಪ್ಪಿಕೊಂಡಿರುವುದಾಗಿ ಅವರು ಹೇಳಿದ್ದಾರೆ. ನವೀನ್ ಸಜ್ಜು ಈ ಚಿತ್ರಕ್ಕೆ ಸ್ವತಃ ಸಂಗೀತ ಸಂಯೋಜನೆ ಮಾಡಬಹುದಾದ ಅವಕಾಶಗಳು ಕೂಡಾ ಇದೆ. ಅತಿ ಶೀಘ್ರದಲ್ಲಿ ನವೀನ್ ಸಜ್ಜು ಸ್ಯಾಂಡಲ್ ವುಡ್ ನ ಹೊಸ ನಾಯಕ ನಟನಾಗುವುದು ಖಚಿತವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here