ಅರವತ್ತು ವರ್ಷದ ಹಿರಿಯರೊಬ್ಬರು ಆಟೋಮೊಬೈಲ್ ಇಂಜಿನಿಯರ್ ಗಳನ್ನು ತಮ್ಮ ಆವಿಷ್ಕಾರಗಳ ಮೂಲಕ ಬೆರಗಾಗುವಂತೆ ಮಾಡಿದ್ದಾರೆ. ಇವರೇನು ಇಂಜಿನಿಯರ್ ಅಲ್ಲ. ಆದರೆ ಇವರು ತಯಾರಿಸಿರುವ ವಾಹನಗಳನ್ನು ನೋಡಿದರೆ ಯಾವುದೇ ಇಂಜಿನಿಯರ್ ಗಿಂತ ಕಡಿಮೆಯೇನಿಲ್ಲ ಎನ್ನಬಹುದು. ಸೂರತ್ ನ ವಿಷ್ಣು ಪಟೇಲ್ ಎಂಬ ಈ ಹಿರಿಯರು ಹಳೆ ವಾಹನಗಳ ಬಿಡಿ ಭಾಗಗಳು, ಟಿವಿ ರಿಮೋಟ್ಸ್, ಮೊಬೈಲ್ ಮತ್ತು ಲ್ಯಾಪ್ ಟಾಪ್ ಗಳಂತಹ E ತ್ಯಾಜ್ಯಗಳನ್ನು ಬಳಸುವ ಮೂಲಕ ವಾಹನಗಳನ್ನು ತಯಾರಿಸುವ ಮೂಲಕ ದೇಶದ ಗಮನವನ್ನು ಸೆಳೆದಿದ್ದಾರೆ.

ವಿಷ್ಣು ಪಟೇಲ್ ಅವರಿಗೆ ಹುಟ್ಟಿನಿಂದಲೇ ಕಿವಿಯಲ್ಲಿನ ಸಮಸ್ಯೆಯಿಂದ ಅವರು ಶಬ್ದಗಳನ್ನು ಕೇಳುವಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಈ ವಿಷಯ ಯಾವುದೇ ಸಮಸ್ಯೆ ಆಗಿಲ್ಲ ಅವರಿಗೆ. ನಿವೃತ್ತಿಯ ನಂತರ ದೈಹಿಕ ತೊಂದರೆ ಉಳ್ಳವರಿಗಾಗಿ ಏನಾದ್ರೂ ಒಂದು ವಿಭಿನ್ನವಾದ ಪ್ರಯತ್ನ ಮಾಡಬೇಕೆಂಬ ಛಲದಿಂದ ಮಾಡಿದ ಪ್ರಯತ್ನದ ಫಲವೇ ಇಂದು ಅವರನ್ನು ಜನ ಗುರ್ತಿಸುವಂತಾಗಿದೆ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನ ಯಾವುದೇ ತರಬೇತಿ ಇಲ್ಲದೇ, ಯಾವುದೇ ಫಂಡ್ಸ್ ಇಲ್ಲದೇ ಇದುವರೆವಿಗೂ ಏಳು ಬ್ಯಾಟರಿ ಚಾಲಿತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ತಯಾರಿಸಿದ್ದಾರೆ. ಇತ್ತೀಚೆಗಷ್ಟೇ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಷ್ಣು ಪಟೇಲ್ ಅವರು ತಯಾರಿಸಿದ ವಾಹನದಲ್ಲಿ ಅವರ ಸಂಚಾರ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.

ಇದನ್ನು ನೋಡಿದ ಮಹೀಂದ್ರಾ ಕಂಪನಿಯ ಚೇರ್ಮನ್ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ ನಲ್ಲಿ, ಇದೊಂದು ಅಸಾಧಾರಣ ಕಥೆ ಎಂದಿದ್ದಾರೆ. ಅವರ ಕಾರ್ಯಾಗಾರವನ್ನು ನವೀಕರಣ ಮಾಡಲು ನಾನು ಹೂಡಿಕೆ ಮಾಡಬಹುದೇ ಎಂದು ತಿಳಿಯಲು ನಾನು ಅವನನ್ನು ಸಂಪರ್ಕಿಸುತ್ತೇನೆ. ವಾಸ್ತವವಾಗಿ ಅವರು ದೇಶದಲ್ಲಿ ಅವರಂತಹ ಸೂಕ್ಷ್ಮ ಉದ್ಯಮಿಗಳಲ್ಲಿ ಹೂಡಿಕೆ ಮಾಡಲು ಆರಂಭಿಕ ನಿಧಿಯಾಗಿ 1 ಕೋಟಿಯನ್ನು ವೈಯಕ್ತಿಕವಾಗಿ ಮೀಸಲಿಡಲು ನನಗೆ ಸ್ಫೂರ್ತಿ ನೀಡಿದ್ದಾರೆ. ಇದು ಮಾನ್ಯತೆಗಾಗಿ ಕಾಯುತ್ತಿರುವ ನವೀನವಾದ ಪ್ರತಿಭೆ
ಎಂದು ಕರೆದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here