ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಜನರು ಉರುವಲಿಗಾಗಿ ಅರಣ್ಯವನ್ನು ಬಳಕೆ ಮಾಡುತ್ತಾರೆ. ಇದರಿಂದಾಗಿ ಅರಣ್ಯ ನಾಶವಾಗುವುದಲ್ಲದೆ ಜನರ ಆರೋಗ್ಯದ ಮೇಲೆ ಇದಹು ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಈ ಸಮಸ್ಯೆಯನ್ನು ಮನಗಂಡ ಗ್ರಾಮಾಭಿವೃದ್ಧಿ ಯೋಜನೆಯು ಸೌದೆಯ ಬದಲಾಗಿ ಸೋಲಾರ್ ಮತ್ತು ಗೋಬರ್ ಗ್ಯಾಸ್ ಮತ್ತು ಅಡುಗೆ ಒಲೆಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತಿದೆ.

ಈ ಕಾರ್ಯಕ್ರಮವನ್ನು ಗ್ರಾಮೀಣ ಮಟ್ಟದಲ್ಲಿ ಕ್ರಮವತ್ತಾಗಿ ಅನುಷ್ಠಾನಿಸಿದಕ್ಕಾಗಿ ಸಂಸ್ಥೆಗೆ 2012ನೇ ಸಾಲಿನ ಪ್ರತಿಷ್ಠಿತ ಜಾಗತಿಕ “ಆಶ್ಡೆನ್ ಚಿನ್ನದ ಪ್ರಶಸ್ತಿ” ಗೌರವ ದೊರಕಿರುತ್ತದೆ.
1998ರಲ್ಲಿ ಆರಂಭಿಸಿರುವ ಅಸಂಪ್ರದಾಯಿಕ ಇಂಧನ ಮೂಲಗಳ ಅಭಿವೃದ್ಧಿ ಕಾರ್ಯಕ್ರಮವನ್ನು ಯೋಜನೆಯು ರೈತರಿಗೆಮಾಹಿತಿ ಮತ್ತು ಸಹಕಾರ ನೀಡಿ ಸಕಾಲದಲ್ಲಿ ಅನುಪಾಲನೆ ಮಾಡಿ ಅನುಷ್ಠಾನಗೊಳಿಸಿದೆ. ಆಶ್ಡೆನ್ ಪ್ರಶಸ್ತಿ ಪೂರ್ವ 6500 ಸೋಲಾರ್ ವಿದ್ಯುತ್ ದೀಪ , 9500 ಜೈವಿಕ ಅನಿಲ ಘಟಕ ಮತ್ತು 625 ಪರಿಸರ ಸ್ನೇಹಿ ಅಡುಗೆ ಒಲೆ ಘಟಕಗಳನ್ನು ಅನುಷ್ಠಾನಗೊಳಿಸಿರುತ್ತದೆ. ಪ್ರಶಸ್ತಿಯಿಂದ ಪ್ರೇರಣೆಗೊಂಡ ಯೋಜನೆಯು ಕೇಂದ್ರ ಕಛೇರಿಯ ಕೃಷಿ ವಿಭಾಗದಲ್ಲಿ ಹಸಿರು ಇಂಧನ ವಿಭಾಗ” ಎಂಬ ಪ್ರತ್ಯೇಕ ಉಪ ವಿಭಾಗವನ್ನು ಆರಂಭಿಸಿರುತ್ತದೆ. ಹಸಿರು ಇಂಧನ ಘಟಕಗಳ ಅನುಷ್ಠಾನಕ್ಕಾಗಿ ತಾಲೂಕುವಾರು ಪ್ರತ್ಯೇಕ ಕ್ರಿಯಾಯೋಜನೆ ತಯಾರಿಸಲಾಗಿದೆ.
ಕಾರ್ಯಕ್ರಮದ ಅನುಪಾಲನೆ ಮಾಡುವ ಕೃಷಿಮೇಲ್ವಿಚಾರಕರಿಗೆ ಅನುಷ್ಠಾನ ಮಾಡುವ ಸೇವಾಪ್ರತಿನಿಧಿಗಳಿಗೆ ಹಾಗೂ ರೈತರಿಗೆ ಗ್ರಾಮೀಣಮಟ್ಟದಲ್ಲಿ ತರಬೇತಿ, ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಿ ಪ್ರೇರಣೆ ನೀಡಲಾಗಿದೆ. ಸೇವಾಪ್ರತಿನಿಧಿಗಳಿಗೆ ರೈತರನ್ನು ಗುರುತಿಸಿದಕ್ಕಾಗಿ ಹಾಗೂ ರೈತರಿಗೆ ಅನುಷ್ಠಾನ ಮಾಡಿದಕ್ಕಾಗಿ ವಿಶೇಷ ಪ್ರೋತ್ಸಾಹ ಧನವನ್ನು ನೀಡಲಾಗಿದೆ. ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕೃಷಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಜೈವಿಕ ಅನಿಲ ಘಟಕ ರಚನೆಗೆ ನುರಿತ ಮೇಸ್ತ್ರಿಗಳು ಸಕಾಲದಲ್ಲಿ ದೊರಕದಿರುವುದರಿಂದ 200 ಮಂದಿ ಆಸಕ್ತ ಯುವಕರಿಗೆ 5 ದಿನಗಳ ಪ್ರಾಯೋಗಿಕ ಕಲಿಕಾ ತರಬೇತಿಯನ್ನು ನೀಡಲಾಗಿದೆ.
ಆಶ್ಡೆನ್ ಪ್ರಶಸ್ತಿ ಪಡೆದ ನಂತರ ಹಸಿರು ಇಂಧನ ಘಟಕ ಅನುಷ್ಠಾನವನ್ನು ತೀವ್ರಗತಿಯಲ್ಲಿ ಆಗಿದ್ದು 13 ಪಟ್ಟು ಹೆಚ್ಚುವರಿ ಸಾಧನೆ ಮಾಡಲಾಗಿದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here