ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಅಡಿಯಲ್ಲಿ ಕೈಗೊಂಡಿರುವ ಯೋಜನೆಯಿಂದ ಗ್ರಾಮೀಣ ಯುವಕರನ್ನು ತಂತ್ರಜ್ಞಾನದೊಂದಿಗೆ ಸದೃಢಗೊಳಿಸಲು ಸಹಕಾರಿಯಾಗಿದೆ ಎಂದು ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರಾದ ಡಾಕ್ಟರ್ ಶರಣ ಪ್ರಕಾಶ ಆರ್ ಪಾಟೀಲ್ ಹೇಳಿದರು.
ನಗರದ ಅರಮನೆ ರಸ್ತೆಯಲ್ಲಿರುವ ರಾಡಿಸನ್ ಬ್ಲೂ ಏಟ್ರಿಯಾ ಹೋಟೆಲ್ ನಲ್ಲಿ ಇಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ-ರಾಷ್ಟ್ರೀಯ ಜೀವನೋಪಾಯ ಅಭಿಯಾನದ ವತಿಯಿಂದ CXO ಕಾಂಕ್ಲೇವ್ & ಆಲೂಮ್ನಿ ಮೀಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸುಮಾರು ಪ್ರತಿಶತ 70ಕ್ಕೂ ಅಧಿಕ ಉದ್ಯೋಗಗಳು ತಂತ್ರಜ್ಞಾನ ಪೂರಕ ಮತ್ತು ಅವಲಂಭಿತವಾಗಿವೆ.
ಉದ್ಯಮ ಮತ್ತು ಕಾರ್ಖಾನೆಗಳ ಸಹಭಾವಿತ್ವದಲ್ಲಿಂದು ಹೆಚ್ಚು ಹೆಚ್ಚು ಯುವಜನರು ಕೌಶಲ್ಯವನ್ನು ತಂತ್ರಜ್ಞಾನಪೂರಿತವಾಗಿ ಮೈಗೂಡಿಸಿಕೊಳ್ಳುತ್ತಿದ್ದು ತಮ್ಮ ಜೀವನಶೈಲಿಯನ್ನು ರೂಪಿಸಿಕೊಳ್ಳಲು ಪೂರಕವಾಗಿವೆ.
ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಈ ಮಹತ್ವಪೂರ್ಣ ಯೋಜನೆಯಿಂದ ಸರಿಸುಮಾರು 54,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸೃಷ್ಟಿಸಿ ರಾಷ್ಟ್ರದ ಮಾನವ ಸಂಪನ್ಮೂಲ ಸರಪಳಿಗೆ ಕೊಡುಗೆ ನೀಡಿದೆ.
2014ರಲ್ಲಿ ಉದಯಿಸಿದ ಈ ಇಲಾಖೆ ಅಗತ್ಯಕ್ಕೆ ತಕ್ಕಂತೆ ಯುವಜನರನ್ನು ತಂತ್ರಜ್ಞಾನಪೂರಿತವಾಗಿ ತರಬೇತಿ ನೀಡಲು ಯಶಸ್ವಿಯಾಗಿದೆ. ಹಿಂದಿನ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿ ಮತ್ತೆ), ರೋಬೋಟಿಕ್ಸ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ ಗಳನ್ನು ಅಳವಡಿಸಿಕೊಂಡು ನಮ್ಮ ಯುವ ಪೀಳಿಗೆಯನ್ನು ಮೊದಲಾದ ವಿದ್ಯಮಾನಗಳಿಗೆ ಅನುಕೂಲವಾಗಿ ತಯಾರು ಮಾಡುತ್ತಿದೆ, ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಜೀವಿನಿ ಕರ್ನಾಟಕ ರೂರಲ್ ಲೈವ್ಲಿ ಹುಡ್ ಮಿಷನ್ ಡೈರೆಕ್ಟರ್ ಶ್ರೀ ವಿದ್ಯಾ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾಮ ಮಹಾದೇವನ್ ಮತ್ತು ಇತರರು ಹಾಜರಿದ್ದರು.
Disclaimer: This Story is auto-aggregated by a Syndicated Feed and has not been Created or Edited By City Big News Staff.