ನಮ್ಮಲ್ಲಿ ನಿದ್ರೆ ಪ್ರಿಯರಿಗೇನೂ ಕೊರತೆ ಇಲ್ಲ ಬಿಡಿ. 8 ಗಂಟೆ ನಿದ್ರೆ ಸಾಕು ಎಂದು ತಜ್ಞರು ಹೇಳಿದರೂ ಅದಕ್ಕಿಂತ ಹೆಚ್ಚು ಸಮಯ ನಿದ್ರೆ ಮಾಡುವ ಜನರೇ ನಮ್ಮಲ್ಲಿದ್ದಾರೆ. ಅಂದಹಾಗೆ ನಿದ್ರೆ ಮಾಡದವರು ಒಂದಷ್ಟು ವಿಷಯಗಳನ್ನು ನಿದ್ರೆಯ ಬಗ್ಗೆ ತಿಳಿದುಕೊಂಡರೆ ಒಳಿತು. ಯಾಕೆಂದರೆ ಸುಖ ನಿದ್ರೆಯಿಂದಲೂ ಆರೋಗ್ಯ, ಸೌಂದರ್ಯ ಹೆಚ್ಚುತ್ತದೆ ಎನ್ನುವುದನ್ನು ನೀವು ಬಲ್ಲೀರಾ? ಗೊತ್ತಿರದಿದ್ದರೆ ವೈದ್ಯರು ಹೇಳಿರುವ ನಿದ್ರೆಯ ಪ್ರಯೋಜನಗಳನ್ನು ಒಮ್ಮೆ ವಿವರವಾಗಿ ಓದಿ…
ನಿದ್ರೆಯಿಂದ ರಕ್ತ, ಮಾಂಸಖಂಡಗಳ ವೃದ್ಧಿಯಾಗುತ್ತದೆ.

ಗಾಯಗಳಾಗಿದ್ದಲ್ಲಿ ಬೇಗನೇ ಮಾಯುತ್ತವೆ. ದಿನಕ್ಕೆ ಕನಿಷ್ಠ 6-8 ಗಂಟೆ ಕಾಲ ನಿದ್ರಿಸುವುದರ ಪರಿಣಾಮ ಮೃತಜೀವಕೋಶಗಳನ್ನು ಹೊರಹಾಕುವ ಹಾಗೂ ಹೊಸ ತ್ವಚೆಯ ಕೋಶಗಳ ರಚನೆಯ ಪ್ರಕ್ರಿಯೆ ನಡೆಯುತ್ತದೆ. ಈ ಸಮಯದಲ್ಲಿ ಮಿದುಳಿನಲ್ಲಿ ಡೆಲ್ಟಾ ವಿದ್ಯುತ್ ತರಂಗಗಳು ಬಿಡುಗಡೆಯಾಗುತ್ತವೆ. ಇದರಿಂದ ತನುಮನಕ್ಕೆ ಶಾಂತಿಯ ಭಾವನೆ ದೊರೆಯುತ್ತದೆ. ಶರೀರದಿಂದ ಅನವಶ್ಯಕ ಉಷ್ಣತೆ ದೂರವಾಗಿ ಸಮತೋಲನವಿರುತ್ತದೆ. ಹೆಚ್ಚಿನ ರಕ್ತದೊತ್ತಡ ಕುಗ್ಗಿ ಸರಿಯಾದ ಸ್ಥಿತಿಗೆ ಬರುತ್ತದೆ. ಒಟ್ಟಿನಲ್ಲಿ ದೇಹದ ಪ್ರತಿಯೊಂದು ಅಂಗಕ್ಕೂ ಹೊಸ ಚೈತನ್ಯ ನೀಡುತ್ತದೆ.

ಕ್ಯಾನ್ಸರ್ ನಂತಹ ಮಾರಕ ರೋಗ ಬರದಂತೆ ತಡೆಗಟ್ಟುತ್ತದೆ.

ತೂಕ ಕಡಿಮೆಯಾಗುವುದನ್ನು ತಡೆಯುತ್ತದೆ.

ಖಿನ್ನತೆ ದೂರವಾಗುತ್ತದೆ.

ಕಡಿಮೆ ಅಥವಾ ಅರೆ ಬರೆ ನಿದ್ರೆಯಿಂದ ದೇಹದ ತೂಕ ಹೆಚ್ಚಾಗುವ ಸಂಭವ ಇರುತ್ತದೆ. ಆದ್ದರಿಂದ ಸುಖ ನಿದ್ರೆ ಒಳಿತು.

ಏಕಾಗ್ರತೆ ಹೆಚ್ಚುತ್ತದೆ.

ಮುಖದ ಕಾಂತಿ ಹೆಚ್ಚುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ದೀರ್ಘಾಯುಷಿಗಳಾಗುತ್ತೀರಿ..

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here