ಯೋಗ ಮಾನವ ಜೀವನಕ್ಕೆ ಅವನ ಆರೋಗ್ಯಕ್ಕೆ ಬಹಳ ಮುಖ್ಯ ಎಂದು ನಮಗೆಲ್ಲಾ ತಿಳಿದಿದೆ. ಅದೇ ರೀತಿಯಲ್ಲಿ ಯೋಗದ ಜೊತೆಗೆ ನಗು ಕೂಡಾ ನಮ್ಮಲ್ಲಿನ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ ಜೀವನದಲ್ಲೊಂದು ಸಕಾರಾತ್ಮಕತೆಯನ್ನು ತಂದು ಕೊಡುತ್ತದೆ. ಇಂತಹ ನಗುವಿನ ಪ್ರಾಮುಖ್ಯತೆ ಹಾಗೂ ಅದಕ್ಕಿರುವ ಅದ್ಭುತ ಶಕ್ತಿ ಏನೆಂಬುದನ್ನು ಒಮ್ಮೆ ವಿಶ್ಲೇಷಿಸೋಣ ಬನ್ನಿ. ಒತ್ತಡದ ಈ ಜೀವನದಲ್ಲಿ ಮನಸ್ಸು ಹತಾಶೆಯಾಗುವಾಗ, ಒಂದು ನಗು ನವ ಚೈತನ್ಯವನ್ನು ನಮ್ಮಲ್ಲಿ ಮೂಡಿಸುತ್ತದೆ. ಕೋಪ, ಆಕ್ರೋಶಗಳು ನಮ್ಮ ನಮ್ಮ‌ ನಡುವೆ ದ್ವೇಷವನ್ನು ಮೂಡಿಸಿದರೆ, ಒಂದು ನಗು ಸ್ನೇಹ, ಪ್ರೀತಿಯನ್ನು ಮೂಡಿಸುತ್ತದೆ.

ಮನೋವೈದ್ಯರು ಕೂಡಾ ದಿನಕ್ಕೊಮ್ಮೆ ಮನಸಾರೆ ನಗುವುದರಿಂದ ಮಾನಸಿಕ ಆರೋಗ್ಯ ವೃದ್ಧಿಯ ಜೊತೆಗೆ, ದೈಹಿಕ ಕಾರ್ಯ ಕ್ಷಮತೆಯನ್ನು ಕೂಡಾ ಹೆಚ್ಚಿಸುತ್ತದೆ. ಮೈಗ್ರೇನ್‌ ನಂತಹ ಸಮಸ್ಯೆಯ ಪರಿಹಾರ ಕೂಡಾ ಒಂದು ನಗುವಿನಿಂದ ಸಾಧ್ಯ. ಒಂದು ನಗುವಿನಿಂದ ನೂರಾರು ಮನಗಳನ್ನು ಗೆಲ್ಲಬಹುದು. ನಗುವಿನಿಂದ ಮುಖದಲ್ಲಿ ಒಂದು ಹೊಸ ಕಳೆ ಮೂಡುತ್ತದೆ. ಒಂದು ಸಣ್ಣ ದಿನದ ಎಲ್ಲಾ ಆಯಾಸವನ್ನು ಕಳೆಯುವ ಶಕ್ತಿಯನ್ನು ಹೊಂದಿರುತ್ತದೆ.

ನಗುವಿನಿಂದ ಮುಖದ ಮಾಂಸಖಂಡಗಳಲ್ಲಿ ಸೂಕ್ತವಾದ ರಕ್ತ ಸಂಚಾರವಾಗುತ್ತದೆ. ಅಲ್ಲದೆ ನಗುವಿನಿಂದ ಮುಖದ ಮೇಲೆ ಬಹಳ ಬೇಗ ಸುಕ್ಕು ಬರುವುದಿಲ್ಲ. ಏಕೆಂದರೆ ನಗು ಕೂಡಾ ಒಂದು ಯೋಗವೇ ಎನ್ನುತ್ತದೆ ವಿಜ್ಞಾನ. ಅಳುವುದರಿಂದ ಮನಸ್ಸಿನಲ್ಲಿ ಇರುವ ನೋವು ದುಃಖ ಕಣ್ಣೀರಾಗಿ ಹೊರ ಬಂದು ಮನಸ್ಸು ಹಗುರಾಗುತ್ತದೆ. ಅನಂತರ ನಗುವಿನ ಮೂಲಕ ಜೀವನದಲ್ಲಿ ಹೊಸ ಸಂತೋಷ ಹಾಗೂ ಹೊಸ ಚೈತನ್ಯವನ್ನು ಪಡೆಯಬಹುದು. ಮನಸ್ಸನ್ನು ಉಲ್ಲಾಸದಿಂದ ಇಡಲು, ದೇಹದಲ್ಲಿ ನವ ಚೈತನ್ಯವನ್ನು ತುಂಬಲು ದಿನಕ್ಕೊಮ್ಮೆಯಾದರೂ ಮನಃಪೂರ್ವಕವಾಗಿ ನಗೋಣ ಬನ್ನಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here