ಕೇಂದ್ರ ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಸಚಿವೆ ಸ್ಮೃತಿ ಇರಾನಿಯವರು ತಮ್ಮ ಮಗಳ ಫೋಟೋ ಬಗ್ಗೆ ಕೆಟ್ಟದಾಗಿ ಪ್ರತಿಕ್ರಿಯೆ ನೀಡಿದ, ಮಗಳ ಸಹಪಾಠಿಯೊಬ್ಬನಿಗೆ ಇನ್ಸ್ಟಾಗ್ರಾಂ ನಲ್ಲಿಯೇ ಸರಿಯಾದ ಪ್ರತಿಕ್ರಿಯೆ ನೀಡುತ್ತಾ , ತರಾಟೆಗೆ ತೆಗೆದುಕೊಂಡಿರುವ ಪೋಸ್ಟ್ ಈಗ ವೈರಲ್ ಆಗಿದೆ. ಸ್ಮೃತಿ ಇರಾನಿಯವರು ತಮ್ಮ ಮಗಳ ಸೆಲ್ಫಿ ಫೋಟೋ ಒಂದನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದಾಗ, ಅದನ್ನು ಗಮನಿಸಿದ ಆಕೆಯ ಸಹಪಾಠಿ ಒಬ್ಬ ಆಕೆಯ ಲುಕ್ಸ್ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಲ್ಲದೆ, ತರಗತಿಯ ಇತರರಿಗೂ ಅದರ ಬಗ್ಗೆ ಕಿಚಾಯಿಸಲು ಹೇಳಿದ್ದಾನೆ. ಇದರಿಂದ ಸ್ಮೃತಿ ಅವರ ಮಗಳು ತಮ್ಮ ತಾಯಿಗೆ ಆ ಫೋಟೋ ತೆಗೆದು ಹಾಕುವಂತೆ ಹೇಳಿದ್ದಾರೆ.

ಅದಕ್ಕೆ ಉತ್ತರವಾಗಿ ಸ್ಮೃತಿ ಅವರು ಮಿ.ಜಾ ನನ್ನ ಮಗಳೊಬ್ಬಳು ಕ್ರೀಡಾಪಟು, ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲೆ ಬರೆದವಳು, ಕರಾಟೆ ಬ್ಲಾಕ್ ಬೆಲ್ಟ್ ನ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಎರಡು ಬಾರಿ ಕಂಚಿನ ಪದಕ ಪಡೆದವಳು.,ಒಳ್ಳೆಯ ಮಗಳು ಹಾಗೂ ಅಂದಗಾತಿ. ನಿನಗೆಷ್ಟು ಬೇಕೋ ಅಷ್ಟು ಚುಡಾಯಿಸು, ಅವಳು ಅಷ್ಟೇ ಸಮರ್ಥವಾಗಿ ಅದನ್ನು ಎದುರಿಸುವಳು ಎಂದು ಪ್ರತಿಕ್ರಿಯಿಸುತ್ತಾ ಅವಳು ಝೋಯಿಶ್ ಇರಾನಿ, ಅವಳ ತಾಯಿಯಾಗಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ಬರೆದಿದ್ದಾರೆ.

ಮಗಳು ಸಹಪಾಠಿಯ ಟೀಕೆಗೆ ಬೇಸತ್ತು ಸ್ಮೃತಿ ಅವರಿಗೆ ಫೋಟೋ ಡಿಲೀಟ್ ಮಾಡಲು ಹೇಳಿದಾಗ ಆಕೆಯ ಕಣ್ಣೀರು ನೋಡಿದ ಸ್ಮೃತಿ ಅವರು ಮೊದಲು ಫೋಟೋ ಡಿಲೀಟ್ ಮಾಡಿದ್ದರು. ಆದರೆ ಹಾಗೆ ಮಾಡಿದರೆ ಚುಡಾಯಿಸಿದವರಿಗೆ ಭಯ ಪಟ್ಟಂತೆ ಹಾಗೂ ಅವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಮತ್ತೆ ನಾನು ಆ ಫೋಟೋ ಪೋಸ್ಟ್ ಮಾಡುತ್ತಿದ್ದೇನೆ ಎಂದು ದಿಟ್ಟ ಪ್ರತಿಕ್ರಿಯೆಯ ಮೂಲಕ ಮಗಳಲ್ಲಿ ಧೈರ್ಯ ತುಂಬಿ, ಚುಡಾಯಿಸಿದವರಿಗೆ ಸೂಕ್ತ ಸಂದೇಶವನ್ನು ರವಾನಿಸಿದ್ದಾರೆ ಸ್ಮೃತಿ ಇರಾನಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here