ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಂತ್ರಿಯಾದ ಸ್ಮೃತಿ ಇರಾನಿಯವರು ನೆನ್ನೆ ಅನಾರೋಗ್ಯಕ್ಕೆ ತುತ್ತಾಗಿದ್ದ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ಸಾಗಿಸಲು ತಮ್ಮ ಬೆಂಗಾವಲು ಅಂಬುಲೆನ್ಸ್ ಬಳಸಿಕೊಂಡು ಅಮೇಠಿ ಜನರಿಂದ ಮತ್ತಷ್ಟು ಗೌರವವನ್ನು ಪಡೆದಿರುವುದು ಮಾತ್ರವಲ್ಲದೆ ಅವರ ಮನಸ್ಸು ಕೂಡಾ ಗೆದ್ದಿದ್ದಾರೆ. ಇಂದು ಸ್ಮೃತಿ ಇರಾನಿ ಅವರು ಅಮೇಠಿ ಲೋಕಸಭಾ ಕ್ಷೇತ್ರಕ್ಕೆ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರ ಸಹಿತವಾಗಿ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಈ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ಸಾಗಿಸಲು ಅವರು ತಮ್ಮ ಬೆಂಗಾವಲು ವಾಹನವನ್ನೇ ಬಳಸಿಕೊಳ್ಳಲು ಹೇಳಿದರು.

ಸಂಸದೆಯ ಈ ಹೆಜ್ಜೆ ಅಥವಾ ನಿರ್ಧಾರ, ಜನರ ಬಗೆಗಿನ ಅವರ ಕಾಳಜಿಗೆ ಈಗ ನೆಟ್ಟಿಗರಿಂದಲೂ ಕೂಡಾ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಸ್ಮೃತಿ ಅವರು ತಮ್ಮ ಬೆಂಗಾವಲು ವಾಹನ ನೀಡಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ‌ ಈ ಹಿಂದೆ ಅಮೇಠಿ ಕ್ಷೇತ್ರದಲ್ಲಿ ಗುಂಡೇಟಿಗೆ ಬಲಿಯಾದ ತಮ್ಮ ಬೆಂಬಲಿಗ ಸುರೇಂದ್ರ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ಅಲ್ಲಿನ ಜನರ ಮನಸ್ಸು ಗೆದ್ದಿದ್ದ ಸ್ಮೃತಿ ಅವರು ಇಂದು ಇನ್ನೊಮ್ಮೆ ಇಂದು ತಾವು ಮಾಡಿದ ಕೆಲಸದಿಂದ ಅಲ್ಲಿನ ಜನರ ಮನಸ್ಸನ್ನು ಗೆದ್ದಿದ್ದಾರೆ.

ಇನ್ನು ಈ ಸುದ್ದಿ ವೈರಲ್ ಆದ ಮೇಲೆ ಹಲವರು ಇದರ ಬಗ್ಗೆ ಮೆಚ್ಚಿ ಟ್ವೀಟ್ ಮಾಡುತ್ತಾ, ಎಲ್ಲಾ ರಾಜಕಾರಣಿಗಳು ಇದೇ ರೀತಿ ಇರಬೇಕು ಎಂದು ಟ್ವೀಟ್ ಮಾಡಿದರೆ, ಮತ್ತೆ ಕೆಲವರು ಈ ಹಿಂದೆ ರಾಹುಲ್ ಗಾಂಧಿ ಅವರು ಇಂತಹುದು ಮಾಡಿದ್ದರು, ನೆಹರೂ ಅವರು ಸದಾ ಇಂತಹ ಕಾರ್ಯದಲ್ಲಿ ತೊಡಗಿದ್ದರು ಎಂದೆಲ್ಲಾ ಟ್ವೀಟ್ ಗಳನ್ನು ಮಾಡಿದ್ದಾರೆ. ವಿಷಯ ಏನೇ ಆದರೂ ಸಚಿವೆಯವರು ಅಗತ್ಯ ಇರುವವರಿಗೆ ನೆರವು ನೀಡಿದ್ದು ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here