ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಭಯಂಕರ ಎನಿಸುವ ಫೋಟೋಗಳು ವೈರಲ್ ಆಗುತ್ತಿವೆ. ಅದರಲ್ಲಿ ಒಂದು ಹೆಬ್ಬಾವು ಜೀವಂತವಾಗಿರುವ ಮೊಸಳೆಯೊಂದನ್ನು ಹಿಡಿದು ನುಂಗಿದೆ. ಇದು ಫೋಟೋ ಮಾತ್ರವಲ್ಲದೆ ವಿಡಿಯೋ ಕೂಡಾ ವೈರಲ್ ಆಗಿದ್ದು, ನೋಡುವವರ ಮೈ ಜುಂ ಎನ್ನುವಂತಿದೆ ಹೆಬ್ಬಾವು ಹಾಗೂ ಮೊಸಳೆ ನಡುವೆ ನಡೆದಿರುವ ಹೋರಾಟ. ಒಂದೆಡೆ ಆಹಾರವಾಗಿ ಮೊಸಳೆಯನ್ನು ನುಂಗುವ ಹಾವಿನ ಪ್ರಯತ್ನವಾದರೆ, ಮತ್ತೊಂದೆಡೆ ಆ ಹಾವಿನಿಂದ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಮೊಸಳೆ ಪಡುತ್ತಿರುವ ಪ್ರಯತ್ನ , ಜೀವಕ್ಕಾಗಿ ಹೋರಾಟ ಎನ್ನುವುದು ಅಕ್ಷರಶಃ ಸತ್ಯ ಎಂಬಂತೆ ಇದೆ.

ಮೊಸಳೆ ಹಾಗೂ ಹೆಬ್ಬಾವಿನ ನಡುವೆ ನಡೆದ ಭೀಕರ ಹೋರಾಟದಲ್ಲಿ ಕೊನೆಗೆ ಹೆಬ್ಬಾವು ಇಡೀ ಮೊಸಳೆಯನ್ನು ನುಂಗುವಲ್ಲಿ ಯಶಸ್ವಿಯಾಗಿದೆ. ಹೆಬ್ಬಾವು ಹಾಗೂ ಮೊಸಳೆ ನಡುವೆ ನಡೆದ ಮೈ ನವಿರೇಳಿಸುವ ಈ ಹೋರಾಟ ನಡೆದಿರುವುದು ಆಸ್ಟ್ರೇಲಿಯಾದ ಮೌಂಟ್ ಇಸಾ , ಕ್ವೀನ್ಸ್ ಲ್ಯಾಂಡ್ ನಲ್ಲಿ. ಅದರ ಫೋಟೋಗಳನ್ನು ತೆಗೆದಿರುವುದು ಹಾಗೂ ವಿಡಿಯೋ‌ ಮಾಡಿರುವುದು ನಿಜಕ್ಕೂ ರೋಚಕವಾದ ಅನುಭವವೇ ಸರಿ. ಈಗ ಈ ಚಿತ್ರಗಳು ಜಗತ್ತಿನಾದ್ಯಂತ ಜನರಿಗೆ ಒಂದು ವಿಶಿಷ್ಠವಾದ ಅನುಭವ ನೀಡುತ್ತದೆ.

ಆಸ್ಟ್ರೇಲಿಯಾದ ಜಿ. ಜಿ ವೈಲ್ಡ್ ಲೈಫ್ ರೆಸ್ಕ್ಯೂ ಸಂಘಟನೆ ಆ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಆನ್ ಲೈನ್ ನಲ್ಲಿ ಶೇರ್ ಮಾಡಿದೆ.
ಈ ಹಾವು ಆಸ್ಟ್ರೇಲಿಯಾದ ಎರಡನೇ ಅತ್ಯಂತ ದೊಡ್ಡ ಹಾವು ಎಂಬ ಖ್ಯಾತಿ ಪಡೆದಿದ್ದು, ಪಶ್ಚಿಮ ಆಸ್ಟ್ರೇಲಿಯಾದ ಅತ್ಯಂತ ದೊಡ್ಡ ಹಾವಾಗಿದ್ದು ಆಲಿವ್ ಪೈಥಾನ್ ಎಂದೇ ಹೆಸರು ಪಡೆದಿದ್ದು ಇದು ಕ್ರೊಕೊಡೈಲಸ್ ಜಾನ್‍ಸ್ಟೋನಿ ಎಂಬ ಹಾವನ್ನು ನುಂಗಿ ಹಾಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here