ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಗುರುವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರು ಹಾವಾಡಿಸಿದ ವಿಷಯ ದೊಡ್ಡ ಸುದ್ದಿಯಾಗಿತ್ತು. ಆದರೆ ಈಗ ಅದೇ ಅವರಿಗೆ ಕಂಟಕವಾಗಿ ಕೂಡಾ ಪರಿಣಮಿಸಿದೆ. ಏಕೆಂದರೆ ಅವರ ಈ ಕಾರ್ಯದ ವಿರುದ್ಧ ವಕೀಲರೊಬ್ಬರು ದೂರು ನೀಡಿದ್ದಾರೆ. ಉತ್ತರ ಪ್ರದೇಶದ ಪ್ರಧಾನ ವನ್ಯಜೀವಿ ಸಂರಕ್ಷಣಾಧಿಕಾರಿಯವರಿಗೆ ದೂರು ನೀಡುವ ಮೂಲಕ ಪ್ರಿಯಾಂಕ ಗಾಂಧಿ ವಾದ್ರಾ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ವಕೀಲರಾದ ಗೌರಿ ಮೌಲೇಖಿ ಅವರು ಮನವಿ ಮಾಡಿಕೊಂಡಿದ್ದಾರೆ. ಅವರು ದೂರು ನೀಡಲು ಕಾರಣ ಏನೆಂದು ತಿಳಿಯೋಣ.

ಹಾವಾಡಿಗನ ಹಾವನ್ನು ಮುಟ್ಟಿ ಆಡಿಸಿದ್ದ ಪ್ರಿಯಾಂಕ ಅವರು ತಮ್ಮ ಕೃತ್ಯದಿಂದ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ಪ್ರಿಯಾಂಕ ಅವರ ಪ್ರಚಾರದ ವೇಳೆ ಅಕ್ರಮವಾಗಿ ಹಾವುಗಳನ್ನು ತರಲಾಗಿತ್ತು. ಅವುಗಳನ್ನು ಪ್ರಿಯಾಂಕ ಮುಟ್ಟಿ ಸವರುವ ಮೂಲಕ ಪರೋಕ್ಷವಾಗಿ ಅವುಗಳನ್ನು ಹಿಡಿಯುವ, ಭೇಟೆಯಾಡುವ ಹಾಗೂ ಅವುಗಳನ್ನು ಮುಟ್ಟುವ ಜನರಿಗೆ ಅದು ಪ್ರಚೋದನೆ ನೀಡದಂತಾಗಿದೆ ಎಂದು ಗೌರಿ ತಮ್ಮ ದೂರಿನ ಮೂಲಕ ಆರೋಪವನ್ನು ಮಾಡಿದ್ದಾರೆ. ಆದ್ದರಿಂದ ಪ್ರಿಯಾಂಕ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಮಾದ್ಯಮಗಳಲ್ಲಿ ಪ್ರಿಯಾಂಕ ಅವರು ಹಾವಾಡಿಸಿದ ವರದಿಗಳು, ಫೋಟೋಗಳು ಹಾಗೂ ವಿಡಿಯೋವನ್ನು ಗೌರಿಯವರು ತಮ್ಮ ದೂರು ಪತ್ರದೊಂದಿಗೆ ಸಾಕ್ಷಿಯಾಗಿ ನೀಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಪ್ರಿಯಾಂಕ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದರ ಜೊತಗೆ ಈಗಾಗಲೇ ರಾಯ್ ಬರೇಲಿಯಲ್ಲಿ ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಂಡಿದ್ದಾರೆ ಎಂದು ಚುನಾವಣಾ ಆಯೋಗ ಪ್ರಿಯಾಂಕ ಅವರಿಗೆ ನೋಟೀಸ್ ಜಾರಿ ಮಾಡಿತ್ತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here