ಕೆಲವೊಂದು ಬಾರಿ ನಾವು ಊಹೆ ಮಾಡದೇ ಇರುವಂತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದು ಭಾರೀ ವೈರಲ್ ಆಗುತ್ತಿದೆ. ವಾಟ್ಸಾಪ್ ಸ್ಟೇಟ್ಸ್, ಫೆಸ್ ಬುಕ್, ಟ್ವಿಟರ್, ಇನ್ಸ್ಟಾಗ್ರಾಂ ಹೀಗೆ ಎಲ್ಲೆಲ್ಲೂ ಈ ಫೋಟೋದ್ದೇ ಕಾರುಬಾರು. ವ್ಯಾಪಕವಾಗಿ ಶೇರ್ ಆಗುತ್ತಿರುವ ಈ ಫೋಟೋದಲ್ಲಿ ಚಿರತೆ ಎಲ್ಲಿದೆ ಎಂದು ಹುಡುಕಾಡಿ ಎಂಬ ಚಾಲೆಂಜ್ ಎಸೆಯಲಾಗಿದೆ.Bella Lack ಹೆಸರಿನ ಟ್ವಿಟರ್ ಬಳಕೆದಾರರೊಬ್ಬರು ಈ ಫೋಟೋ ಶೇರ್ ಮಾಡಿಕೊಳ್ಳುತ್ತಾ ‘ಯಾರೋ ಒಬ್ಬರು ಈ ಫೋಟೋ ನನಗೆ ಕಳುಹಿಸಿ, ಇದರಲ್ಲಿರುವ ಚಿರತೆ ಹುಡುಕಿ ಎಂದು ಸವಾಲೆಸೆದರು.

ಆರಮಭದಲ್ಲಿ ನಾನಿದೊಂದು ಜೋಕ್ ಅಂತ ಭಾವಿಸಿದ್ದೆ. ಆದರೆ ಅದನ್ನು ಪತ್ತೆ ಹಚ್ಚಿದ ಬಳಿಕ ಿದು ತಮಾಷೆಯಲ್ಲ ಅಂತ ಗೊತ್ತಾಯ್ತು. ನೀವೂ ಪತ್ತೆ ಹಚ್ಚಬಲ್ಲಿರಾ?’ ಎಂದು ಕೇಳಿದ್ದಾರೆ.ಈ ಚಾಲೆಂಜ್ ವೈರಲ್ ಆಗುತ್ತಿದ್ದಂತೆಯೇ ಜನರು ಚಿರತೆ ಹುಡುಕಲಾರಂಭಿಸಿದ್ದಾರೆ.

ಆದರೆ ಎಷ್ಟೇ ಹುಡುಕಿದರೂ ಸಿಗದಾಗ ಪೆಚ್ಚು ಮೋರೆ ಹಾಕಿದ್ದಾರೆ. ನಿಮಗೇನಾದ್ರೂ ಕಾಣಿಸುತ್ತಾ ನೋಡಿ.ನಿಮಗೂ ಕಾಣಿಸಿಲ್ಲ ಎಂದರೆ, ಈ ಕೆಳಗಿನ ಫೋಟೋ ನೋಡಿ. ಈ ಚಾಲೆಂಜ್ ಸ್ವೀಕರಿಸಿದ ಟ್ವಿಟರ್ ಬಳಕೆದರನೊಬ್ಬ ಕೊನೆಗೂ ಫೋಟೋದಲ್ಲಿರುವ ಚಿರತೆಯನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here