ವಿಶ್ವದ ಬಹುತೇಕ ರಾಷ್ಟ್ರಗಳು ಕೋವಿಡ್ 19 ನಿಂದ ತಪ್ಪಿಸಿಕೊಳ್ಳಲು ಲಾಕ್ ಡೌನ್ ಮೊರೆ ಹೋಗಿವೆ. ಅಮೆರಿಕ ಇರಾನ್  ಇಟಲಿ ಚೀನಾ ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಕೊರೊನಾ ಗೆ ಜನರು ಭಯಭೀತರಾಗಿದ್ದಾರೆ. ಅದರಲ್ಲೂ ಅಮೆರಿಕ, ಸ್ಪೇನ್, ಇಟಲಿ, ಇರಾನ್ ದೇಶಗಳಲ್ಲಿ ಕೋರೋನ ಅಟ್ಟಹಾಸ ಮೆರೆದಿದ್ದು ಪ್ರತಿದಿನ ಕೊರೋನ ಗೆ ಸಾಯುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಲಿದೆ. ಕೊರೋನೋ ವಿನಿಂದಾಗಿ ಇಟಲಿಯಲ್ಲಿ ಜನರು ಭಯಭೀತರಾಗಿದ್ದು ಪ್ರತಿದಿನ ಕೋವಿಡ್ ಸೋಂಕಿನಿಂದ ಸಾಯುತ್ತಿರುವವರ ಸಂಖ್ಯೆ ಸಹ ಹೆಚ್ಚಾಗಿದೆ.

ಈ ನಡುವೆ ಕಳೆದ ಮೂರು ದಿನಗಳಿಂದ ಇಂಟರ್ನೆಟ್ನಲ್ಲಿ ಕೆಲವು ಫೋಟೋಗಳು ಸಾಕಷ್ಟು ವೈರಲ್ ಆಗುತ್ತಿದೆ. ಈ ಫೋಟೋಗಳಲ್ಲಿ ರಸ್ತೆಗಳಲ್ಲಿ ಹಣ ಎಸೆದಿದ್ದು ಈ ಫೋಟೋಗಳನ್ನು ಇಟಲಿ ದೇಶದ ದೃಶ್ಯ  ಎಂದು ಜನರು ವೈರಲ್ ಮಾಡುತ್ತಿದ್ದಾರೆ.ಕೊರೊನಾ ಬಂದ್ಮೇಲೆ ಇಟಲಿಯಲ್ಲಿ ಜನರು ಹಣಕ್ಕೆ ಬೆಲೆ ಇಲ್ಲ ಅಂತ ರಸ್ತೇಲಿ ಎಸೆದಿದ್ದಾರೆ ಎಂದು ರಸ್ತೆಗಳಲ್ಲಿ ಹಣ ಇರುವ ಫೋಟೋಗಳನ್ನು ಅಪ್ಲೋಡ್ ಮಾಡಿ ಇದು ಇಟಲಿ ದೇಶದ ಫೋಟೋಗಳು ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ.

ಆದರೆ ಈ ಫೋಟೋಗಳು ಇಟಲಿ ಅಲ್ಲ ಎಂಬುದು ಸಾಬೀತಾಗಿದ್ದು ಈ ಫೋಟೋಗಳು 2019ರ ಫೋಟೋಗಳು ಎಂದು ತಿಳಿದುಬಂದಿದೆ. ಆ ಫೋಟೋಸ್ ಕಳೆದ ವರ್ಷ ಮಾರ್ಚ್ ನಲ್ಲಿ ತೆಗೆದಿರುವುದು.. ಅದು ವೆನಿಜುವೆಲಾದ ಹಳೆಯ ಕರೆನ್ಸಿ… ಉಪಯೋಗಕ್ಕೆ ಇಲ್ಲದೇ ಇರುವಾಗ ವೆನಿಜುವೆಲಾದಲ್ಲಿ ರಸ್ತೆಗೆ ಎಸೆದ ಕರೆನ್ಸಿ ಎಂದು ತಿಳಿದುಬಂದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here