ಸಾಮಾಜಿಕ ಜಾಲತಾಣಗಳ ಮಾಯೆಯೋ, ಅದರ ಪ್ರಭಾವವೋ ಎಂಬಂತೆ ರಾತ್ರಿ ಕಳೆದು ಬೆಳಗಾಗೋ ಟೈಂ ಗೆ ಎಲ್ಲೋ ಸಾಮಾನ್ಯರ ತರ ಇದ್ದೋರು ಕೂಡಾ ಸೆಲೆಬ್ರಿಟಿಗಳ ತರ ಹೊಳೆದು ಬಿಡ್ತಾರೆ. ಇಷ್ಟು ದಿನ ಸುದ್ದಿ ಆಗದೇ ಇರೋರು ಕೂಡಾ ಇದ್ದಕ್ಕಿದ್ದಂತೆ ಎಲ್ಲಾ‌ ಸುದ್ದಿಗಳಲ್ಲಿ ತುಂಬಿ ಹೋಗ್ತಾರೆ. ಇತ್ತೀಚಿಗೆ ಅಂತದ್ದೇ ಒಂದು ಬೆಳವಣಿಗೇಲಿ ಮೂರು ಜನ ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ದಿಢೀರ್ ಎಂದು ಸುಪ್ರಸಿದ್ಧರಾಗಿಬಿಟ್ಟರು. ಅವರ ಫೋಟೋಗಳ ತಾಜಾ ಸುದ್ದಿ ತರೋ ಸಮಾಚಾರ ಪತ್ರಿಕೆಗಳ ತರ ಎಲ್ಲಾ‌ ಕಡೆ ವೈರಲ್ ಕೂಡಾ ಆಗಿ ಹೋಯ್ತು. ದೇಶದಲ್ಲಿ ಯಾರಿವ್ರು? ಅನ್ನೋ ಕುತೂಹಲ ಹುಟ್ಟ್ ಹಾಕ್ತು.

ಆ‌ ಮೂವರಲ್ಲಿ ಒಬ್ರು ಬೆಂಗಳೂರಿನ ರಾಯೆಲ್ ಚಾಲೆಂಜರ್ಸ್ ತಂಡಕ್ಕೆ ಪ್ರೋತ್ಸಾಹ ಕೊಡ್ತಾ ಕ್ಯಾಮೆರಾ‌ ಕಣ್ಣುಗಳಿಗೆ ಕಾಣಿಸಿಕೊಂಡ ದೀಪಿಕಾ ಘೋಷ್ , ರಾಯೆಲ್ ಚಾಲೆಂಜರ್ಸ್ ಗೆ ಪ್ರೋತ್ಸಾಹ ನೀಡುತ್ತಾ ಬಾವುಟ ಹಾರಿಸಿದ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿ ಒಂದೇ ದಿನದಲ್ಲಿ ಆಕೆ ಒಬ್ಬ ಸ್ಟಾರ್ ಆಗಿ ಬಿಟ್ಟಳು ಹಾಗೂ ಸಾವಿರಗಳಲ್ಲಿ ಇದ್ದ ಆಕೆಯ ಇನ್ಸ್ಟಾಗ್ರಾಂ ಫಾಲೋಯರ್ಸ್ ಒಂದೇ ದಿನದಲ್ಲಿ ಲಕ್ಷಕ್ಕೆ ಏರಿ ಬಿಟ್ಟರು. ಇನ್ನೊಂದು ಘಟನೆಯಲ್ಲಿ ಕೂಡಾ ಇದೇ ರೀತಿ ಕ್ರಿಕೆಟ್ ನೋಡಲು ಬಂದ ಹುಡುಗಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದೇ‌ ತಡ ಪಾಪುಲರ್ ಆಗಿ ಹೋದ್ಲು.

ಹೈದ್ರಾಬಾದ್ ನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಟೀಂಗೆ ಸಪೋರ್ಟ್ ಮಾಡ್ತಾ ಇದ್ದ ಯುವತಿ ಕ್ಯಾಮೆರಾ ಮೆನ್ ಕಣ್ಣಿಗೆ ಬಿದ್ದಿದ್ದಾಳೆ. ಆ ಯುವತಿಯ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಯಾರೀ ಬೆಡಗಿ ಅನ್ನೋ ಸರ್ಚ್ ಆರಂಭವಾಗಿದೆ. ಇನ್ನು ಕಡೆಯದಾಗಿ ಸಾಮಾಜಿಕ ಜಾಲತಾಣಗಳಿಂದ ಫೇಮಸ್ ಆದ ಆ ಇನ್ನೊಬ್ಬ ಮಹಿಳೆ ಯಾರಂದ್ರೆ ಇತ್ತೀಚಿಗೆ ಹಳದಿ ಬಣ್ಣದ ಸೀರೇಲಿ, ಗಾಗಲ್ಸ್ ಧರಿಸಿ ಮತ ಯಂತ್ರ ಕೈಯಲ್ಲಿ ಹಿಡಿದು ಬರ್ತಾ ಇರೋ ಮತಗಟ್ಟೆ ಅಧಿಕಾರಿ ನಳಿನಿ ಸಿಂಗ್ ಅವರು.

ಗ್ಲಾಮರಸ್ ಆಗಿದ್ದ ಅವರ ಫೋಟೋಗಳು ಕೂಡಾ ಬಹಳ ಬೇಗ ವೈರಲ್ ಆಗಿ ಮತಗಟ್ಟೆ ಅಧಿಕಾರಿ ಎಲ್ರ ಗಮನ ಸೆಳೆದಿದ್ದು ಮಾತ್ರ ಅಲ್ದೆ ದಿಢೀರ್ ಅಂತ ದೇಶ ಪೂರ್ತಿ ಫೇಮಸ್ ಆಗಿಬಿಟ್ರು. ಅದೂ ಅಲ್ದೇ ಅವರಿದ್ದ ಮತ ಗಟ್ಟೇಲಿ ದಾಖಲೆ ಪ್ರಮಾಣದಲ್ಲಿ ಮತದಾನ‌ ಕೂಡಾ ಆಗಿದೆ ಅನ್ನೋ‌ ಸುದ್ದಿ ಕೂಡಾ ಹರಡಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here