ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಕೆಲ ಪೋಸ್ಟ್ ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಹಾಗೆ ವೈರಲ್ ಆಗುವ ಪೋಸ್ಟ್ ಗಳಲ್ಲಿ ಕೆಲವು ಉಪಯುಕ್ತ ಆಗುವಂತಹ ಪೋಸ್ಟ್ ಸಹ ಇರುತ್ತವೆ. ಹಾಗೆ ವೈರಲ್ ಆಗಿರುವ ಪೋಸ್ಟ್ ಗಳಲ್ಲಿ ಇದು ಒಂದು… ಓದಿ..ಈತನ ಹೆಸರು ಮಧು ಮಧುಸೂಧನ್ . ನಾಲ್ಕನೇ ಸೆಮಿಸ್ಟರ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಶನಿವಾರ ಮತ್ತು ಭಾನುವಾರ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾರೆ . ಶನಿವಾರ ಅಂದರೆ ನಿನ್ನೆ ಸಾಯಂಕಾಲ ಹೀಗೆ ತನ್ನ ಸರದಿಗಾಗಿ ಕಾಯುತ್ತ ಕುಳಿತಿದ್ದಾಗ ನನ್ನ ಕಣ್ಣಿಗೆ ಅಲ್ಲ.

ಯಾರು ಒಬ್ಬರ ಕಣ್ಣಿಗೆ ಬಿದ್ದರು . ಹಾಗೆ ಮಾತಾಡಿಸಿದೆೆ.  ಒಂದು ಡೆಲಿವರಿಗೆ ಐವತ್ತು ರೂಪಾಯಿ ಕೊಡುತ್ತಾರಂತೆ . ೧೭ ಡೆಲಿವರಿ ನಂತರ ಮಾಡುವ ಪ್ರತಿ ಡೆಲಿವರಿಗೆ ೧೦೦ ರೂಪಾಯಿ ಕೊಡುತ್ತಾರಂತೆ . ವಾರಾಂತ್ಯದಲ್ಲಿ ೨೫ ಡೆಲಿವರಿ ದಿನಕ್ಕೆ ಅಂದರೆ ಎರಡು ದಿನದಲ್ಲಿ ೫೦ ಜನರಿಗೆ ಆಹಾರ ತಲುಪಿಸುತ್ತಾರೆ . ಹೀಗೆ ಮಾಡುವುದರಿಂದ ಎರಡು ದಿನದಲ್ಲಿ ೩೩೦೦ ರೂಪಾಯಿ ದುಡಿಯುತ್ತಾರಂತೆ . ೪೦೦ ರಿಂದ ೫೦೦ ರೂಪಾಯಿ ಪೆಟ್ರೋಲ್ ಗೆ ಖರ್ಚಾಗುತ್ತಂತೆ . ೨೮೦೦/೨೯೦೦ ಉಳಿಸಿಕೊಳ್ಳಬಹದು ಎಂದಾರತ .

ಇಂತಹ ವ್ಯವಸ್ಥೆ ಬಂದು ನಮ್ಮಂತ ಬಡ ವಿದ್ಯಾರ್ಥಿಗಳು ಸ್ವಾಭಿಮಾನದಿಂದ ಬದುಕವಂತಾಗಿದೆ . ಯಾರ ಮುಂದೆಯೂ ಕೈ ಒಡ್ಡಬೇಕಾದ ಪರಿಸ್ಥಿತಿ ಇಲ್ಲ ಎಂದರು ಮಧು . ಓದಿಗೆ ಸಮಯ ಹೇಗೆ ಹೊಂದಿಸಿಕೊಳ್ಳುತ್ತೀರಿ ಎಂದೆ , ಆತ ನಕ್ಕು ಸಾರ್ ಶನಿವಾರ ಮತ್ತು ಭಾನುವಾರ ಮಾತ್ರ ಈ ಕೆಲಸ ಉಳಿದ ಐದು ದಿನ ಇದೆಯಲ್ಲ . ಅಲ್ಲಿ ಇಲ್ಲಿ ಸುತ್ತಿ ಸಮಯ ಕಳೆಯುವ ಬದಲು ಆ ಐದು ದಿನ ಸರಿಯಾಗಿ ಉಪಯೋಗಿಸಿಕೊಂಡರೆ ಸಾಕು ಎಂದರು . ಸರಿ ಫೋಟೋ ಗೆ ಫೋಸ್ ಕೊಡ್ರಿ ಎಂದದ್ದಕ್ಕೆ ‘ ಫೋಟೋ ತೆಗೆಸಿಕೊಳ್ಳುವಂತ ಕೆಲಸ ಇನ್ನು ಏನು ಮಾಡಿಲ್ಲ ಸಾರ್ ಆ ದಿನ ಬರುತ್ತೆ ಆಗ ನನ್ನ ಮುಖ ಕಾಣುತ್ತೆ ಬಿಡಿ ಈಗ ಬೇಡ ‘ . ಎಂದರು . ನಾನು ಬಲವಂತ ಮಾಡಲಿಲ್ಲ .

ನಾನು ವಿದ್ಯಾರ್ಥಿ ಇದ್ದ ಕಾಲದಲ್ಲಿ ಹಣ ಸಂಪಾದನೆಗೆ ಇಂತಹ ಮಾರ್ಗಗಳು ಇರಲಿಲ್ಲ . ಅಮ್ಮನ ಜೊತೆ ಕೂತು ಮಾವಿನ ಕಾಯಿ ಹೆಚ್ಚಿ ಉಪ್ಪಿನಕಾಯಿ ಹಾಕುವುದು , ಹಪ್ಪಳ , ಸಂಡಿಗೆ , ಬಾಳಕ ಇತ್ಯಾದಿ ತಯಾರಿಸುವುದು ಮತ್ತು ಅದನ್ನ ಮಾರುವುದು , ಪೇಪರ್ ಕವರ್ ಮಾಡಿ ಅದನ್ನ ಮೆಡಿಕಲ್ ಶಾಪ್ ನವರಿಗೆ ಮಾರುವುದು ಹೀಗೆ ನಮಗಿದ್ದ ಆಯ್ಕೆಗಳು ಬಹಳ ಕಡಿಮೆ .ಹಣವೂ ಕಡಿಮೆ .

ಇವತ್ತು ಯಾರಾದರೂ ಬಡತನ ಅಂತ ಅಳುತ್ತಾ ಕೊತರೆ ಅದು ಅವರ ಮಾನಸಿಕ ಬಡತನದ ಪ್ರತಿರೂಪವೇ ಹೊರತು ಬೇರೇನಲ್ಲ .

ಮಾಡೋಕ್ಕೆ_ಸಾವಿರ_ಕೆಲಸವಿದೆ

ಶುಭವಾಗಲಿ .

ಹೀಗೊಂದು ಪೋಸ್ಟ್ ಯಾರು ಬರೆದರೋ ಸರಿಯಾದ ಮಾಹಿತಿ‌ ಇಲ್ಲ.ಆದರೆ ಉದ್ಯೋಗ ಮಾಡಿಕೊಂಡು ವಿದ್ಯಾಭ್ಯಾಸ ಅಥವಾ ಮನೆ ಖರ್ಚು ನಿಭಾಯಿಸುವ ಯುವಕರಿಗೆ ಈ ಪೋಸ್ಟ್  ಮಾದರಿಯಾಗಲಿ…

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here