ಅನೇಕರಿಗೆ ಚಿಕನ್ ಖಾದ್ಯಗಳು ಅಂದ್ರೆ ಬಹಳ ಇಷ್ಟ. ಚಿಕನ್ ವೆರೈಟಿಗಳನ್ನ ಬಹಳ ಆಸೆಯಿಂದ ತಿಂದು ಅದರ ರುಚಿಯನ್ನು ಸವಿತಾರೆ. ಇಂತಹ ಜನರಿಗಾಗಿಯೇ ಇಂಡೋನೇಷ್ಯಾದಲ್ಲಿ ಒಂದು ವಿಶಿಷ್ಟವಾದ ಕೋಳಿಯ ಜಾತಿ ಇದೆ. ಇದರ ವಿಶೇಷ ಏನು ಅಂದ್ರೆ ಈ ಕೋಳಿಯ ಮಾಂಸ ಬೇರೆಲ್ಲಾ ಕೋಳಿಗಳಿಗಿಂತ ಬಹಳ ರುಚಿಯಾಗಿ ಇರೋದಲ್ಲದೆ, ಬೇರೆ ಚಿಕನ್ ಗಿಂತ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಕೂಡಾ ಇದ್ರಲ್ಲಿ ಇದ್ಯಂತೆ. ಈ ಮಾತು ಕೇಳಿದ ಕೂಡ್ಲೇ ಚಿಕನ್ ಪ್ರಿಯರ ಬಾಯಲ್ಲಿ ನೀರೂರ್ತಾ ಇರಬೇಕು. ಆದ್ರೆ ಒಂದ್ನಿಮಿಷ ಕಾದು ನೋಡಿ, ಯಾಕಂದ್ರೆ ಈ ಕೋಳಿಯ ವಿಶೇಷತೆಗಳಲ್ಲಿ ಇನ್ನೂ ಕೆಲವು ಮುಖ್ಯವಾದ ವಿಚಾಗಳು ಇವೆ.

ಅಯಾಮ್ ಸೆಮಿನಿ ಎಂದು ಕರೆಯಲ್ಪಡೋ ಈ ಕೋಳಿ ಜಾತಿ ಜಗತ್ತಿನಲ್ಲೇ ಇಂದು ವಿರಳವಾದ ಕೋಳಿಯ ಜಾತಿ ಆಗಿದೆ‌. ಈ ಕೋಳಿಯ ದೇಹ ಸಂಪೂರ್ಣವಾಗಿ ಕಪ್ಪು ಬಣ್ಣ. ಅದರ ಉಗುರಿನಿಂದ ಹಿಡಿದು, ಅದ ದೇಹದ ಚರ್ಮ, ರೆಕ್ಕೆಗಳು ಅದರ ಮಾಂಸ ಎಲ್ಲಾ ಕಪ್ಪು ಬಣ್ಣ. ಅದರ ರಕ್ತ ಮಾತ್ರಾನೇ ಕೆಂಪು ಬಣ್ಣ. ಉಳಿದಂತೆ ಈ ಕೋಳಿಯಲ್ಲಿ ಕಪ್ಪು ಬಣ್ಣ ಬಿಟ್ಟು ಬೇರೆ ಬಣ್ಣ ಕಾಣೋಕೆ ಸಾಧ್ಯಾನೇ ಇಲ್ಲ. ಈ ಕಪ್ಪು ಬಣ್ಣವೇ ಆ ಕೋಳಿಯ ವಿಶೇಷ ಅಂತ ಕೂಡಾ ಹೇಳಬಹುದು. ಇನ್ನು ಈ ಕೋಳಿ ಇಡೋ ಮೊಟ್ಟೆ ಮಾತ್ರ ಬಿಳಿ ಬಣ್ಣದ್ದೇ,ಆದರೆ ಸ್ವಲ್ಪ ಕಂದು ಬಣ್ಣದಲ್ಲಿ ಕಾಣುತ್ತೆ. ಇಂತಹ ಒಂದು ಅಪರೂಪದ ಪ್ರಬೇಧದ,ರುಚಿಯಾದ ಮಾಂಸ ಕೊಡೋ ಈ ಕೋಳಿಯ ಬೆಲೆ ವಿಶ್ವದಲ್ಲೇ ಅತಿ ಹೆಚ್ಚು ಅಂತ ಹೇಳಬಹುದು.

ಈ ಕೋಳಿಯ ಬೆಲೆ ಸುಮಾರು 2500 ಡಾಲರ್. ಅಂದ್ರೆ ಭಾರತದಲ್ಲಿ ಸುಮಾರು 1,70,000 ವರೆಗೂ ಇದೆ. ಇದರ ಮರಿಯ ಬೆಲೆಯೇ ಸುಮಾರು 12 ರಿಂದ 13 ಸಾವಿರ ರೂಪಾಯಿಗಳು ಅಂದ್ರೆ ಆ ಕೋಳಿಯ ವಿಶೇಷತೆ ಏನಂತ ಗೊತ್ತಾಗುತ್ತೆ ಅಲ್ವಾ. ಅಲ್ಲದೆ ಇದನ್ನು ಪೌಲ್ಟ್ರಿ ಫಾರಂಗಳ ಲ್ಯಾಂಬೊರ್ಗಿನಿ ಅಂತ ಕೂಡಾ ಕರೀತಾರೆ. ಈ ಪ್ರಬೇಧದ ಚಿಕನ್ ಇಂಡೋನೇಷ್ಯ ದಿಂದ ಹೊರಗೆ ಸಿಗುವುದು ಅಪರೂಪ. ಆದರೆ ಬಹಳ ರುಚಿಯಾದ ಚಿಕನ್ ಬಯಸುವವರು ಶ್ರೀಮಂತರು ಇದರ ರುಚಿಯನ್ನು ನೋಡಲು ಸಾಧ್ಯ. ಸಾಮಾನ್ಯ ಜನರಿಗೆ ಇದು ಕೈಗೆಟುಕುವುದು ಕಷ್ಟವೇ ಸರಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here