
ಮುಂಬೈನಲ್ಲಿ ವಾಸ್ತವ್ಯವನ್ನು ಹೂಡಿರುವ ರಾಜ್ಯದ ಅತೃಪ್ತ ಶಾಸಕರು ಅಲ್ಲಿ ಸುದ್ದಿ ಗೋಷ್ಠಿಯೊಂದನ್ನು ನಡೆಸಿದ್ದಾರೆ. ಸುದ್ದಿ ಗೋಷ್ಠಿ ನಡೆಸಿದ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು , ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸರಕಾರಕ್ಕೆ ನಮ್ಮ ಹತ್ತಿರ ಬರಬೇಡಿ , ಬಾಗಿಲು ಮುಚ್ಚಿಯಾಗಿದೆ ಎಂದು ಸ್ಪಷ್ಟವಾದ ಒಂದು ಸಂದೇಶವನ್ನು ರವಾನೆ ಮಾಡಿದ್ದಾರೆ. ಶಾಸಕ ಎಸ್.ಸಿ.ಸೋಮಶೇಖರ್ ಅವರು ಮಾತನಾಡುತ್ತಾ ನಾವೆಲ್ಲಾ ಶಾಸಕರು ಒಂದಾಗಿದ್ದೇವೆ, ರಾಜೀನಾಮೆಯನ್ನು ವಾಪಸ್ಸು ಪಡೆಯುವ ಪ್ರಶ್ನೆಯೇ ನಮ್ಮಲ್ಲಿ ಇಲ್ಲ ಎಂದು ಬಹಳ ನಿಷ್ಠುರವಾಗಿ ಹೇಳಿದ್ದಾರೆ ಸುದ್ದಿ ಗೋಷ್ಠಿಯಲ್ಲಿ.
ಈಗ ಅಲ್ಲಿರುವ 12 ಜನ ಶಾಸಕರೆಲ್ಲರೂ ಒಗ್ಗಟ್ಟಾಗಿದ್ದು, ಸುಧಾಕರ್ ಅವರು ಕೂಡಾ ನಮ್ಮ ಜೊತೆ ಸೇರಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಈ ಸುದ್ದಿ ಗೋಷ್ಠಿಯ ವೇಳೆ ಅಲ್ಲಿ ಉಪಸ್ಥಿತರಿದ್ದ ಎಂಟಿಬಿ ನಾಗರಾಜ್ ಅವರು ಕೂಡಾ ನಾವೆಲ್ಲರೂ ಇಲ್ಲಿಗೆ ಸ್ವ ಇಚ್ಛೆಯಿಂದ ಬಂದಿದ್ದು, ನಮ್ಮನ್ನು ಯಾರೂ ಇಲ್ಲಿಗೆ ಕರೆದುಕೊಂಡು ಬಂದಿಲ್ಲ ಎಂದು ಹೇಳುವ ಮೂಲಕ, ಎಂಟಿಬಿ ಅವರು ಇಂದು ಇದ್ದಕ್ಕಿದ್ದಂತೆ ಕಾಂಗ್ರೆಸ್ ಗೆ ಮಾಹಿತಿ ನೀಡದೆ ಮುಂಬೈಗೆ ತೆರಳಿದ್ದರು. ಅದಾದ ನಂತರ ಹುಟ್ಟಿದ ಅನೇಕ ಅನುಮಾನಗಳಿಗೆ ಅವರು ತಮ್ಮ ಹೇಳಿಕೆಯ ಮೂಲಕ ತೆರೆ ಎಳೆದಿದ್ದಾರೆ.
ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಒಂದೆಡೆ ಮುಖ್ಯಮಂತ್ರಿ ಅವರು ವಿಶ್ವಾಸ ಮತ ಯಾಚನೆಯ ಘೋಷಣೆಯನ್ನು ಮಾಡಿದ್ದು, ಅದನ್ನು ಯಶಸ್ವಿಗೊಳಿಸುವುದಾಗಿ ಹೇಳಿದ್ದರು. ಎಂಟಿಬಿ ನಾಗರಾಜ್ ಅವರು ನಿನ್ನೆಯಿಂದ ಕಾಂಗ್ರೆಸ್ ನಾಯಕರ ಮನವೊಲಿಕೆಗೆ ಒಲಿದಂತೆ ಕಂಡಿತ್ತು. ಆದರೆ ಇಂದು ಇದ್ದಕ್ಕಿದ್ದಂತೆ ಅವರು ನಡೆದುಕೊಂಡ ರೀತಿ ಮಾತ್ರ ಒಂದು ಸಂಚಲನ ಹುಟ್ಟು ಹಾಕಿದೆ.
ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.