ಕರ್ನಾಟಕ ರಾಜ್ಯ ರಾಜಕೀಯ ದೇಶದೆಲ್ಲೆಡೆ ಸಂಚಲನ ಸುದ್ದಿ ನೀಡುತ್ತಿದೆ. ಪ್ರತಿ ದಿನವೂ ಇಲ್ಲಿ ಹೊಸದೊಂದು ಸಂಘಟನೆ , ಹೊಸದೊಂದು ಹೇಳಿಕೆ, ಹೊಸದೊಂದು ವಿವಾದ ಹೀಗೆ ಜನಪರ ವಿಷಯಗಳಿಗಿಂತ ರಾಜಕಾರಣಿಗಳ ರಾಜಕೀಯವೇ ಪ್ರಸ್ತುತ ರಾಜ್ಯದಲ್ಲಿ ಎಲ್ಲದಕ್ಕಿಂತ ಆಸಕ್ತಿ ಹಾಗೂ ಕುತೂಹಲಕಾರಿ ಸಂಘಟನೆಗಳಿಗೆ ಕಾರಣವಾಗುತ್ತಿದೆ.‌ ಈಗ ಈ ಎಲ್ಲಾ ವಿಷಯಗಳಿಗೆ ಹೊಸದೊಂದು ಹೇಳಿಕೆ ಸೇರಿದ್ದು, ರಾಜಕೀಯ ವಲಯದಲ್ಲಿ ಸಿಡಿದ ಬಾಂಬ್ ಎಂದೇ ನಾವು ಹೇಳಬಹುದು.

ಈ ಹೊಸ ಸ್ಫೋಟಕ ವಿಷಯವನ್ನು ಸಿಡಿಸಿದ ಆ ರಾಜಕಾರಣಿ ಅಥವಾ ನಾಯಕ ಯಾರೆಂದರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ. ಅವರು ಮಾದ್ಯಮಗಳ ಮುಂದೆ ನೀಡಿರುವ ಹೇಳಿಕೆ ಈಗ ಸಂಚಲನ ಸೃಷ್ಟಿಸುತ್ತಿರುವುದು ಮಾತ್ರವಲ್ಲದೆ ಹತ್ತು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ ಇವರು ಹೇಳುವ ವಿಷಯಗಳು ಸತ್ಯಕ್ಕೆ ಎಷ್ಟು ಹತ್ತಿರವೆಂಬುದಕ್ಕೆ ಮಾತ್ರ ಯಾವುದೇ ರೀತಿಯ ಸ್ಪಷ್ಟತೆ ಆಗಲಿ, ನಿಖರತೆಯಾಗಲೀ ಅಥವಾ ಪರಿಮಾಣಗಳಾಗಲೀ ಇಲ್ಲದಿರುವುದು. ಆದರೆ ಅವರ ಹೇಳಿಕೆ ಮಾತ್ರ ಹಲವು ಬೆಳವಣಿಗೆಗಳಿಗೆ ದಾರಿ ಮಾಡಿಕೊಡುವುದಂತೂ ನಿಜ.

ಇಂದು ಬೀದರ್ ನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದ ಈಶ್ವರ ಖಂಡ್ರೆಯವರು ಸಭೆಯು ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯ ಸುಮಾರು ಶಾಸಕರು ಕಾಂಗ್ರೆಸ್ ಸೇರಲು ತೀವ್ರವಾದ ಆಸಕ್ತಿ ತೋರಿಸಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ. ಅಲ್ಲದೆ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಬೇಕೋ ಬೇಡವೋ ಎಂಬುದನ್ನು ಇನ್ನೂ ಪರಿಶೀಲನೆ ಮಾಡಲಾಗಿಲ್ಲ. ಅದರ ಬಗ್ಗೆ ಚರ್ಚೆ ಹಾಗೂ ಪರಿಶೀಲನೆಯ ನಂತರ ನಿರ್ಧಾರ ತೆಗೆದುಕೊಳ್ಳುಲಾಗುವುದು ಎಂದು ಸುದ್ದಿಗಾರರೊಂದಿಗೆ ಹೇಳಿದ್ದಾರೆ.

ಅದು ಮಾತ್ರವಲ್ಲದೆ ತಮ್ಮ ಕಾಂಗ್ರೆಸ್ ಪಾರ್ಟಿಯಲ್ಲಿ ಯಾರೇ ಒಬ್ಬ ಶಾಸಕರು ಬಿಜೆಪಿಗೆ ಹೋಗುವ ಅವಕಾಶವಿಲ್ಲ ಎಂದು ಹೇಳಿದರು. ತಮ್ಮ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯ ತೊಂದರೆಗಳಿಲ್ಲ ಎಂದು ಹೇಳುತ್ತಾ, ಕಾಂಗ್ರೆಸ್ ಪಕ್ಷ ತನ್ನ ಅಡಿಯಿಂದಲೇ ಸದೃಢವಾಗಿದೆಯೆಂದೂ, ಕಾಂಗ್ರೆಸ್ ಒಂದು ಬಲಿಷ್ಠ ಪಕ್ಷವಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಕಾಂಗ್ರೆಸ್ ಸೇರಲಿರುವ ಆ ಶಾಸಕರು ಯಾರು, ಅಥವಾ ಇದೆಲ್ಲಾ ಕೇವಲ ರಾಜಕೀಯ ಸ್ಟಂಟ್ ಅಷ್ಟೆಯೋ ಎಂಬುದಂತೂ ಈಗ ಯಕ್ಷ ಪ್ರಶ್ನೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here