ಜನನ ಹಾಗೂ ಮರಣ ಜೀವನದ ಎರಡು ಬದಲಾಗದ ಸತ್ಯಗಳು. ಮಗುವಿನ ಜನನ ಸಂತಸದ ಕ್ಷಣವಾದರೆ, ಮರಣ ನೋವನ್ನು, ಸಂಕಟವನ್ನು ನೀಡುತ್ತದೆ. ಆದರೆ ಈ ಎರಡು ಸತ್ಯಗಳನ್ನು ನಿರಾಕರಣೆ ಮಾಡುವುದು ಸಾಧ್ಯವೇ ಇಲ್ಲ. ಯಾರಾದರೂ ಮರಣ ಹೊಂದಿದಾಗ, ಅವರನ್ನು ಕಡೆಯ ಬಾರಿ ನೋಡಲು ಅಂದರೆ ಅಂತಿಮ ದರ್ಶನಕ್ಕೆ ಅವರ ಆಪ್ತರು, ರಕ್ತ ಸಂಬಂಧಿಗಳು ಎಲ್ಲರೂ ಬರುತ್ತಾರೆ. ಅಂತಿಮ ಸಂಸ್ಕಾರವನ್ನು ಅವರ ಧರ್ಮ, ಜಾತಿ, ಸಂಪ್ರದಾಯಕ್ಕೆ ಅನುಗುಣವಾಗಿ ನಡೆಸುತ್ತಾರೆ. ಆದರೆ ಹೀಗೆ ಅಂತಿಮ ಯಾತ್ರೆ, ಅಂತಿಮ ಸಂಸ್ಕಾರಕ್ಕೆ ಹೋಗಿ ಬಂದವರು, ತಮ್ಮ ಮನೆಗೆ ಬಂದ ಕೂಡಲೇ ಸ್ನಾನ ಮಾಡುವುದು ಮಾತ್ರ ಎಲ್ಲೆಡೆ ಕಂಡು ಬರುತ್ತದೆ. ಹಾಗಾದರೆ ಏಕೆ ಅಂತಿಮ ಸಂಸ್ಕಾರಕ್ಕೆ ಹೋಗಿ ಬಂದ ಮೇಲೆ ಸ್ನಾನ ಮಾಡಬೇಕು , ಅದರ ಹಿಂದೆ ಇರುವ ಕಾರಣವೇನು? ಎಂಬುದನ್ನು ತಿಳಿಯೋಣ ಬನ್ನಿ.

ಅಂತಿಮ ಯಾತ್ರೆಯ ಮೂಲಕ ಶವವನ್ನು ಸ್ಮಶಾನಕ್ಕೆ ತೆಗದುಕೊಂಡು ಹೋಗಿ ಸಂಪ್ರದಾಯ ಬದ್ಧವಾಗಿ ಸಂಸ್ಕಾರ ಮಾಡುತ್ತೇವೆ. ಧಾರ್ಮಿಕ ಕಾರಣಗಳ ಪ್ರಕಾರ ಸ್ಮಶಾನದಲ್ಲಿ ನಕಾರಾತ್ಮಕ ಶಕ್ತಿಗಳ ಸಂಚಾರ ಹೆಚ್ಚಾಗಿರುತ್ತದೆ. ಅಲ್ಲದೆ ಮರಣ ಹೊಂದಿದ ವ್ಯಕ್ತಿಯ ಆತ್ಮ ಕೂಡಾ ಅಲ್ಲೇ ಇರುತ್ತದೆ ಎಂಬುದು ನಂಬಿಕೆ. ದಹನ ಸಂಸ್ಕಾರ ಅಥವಾ ಶವ ಸಂಸ್ಕಾರದಿಂದ ಉಂಟಾಗುವ ನಕಾರಾತ್ಮಕ ಊರ್ಜಾ ಮನುಷ್ಯರ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುವ ಸಾಧ್ಯತೆಗಳು ಇರುತ್ತವೆ. ಅದಕ್ಕೆ ಶವ ಯಾತ್ರೆ ಅಥವಾ ಅಂತಿಮ ಯಾತ್ರೆಗೆ ಹೋಗಿ ಬಂದವರು, ಮನೆಗೆ ಬಂದ ಕೂಡಲೇ ಸ್ನಾನ ಮಾಡುವ ಮೂಲಕ ಅಂತಹ ನಕಾರಾತ್ಮಕ ಶಕ್ತಿಗಳಿಂದ ಮುಕ್ತರಾಗುವರು ಎಂಬುದು ನಂಬಿಕೆ.

ಎಲ್ಲಾ ವಿಷಯಗಳಿಗೂ ಎರಡು ಆಯಾಮಾಗಳಿದ್ದಂತೆ, ಶವ ಯಾತ್ರೆ, ಅಂತಿಮ ಸಂಸ್ಕಾರ ಮುಗಿಸಿ ಮನೆಗೆ ಬಂದ ಮೇಲೆ ಸ್ನಾನ ಮಾಡುವ ಸಂಪ್ರದಾಯಕ್ಕೆ ವೈಜ್ಞಾನಿಕ ಕಾರಣ ಕೂಡಾ ಇದೆ. ಮರಣಾ ನಂತರ ವ್ಯಕ್ತಿಯ ದೇಹದಲ್ಲಿ ಅನೇಕ ಬ್ಯಾಕ್ಟೀರಿಯಾ ಗಳು ಸಂಕ್ರಮಣಗೊಳ್ಳಲು ತೊಡಗುತ್ತವೆ. ಇವು ಶವಯಾತ್ರೆಯಲ್ಲಿ ಪಾಲ್ಗೊಂಡವರ ಸಂಪರ್ಕ ಕೂಡಾ ಪಡೆಯಬಹುದು. ಇಂತಹ ಸಾಂಕ್ರಾಮಿಕ ಬ್ಯಾಕ್ಟೀರಿಯಾಗಳ ಸೋಂಕನ್ನು ತಡೆಯಲು ದಹನ ಸಂಸ್ಕಾರದಿಂದ ಬಂದ ಕೂಡಲೇ ಸ್ನಾನ ಮಾಡಿ, ದೇಹವನ್ನು ಸೋಂಕು ಹರಡುವ ಬ್ಯಾಕ್ಟೀರಿಯಾ ಗಳಿಂದ ದೂರವಿಡುವ ಕಾರಣದಿಂದ ಸ್ನಾನ ಮಾಡಬೇಕು ಎನ್ನುತ್ತದೆ ವಿಜ್ಞಾನ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here