ಬಿಗ್ ಬಾಸ್ ಸೀಸನ್ ಏಳರಲ್ಲಿ ಮಿಂಚುತ್ತಿದ್ದಾರೆ ಶೈನ್ ಶೆಟ್ಟಿ. ಸದ್ಯಕ್ಕಂತೂ ಬಹಳಷ್ಟು ಪ್ರೇಕ್ಷಕರ ದೃಷ್ಟಿ ಶೈನ್ ಅವರ ಕಡೆ ನೆಟ್ಟಿದ್ದು, ಶೈನ್ ಬಿಗ್ ಹೌಸ್ ನ ಪ್ರಮುಖ ಆಕರ್ಷಣೆ ಎನಿಸಿದ್ದಾರೆ. ಶೈನ್ ಬಿಗ್ ಬಾಸ್ ಗೆ ಬರುವ ಮೊದಲು ಬನಶಂಕರಿ ಹತ್ತಿರ ತಮ್ಮದೇ ಆದ ಫುಡ್ ಟ್ರಕ್ ನಡೆಸುತ್ತಿದ್ದರು‌. ಇದಕ್ಕೆ ಕಾರಣ ಕೂಡಾ ಉಂಟು. ಧಾರಾವಾಹಿ ಬಿಟ್ಟ ನಂತರ ಸ್ವಲ್ಪ ಸಮಯದ ವಿರಾಮದ ಬಳಿಕ ಶೈನ್ ಸಿನಿಮಾ ಮಾಡುವ ಪ್ರಯತ್ನ ಮಾಡಿದ್ದರು‌. ಆದರೆ ಅದೃಷ್ಟ ಅವರಿಗೆ ಜೊತೆಯಾಗಲಿಲ್ಲ. ಹಾಗಂತ ಶೈನ್ ಧೃತಿಗೆಟ್ಟವರಲ್ಲ. ಬದಲಿಗೆ ನಟನೆಂಬ ಹಮ್ಮು ಬಿಮ್ಮು ಇಲ್ಲದೆ, ಫುಡ್ ಟ್ರಕ್ ನಡೆಸುತ್ತಾ ಜೀವನ ನಿರ್ವಹಣಗೆ ಮುಂದಾದರು.

ಸ್ವಾಭಿಮಾನದ ಜೀವನಕ್ಕಾಗಿ ಅವರು ತಮ್ಮದೇ ಫುಡ್ ಟ್ರಕ್ಕನ್ನು ಬನಶಂಕರಿ ಬಳಿ ನಡೆಸುತ್ತಾ ತಮ್ಮ ಜೀವನ ನಿರ್ವಹಣೆಯನ್ನು ಮಾಡುತ್ತಿದ್ದರು‌‌. ಆದರೆ ಈ ಬಾರಿ ಬಿಗ್ ಬಾಸ್ ಸೀಸನ್ ಏಳು ಶೈನ್ ಅವರಿಗೆ ಅವಕಾಶ ನೀಡಿತು. ಶೈನ್ ಬಿಗ್ ಹೌಸ್ ಸೇರಿದರು‌. ಹಾಗಾದರೆ ಶೈನ್ ಶೋ ನಲ್ಲಿ ಇರುವಾಗ ಅವರ ಫುಡ್ ಟ್ರಕ್ ಏನಾಗಿದೆ? ಅವರ ಜೀವನಾಧಾರವಾದ ಫುಡ್ ಟ್ರಕ್ ಬಗ್ಗೆ ಗಲ್ಲಿ ಕಿಚನ್ ಯೂಟ್ಯೂಬ್ ಚಾನೆಲ್ ನ ಕಿರಣ್ ಅವರು ಶೈನ್ ಅವರ ಫುಡ್ ಟ್ರಕ್ ಅನ್ನು ಹುಡುಕಿ ಹೊರಟು ಅದರ ಮೇಲೆ ಒಂದು ಕಾರ್ಯಕ್ರಮ ಮಾಡಿದ್ದು, ಅವರು ಫುಡ್ ಟ್ರಕ್ ಬಳಿ ಹೋದಾಗ ಅವರಿಗೊಂದು ಆಶ್ಚರ್ಯ ಅಲ್ಲಿ ಕಾದಿತ್ತು.

ಶೈನ್ ಅವರು ಬಿಗ್ ಹೌಸ್ ನಲ್ಲಿ ಇದ್ದಾರೆಂದು ಅವರ ಫುಡ್ ಟ್ರಕ್ ನಿಂತಿಲ್ಲ. ಬದಲಿಗೆ ಶೈನ್ ಅವರ ತಾಯಿ ತಮ್ಮ ಮಗನ ಹೊಟೇಲ್ ವ್ಯವಹಾರವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಮಗ ಆರಂಭ ಮಾಡಿರುವ ಬ್ಯುಸಿನೆಸ್ ಹಾಳಾಗಬಾರದೆಂದು ಸ್ವತಃ ತಾವೇ ಮುಂದೆ ನಿಂತು ಫುಡ್ ಟ್ರಕ್ ನಡೆಸುತ್ತಿದ್ದಾರೆ. ಗಲ್ಲಿ ಕಿಚನ್ ಕಾರ್ಯಕ್ರಮದ ಮೂಲಕ ಶೈನ್ ಅವರ ಫುಡ್ ಟ್ರಕ್ ಬಗ್ಗೆ ಈಗ ಅನೇಕರಿಗೆ ಮಾಹಿತಿ ದೊರಕಿದೆ. ಗಲ್ಲಿ ಕಿಚನ್ ನ ಕಿರಣ್ ಅವರು ಅಲ್ಲಿನ ಸಂಪೂರ್ಣ ಮಾಹಿತಿಯನ್ನು ತಮ್ಮ ವಿಡಿಯೋ ಮೂಲಕ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here