ದೇಶದೆಲ್ಲೆಡೆ ಹೊಸ ಟ್ರಾಫಿಕ್ ನಿಯಮ ಹಾಗೂ ದಂಡ ಜಾರಿಯಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲೂ ಕಟ್ಟು ನಿಟ್ಟಾಗಿ ಹೊಸ ನಿಯಮದನ್ವಯ ದಂಡ ವಸೂಲಿ ಮಾಡಲಾಗುತ್ತಿದೆ. ಈಗಾಗಲೇ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ನೂತನ ನಿಯಮ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇಷ್ಟಾದರೂ ನಿಯಮ ಉಲ್ಲಂಘಿಸಿ ಹಲವು ಕಡೆ ಭಾರಿ ಮೊತ್ತದ ದಂಡ ಕಟ್ಟಿದ ಘಟನೆ ವರದಿಯಾಗುತ್ತಿದೆ.ಹಲವಾರು ಜನರು ನೂತನ ದಂಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಸೋಶಿಯಲ್ ಮೀಡಿಯಾದಲ್ಲಿ ನಾನಾ ತರ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಕೆಲವರು ಹೆಚ್ಚಿನ ದಂಡ ವಸೂಲಿ ಮಾಡುವ ಮೊದಲು ಹಳ್ಳ ಕೊಳ್ಳದಿಂದ ಹಾಳಾಗಿರುವ ರಸ್ತೆಗಳನ್ನು ಮೊದಲು ಸರಿಪಡಿಸಿ ಎಂದು ಸರ್ಕಾರಗಳಿಗೆ ಚಾಟಿ ಬೀಸಿದ್ದಾರೆ.. ಹೊಸ ಟ್ರಾಫಿಕ್ ನಿಯಮಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪರ- ವಿರೋಧ ಚರ್ಚೆ ಕೂಡಾ ನಡೆಯುತ್ತಿದೆ. ನಟಿ ಸೋನು ಗೌಡ ಮುಖ್ಯಮಂತ್ರಿಯವರನ್ನು ಉದ್ದೇಶಿಸಿ ಟ್ವೀಟ್ ವೊಂದನ್ನು ಮಾಡಿದ್ದಾರೆ. ದಂಡ ವಿಧಿಸುವ ಮುನ್ನ ನೀವು ಒಳ್ಳೆಯ ರಸ್ತೆಗಳನ್ನು ಕೊಟ್ಟಿದ್ದೀರಾ ಎಂದು ನೋಡಿಕೊಳ್ಳಿ.

ಜನಸಾಮಾನ್ಯರು ಕಷ್ಟಪಟ್ಟು ದುಡಿದ ಹಣವನ್ನು ತೆಗೆದುಕೊಂಡು ಅವರನ್ನು ಕಷ್ಟಕ್ಕೆ ತಳ್ಳಬೇಡಿ. ರಸ್ತೆಗಳಲ್ಲಿ ಕಾಣಸಿಗುವ ಪ್ರತಿಯೊಂದು ಗುಂಡಿಗಳಿಗೆ ಸರ್ಕಾರಕ್ಕೆ ನಾವೆಷ್ಟು ಫೈನ್ ಹಾಕಬೇಕು? ಟ್ರಾಫಿಕ್ ರೂಲ್ಸ್ ಮಾಡುವ ಮುನ್ನ ಒಳ್ಳೆಯ ರಸ್ತೆಗಳನ್ನು ನೀಡಿ’ ಎಂದಿದ್ದಾರೆ. ನಟಿ ಸೋನು ಗೌಡ ಮಾಡಿರುವ ಈ ಟ್ವೀಟ್ ಗೆ ಸಾಕಷ್ಟು ಬೆಂಬಲ ಸಹ ವ್ಯಕ್ತವಾಗಿದ್ದು ಸೋನು ಗೌಡ ಟ್ವೀಟ್ ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here