ಸೆಲೆಬ್ರಿಟಿಗಳು ಯಾವುದಾದರೊಂದು ಕಾರ್ಯಕ್ರಮ, ವಿದೇಶಗಳಲ್ಲಿ ಶೂಟಿಂಗ್, ಕಾನ್ಸರ್ಟ್ ಎಂದೆಲ್ಲಾ ತಿರುಗಾಡುತ್ತಿದ್ದವರು ಇದೀಗ ಕೊರೊನಾ ಸೋಂಕಿನ ಭೀತಿಯಿಂದ ತಮ್ಮ ತಮ್ಮ ಮನೆಗಳಲ್ಲೇ ಸಮಯವನ್ನೇ ಕಳೆಯುತ್ತಿದ್ದಾರೆ. ವಿದೇಶಗಳಿಗೆ ತೆರಳಿದ್ದ ನಟ ನಟಿಯರು ಕೂಡಾ ಕೊರೊನಾ ಸೋಂಕಿನ ಭೀತಿಗೆ ಬೆಚ್ಚಿ ಭಾರತಕ್ಕೆ ಮರಳಿದ್ದಾರೆ. ಆದರೆ ಇವರೆಲ್ಲರ ನಡುವೆ ಖ್ಯಾತ ಗಾಯನ ಸೋನು ನಿಗಂ ಮಾತ್ರ ತಾನು ಈ ಸಂದರ್ಭದಲ್ಲಿ ಭಾರತಕ್ಕೆ ಬರುವುದಿಲ್ಲ ಎಂಬ ನಿರ್ಧಾರವೊಂದನ್ನು ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಪ್ರಸ್ತುತ ಅವರು ಕುಟುಂಬದೊಂದಿಗೆ ದುಬೈನಲ್ಲೇ ಉಳಿದು ಕೊಂಡಿದ್ದಾರೆ.

ನಟ ಸೋನು ನಿಗಮ್ ಅವರ ಪತ್ನಿ ಹಾಗೂ ಮಗ ಇಬ್ಬರೂ ದುಬೈನಲ್ಲಿ ಇದ್ದಾರೆ. ಮಾರ್ಚ್ ಆರರಂದು ಮುಂಬೈನಲ್ಲಿ ಇದ್ದ ಕಾರ್ಯಕ್ರಮ ರದ್ದಾದ ಕಾರಣ ಅವರು ಪತ್ನಿ ಹಾಗೂ ಮಗುವನ್ನು ನೋಡಲು ದುಬೈಗೆ ತೆರಳಿದ್ದರು. ಅವರ ಮಗ ದುಬೈನಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದು , ಪತ್ನಿ ಕೂಡಾ ದುಬೈನಲ್ಲೇ ಇದ್ದಾರೆ. ದುಬೈನಲ್ಲಿ ಕೂಡಾ ಕೊರೊನಾ ಭೀತಿ ಹೆಚ್ಚಾಗಿದೆ. ಆದರೆ ಸೋನು ನಿಗಮ್ ಅವರು ಇಂತಹ ಸಂದರ್ಭದಲ್ಲಿ ನಾನು ಪ್ರಯಾಣ ಮಾಡಿ ಇತರೆ ಪ್ರಯಾಣಿಕರಿಗೆ ತೊಂದರೆ ಕೊಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಮುಂಬೈನಲ್ಲಿ ತಂದೆ ಹಾಗೂ ಸಹೋದರಿಯಿದ್ದು ಅವರನ್ನು ನೋಡಲು ಬರಬೇಕಿತ್ತು.

ಆದರೆ ನಾನು ಬರುವಾಗ ಕೊರೊನಾ ಹೊತ್ತು ತಂದರೆ ಅದರಿಂದ ಅವರಿಗೆ ತೊಂದರೆಯಾಗುತ್ತದೆ.‌ ಆದ ಕಾರಣ ನಾನು ಯಾರಿಗೂ ತೊಂದರೆ ಕೊಡಲು ಬಯಸುವುದಿಲ್ಲ ಮತ್ತು ಇನ್ನೂ ಸ್ವಲ್ಪ ಸಮಯದವರೆಗೆ ದುಬೈನಲ್ಲೇ ಇದ್ದು, ಪರಿಸ್ಥಿತಿ ಸುಧಾರಿಸಿದ ನಂತರ ಭಾರತಕ್ಕೆ ಬರುವುದಾಗಿ ಅವರು ತಿಳಿಸಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಸೋನು ನಿಗಮ್ ಅವರು ಮಾಡಿರುವ ನಿರ್ಧಾರವನ್ನು ಅನೇಕರು ಮೆಚ್ಚಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here