ಸೋನು ನಿಗಮ್ ಹೆಸರು ಕೇಳಿದ ಕೂಡಲೇ ಮನಸ್ಸಲ್ಲಿ ಇಂಪಾದ ಹಾಡುಗಳು ಸಾಲು ಸಾಲಾಗಿ ಮನಸ್ಸಲ್ಲಿ ಮೂಡುತ್ತಿರುತ್ತವೆ. ಸೋನು ನಿಗಮ್ ಅವರ ಕಂಠ ಸಿರಿಯಲ್ಲಿ ಅಂತಹ ಅಮೋಘ ಹಾಡುಗಳು ಕನ್ನಡದಲ್ಲಿ ಮೂಡಿ ಬಂದಿರುವದೇ ಇದಕ್ಕೆ ಮುಖ್ಯ ಕಾರಣ. ಇಂತಹ ಕಂಚಿನ ಕಂಠದ ಗಾಯಕ ಬೆಂಗಳೂರಿನಲ್ಲಿ ನಡೆದಂತಹ 12 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ್ದರು ಮಾತ್ರವಲ್ಲದೇ ಅಲ್ಲಿ ಅವರು ಆಡಿದ ಮಾತುಗಳಿಂದ ಕನ್ನಡ ನಾಡಿನ ಜನರ ಮನಸ್ಸನ್ನು ಗೆದ್ದಿದ್ದಾರೆ.

ಕಾರ್ಯಕ್ರಮದ ವೇದಿಕೆಯ ಮೇಲಿದ್ದ ಸೋನು ನಿಗಮ್ ಅವರು ಕನ್ನಡದ ಬಗ್ಗೆ ಮಾತನಾಡಿದರು‌. ಅವರು ತಾನು ಹಿಂದಿನ ಜನ್ಮದಲ್ಲಿ ಕನ್ನಡಿಗನೇ ಆಗಿದ್ದೆ ಎಂದು ಗಟ್ಟಿಯಾಗಿ ನಂಬುವುದಾಗಿ ಹೇಳುತ್ತಾ, ಹಿಂದಿ ಹಾಡುಗಳನ್ನು ಹಾಡಲು ಬಂದವನು, ಕನ್ನಡದಲ್ಲಿ ಅನೇಕ ಉತ್ತಮವಾದ ಹಾಡುಗಳನ್ನು ಹಾಡಲು ಅವಕಾಶ ಪಡೆದೆ, ಕನ್ನಡ ಜನರ ಬಗ್ಗೆ ತುಂಬಾ ಗೌರವ ಇದೆ ಎಂದ ಅವರು ಇಲ್ಲಿನ ಜನರ ಪ್ರೀತಿಯನ್ನು ಗಳಿಸಿದ್ದಕ್ಕಾಗಿ ಹೆಮ್ಮೆ ಎನಿಸುತ್ತದೆ ಎಂದು ಕನ್ನಡ ಹಾಗೂ ನಾಡಿನ ಜನರ ಬಗ್ಗೆ ತಮ್ಮ ಮೆಚ್ಚುಗೆಯ ಮಾತುಗಳನ್ನು ವ್ಯಕ್ತಪಡಿಸಿದರು.

ಅವರು ತಾನು ಯಾವುದೇ ದೇಶದಲ್ಲಿ ಸಂಗೀತ ಕಛೇರಿಗಳಲ್ಲಿ ಹಾಡನ್ನು ಹಾಡುವಾಗಲೂ ಅಲ್ಲೊಂದು ಕನ್ನಡ ಎಂಬ ಧ್ವನಿ ಕೇಳಿ ಬರುತ್ತದೆ. ಆಗ ನಾನು ತಪ್ಪದೇ ಅನಿಸುತಿದೆ ಯಾಕೋ ಇಂದು ಹಾಡನ್ನು ಹಾಡುವುದಾಗಿ ಹೇಳಿದರು‌. ಅದೇ ಸಂದರ್ಭದಲ್ಲಿ ಅವರು ಚಿತ್ರೋತ್ಸವ ಕಾರ್ಯಕ್ರಮದಲ್ಲಿ ಕೂಡಾ ಅನಿಸುತಿದೆ ಹಾಡನ್ನು ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು. ಸೋನು ನಿಗಮ್ ಅವರ ಕನ್ನಡ ಪ್ರೀತಿ ನೋಡಿ ಎಲ್ಲರಿಗೂ ಸಂತೋಷ ಎನಿಸಿದ್ದು ಕೂಡಾ ನಿಜ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here