ಸೋನು ಸೂದ್, ಇತ್ತೀಚಿನ ವಿಶೇಷವಾಗಿ ಕೊರೊನಾ ಲಾಕ್ ಡೌನ್ ಅವಧಿಯಿಂದ ಬಹುಶಃ ಈ ನಟನ ಬಗ್ಗೆ ಬರುವಷ್ಟು ಸುದ್ದಿ ಇನ್ನೊಬ್ಬ ನಟನ ಬಗ್ಗೆ ಮಾದ್ಯಮಗಳಲ್ಲಿ ಬರುತ್ತಿಲ್ಲ. ಸೋನು ಸೂದ್ ಅವರ ಬಗ್ಗೆ ಒಂದಲ್ಲಾ ಒಂದು ಸುದ್ದಿ ಬಂದು ಅದನ್ನು ನೋಡಿದ ಜನ ಅವರ ಬಗ್ಗೆ ಅಪಾರ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಲಾಕ್ ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಸಾವಿರ ಸಾವಿರ ಸಂಖ್ಯೆಯಲ್ಲಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿದರು ಸೋನು ಸೂದ್. ತೆರೆಯ ಮೇಲಿನ ವಿಲನ್ ಜನರ ಪಾಲಿನ ನಾಯಕನಾದರು. ಅವರ ಮಾನವೀಯತೆ ದೇಶದಾದ್ಯಂತ ಮಾತಾಯಿತು.

ಎಲ್ಲಾ ಭಾಷೆಯಲ್ಲೂ ಕೂಡಾ ನಟರಲ್ಲಿ ಲಾಕ್ ಡೌನ್ ವೇಳೆ ಸಂಕಷ್ಟಕ್ಕೆ ಮಿಡಿದಿದ್ದು ಮಾತ್ರ ಕೆಲವರು, ಅದರಲ್ಲಿ ಸೋನು ಸೂದ್ ಅಗ್ರ ಸ್ಥಾನದಲ್ಲಿ ಇದ್ದು, ಕಷ್ಟ ಎಂದವರಿಗೆ ತನ್ನಿಂದ ಆಗುವ ಸಹಾಯವನ್ನು ಮಾಡಲು ಮುಂದಾಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯ ಮುದಿನೇಪಲ್ಲಿ ಎಂಬಲ್ಲಿ ಬಡ ರೈತನೊಬ್ಬ ಹೊಲ ಉಳಲು ಎತ್ತುಗಳು ಇಲ್ಲದೇ ತನ್ನಿಬ್ಬರು ಹೆಣ್ಣು ಮಕ್ಕಳ ಕೈಯಲ್ಲೇ ನೇಗಿಲನ್ನು ಹಿಡಿಸಿ ಹೊಲ ಉಳುಮೆ ಮಾಡುತ್ತಿದ್ದರು. ಈ ಫೋಟೋ, ವೀಡಿಯೋ ವೈರಲ್ ಆಗಿ ಅದು ಸೋನು ಸೂದ್ ಅವರ ಕಣ್ಣಿಗೆ ಕೂಡಾ ಬಿದ್ದಿದ್ದು ತಕ್ಷಣವೇ ಸೋನು ಅದಕ್ಕೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಸೋನು ಸೂದ್ ಟ್ವೀಟ್ ಒಂದನ್ನು ಮಾಡಿ ಈ ಕುಟುಂಬಕ್ಕೆ ಒಂದು ಜೋಡಿ ಎತ್ತಿನ ಅವಶ್ಯಕತೆ ಇಲ್ಲ, ಅವರು ಒಂದು ಟ್ರಾಕ್ಟರ್ ಗೆ ಅರ್ಹವಾಗಿದ್ದಾರೆ. ಆದ್ದರಿಂದ ನಾನು ನಿಮಗೆ ಒಂದು ಟ್ರಾಕ್ಟರ್ ಕಳುಹಿಸುತ್ತಿದ್ದೇನೆ, ಸಂಜೆಯ ಒಳಗೆ ಟ್ರಾಕ್ಟರ್ ನಿಮ್ಮ ಹೊಲವನ್ನು ಉಳುತ್ತದೆ ಎಂದು ತಿಳಿಸಿದ್ದಾರೆ. ಈ ಮೂಲಕ ಸೋನು ಸೂದ್ ಅವರು ಬಡ ರೈತನ ಕುಟುಂಬಕ್ಕೆ ನೆರವನ್ನು ನೀಡಲು ಮುಂದಾಗಿದ್ದಾರೆ. ಸೋನು ಕೆಲವೇ ದಿನಗಳ ಹಿಂದೆ ಮಕ್ಕಳ ಆನ್ಲೈನ್ ತರಗತಿಗಳಿಗಾಗಿ ಹಸುವನ್ನು ಮಾರಿ ಸ್ಮಾರ್ಟ್ ಫೋನ್ ಖರೀದಿಸಿದ್ದ ತಂದೆಗೆ ಹಸುವನ್ನು ಕೂಡಾ ವಾಪಸ್ಸು ಕೊಡಿಸಲು ಭರವಸೆ ನೀಡಿದ್ದರು.

ಒಟ್ಟಾರೆ ಕೋಟಿ ಕೋಟಿ ಜನರಿಂದ ಗಳಿಸಿದ, ತೆರೆಯ ಮೇಲೆ ಜನರ ನೆರವಿಗೆ ಧಾವಿಸಿ ತಮ್ಮ ಸರ್ವವನ್ನು ತ್ಯಾಗ ಮಾಡುವಂತೆ ನಟಿಸಿ ಮೆಚ್ಚಿಸುವ ನಾಯಕರು ಲಾಕ್ ಡೌನ್ ವೇಳೆ ಬಡವರ ಕಣ್ಣೀರು ಒರೆಸಿದರೋ ಇಲ್ಲವೋ, ‌ಆದರೆ ತೆರೆಯ ಮೇಲೆ ವಿಲನ್ ಆಗಿ ಜನರಿಂದ ಛೀಮಾರಿ ಹಾಕಿಸಿಕೊಳ್ಳುವ ಖಳ ನಟ ಇಂದು ರಿಯಲ್ ಲೈಫ್ ಹೀರೋ ಆಗಿ ಜನರ ಅಭಿಮಾನ ಗಳಿಸುತ್ತಿದ್ದಾರೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here