ಸೌಂದರ್ಯ ಎನ್ನುವ ಅದ್ಭುತ ಪ್ರತಿಭಾವಂತ ನಟಿಯ ದಕ್ಷಿಣ ಭಾರತದಲ್ಲಿ ದೊಡ್ಡ ಹೆಸರನ್ನು ಮಾಡಿದ ಜನ ಎಂದಿಗೂ ಮರೆಯಲಾರದಂತಹ ಸಿನಿಮಾಗಳಲ್ಲಿ ನಟಿಸಿ, ಜನ ಮನ್ನಣೆ ಪಡೆದ ಕನ್ನಡತಿ ಸೌಂದರ್ಯ. ಆದರೆ ಇಂದು ಸೌಂದರ್ಯ ನಮ್ಮೊಂದಿಗೆ ಇಲ್ಲವಾದರೂ ಅವರ ನೆನಪುಗಳು ಮಾತ್ರ ಸದಾ ಇದ್ದೇ ಇದೆ‌. ಸೌಂದರ್ಯ ಸಿನಿಮಾರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಹೆಗ್ಗಳಿಕೆ ಅವರದ್ದಾಗಿತ್ತು. ದಕ್ಷಿಣದ ಎಲ್ಲಾ ಟಾಪ್ ಹೀರೋಗಳೊಡನೆ ನಟಿಸಿದ ಸೌಂದರ್ಯ ಅವರು ಬಾಲಿವುಡ್ ನ ಬಿಗ್ ಬಿ ಅವರ ಜೊತೆ ಕೂಡಾ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ.

ಸೂಪರ್ ಸ್ಟಾರ್ ಆದರೂ ಕೂಡಾ ಸೌಂದರ್ಯ ಅವರ ಬಗ್ಗೆ ರೂಮರ್ಸ್ ಗಳು, ಗಾಸಿಪ್ ಗಳು ಹರಡಲಿಲ್ಲ‌‌‌‌‌. ಗಾಳಿ ಸುದ್ದಿಗಳಿಂದ ಸದಾ ದೂರವಿದ್ದ ಸೌಂದರ್ಯ ಅವರು ಗುಣದ ವಿಚಾರದಲ್ಲಿ ಎಲ್ಲರಿಂದ ಮೆಚ್ಚುಗೆ ಪಡೆದವರು. ಚಿತ್ರೀಕರಣ ವೇಳೆಯಲ್ಲಿ ಎಲ್ಲರೊಂದಿಗೆ ಬೆರೆಯುತ್ತಿದ್ದ ಗುಣ ಅವರಲ್ಲಿತ್ತು. ಇಂತಹ ಮೇರು ನಟಿಯನ್ನು ಟಾಲಿವುಡ್ ನ ಹೆಸರಾಂತ ನಾಯಕ ನಟ ಜಗಪತಿ ಬಾಬು ಅವರು ವಿವಾಹವಾಗಲು ಬಯಸಿದ್ದರು, ಆದರೆ ಜಗಪತಿ ಬಾಬು ಅವರಿಗೆ ಅದಾಗಲೇ ಮದುವೆ ಆಗಿತ್ತು. ಆದರೂ ಸೌಂದರ್ಯ ಅವರ ಗುಣ ನಡತೆ ಬಹುವಾಗಿ ಅವರನ್ನು ಆಕರ್ಷಿಸಿತ್ತು ಎನ್ನುವ ರೂಮರ್ ಒಂದು ಹರಡಿತ್ತು. ಆದರೆ ಅವರು ಬಯಸಿದಂತೆ ಆಗದೆ ಸೌಂದರ್ಯ ಅವರ ವಿವಾಹ ಬೇರೆಯವರ ಜೊತೆ ಆಯಿತಲ್ಲದೇ, ಸೌಂದರ್ಯ ದುರಂತ ಅಂತ್ಯ ಕೂಡಾ ಆಯಿತು.

ಆ ಸಂದರ್ಭದಲ್ಲಿ ಕೂಡಾ ಸೌಂದರ್ಯ ಅವರ ಸಾವಿನಿಂದ ಜಗಪತಿ ಬಾಬು ಅವರು ಕೆಲವು ಕಾಲ ಡಿಪ್ರಿಶನ್ ನಲ್ಲಿ ಇದ್ದರೆಂದೂ ಕೂಡಾ ಸುದ್ದಿಗಳು ಹರಡಿತ್ತು. ಸುದ್ದಿಗಳು ಏನೇ ಆದರೂ ಜಗಪತಿ ಬಾಬು ಅವರು ಮಾತ್ರ ಹಲವು ಸಂದರ್ಶನಗಳಲ್ಲಿ ಇದೆಲ್ಲಾ ಗಾಳಿ ಸುದ್ದಿಗಳೆಂದು, ಸೌಂದರ್ಯ ಹಾಗೂ ಅವರ ಸಹೋದರ ನನಗೆ ಉತ್ತಮ ಗೆಳೆಯರಷ್ಟೇ. ನನ್ನ ಮನಸ್ಸಿನಲ್ಲಿ ಸೌಂದರ್ಯ ಬಗ್ಗೆ ಅಂತಹ ಯಾವುದೇ ಭಾವನೆಗಳು ಇರಲಿಲ್ಲ ಎಂದಿದ್ದಾರೆ. ಸುದ್ದಿಗಳು ಕೇವಲ ಸುದ್ದಿಗಳಷ್ಟೇ ಅದರಲ್ಲಿ ವಾಸ್ತವ ಇಲ್ಲ ಎಂದು ಅವರು ಕಡ್ಡಿ ತುಂಡರಿಸಿದಂತೆ ಕೆಲವು ಸಂದರ್ಶನಗಳಲ್ಲಿ ವಿವರಣೆ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here