ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಗಳು ಸೌಂದರ್ಯ ಅವರ ಮದುವೆಯ ಸಂಭ್ರಮ ಕಳೆದೆರಡು ದಿನಗಳಿಂದ ಎಲ್ಲೆಡೆ ದೊಡ್ಡ ಸುದ್ದಿಯಾಗಿತ್ತು. ಶನಿವಾರ ರಾತ್ರಿಯಿಂದಲೇ ಮದುವೆಯ ಸಂಭ್ರಮ ಆರಂಭವಾಗಿತ್ತು‌. ಹಲವು ಶಾಸ್ತ್ರಗಳು, ಆರತಕ್ಷತೆ ಎಲ್ಲಾ ನಡೆದು ಇಂದು ಶುಭ ವಿವಾಹವು ಸಂಪನ್ನವಾಗಿದೆ‌. ಸಂಗೀತ್ ಹಾಗೂ ಮೆಹಂದಿ ಕಾರ್ಯಕ್ರಮಗಳು ಕಳೆದ ಶನಿವಾರ ನಡೆದಿದ್ದು, ಮಗಳ ವಿವಾಹದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಒಂದು ವಿಭಿನ್ನ ಶೈಲಿ ಹಾಗೂ ಗತ್ತಿನಲ್ಲಿ ಕಂಡು ಎಲ್ಲರ ಗಮನವನ್ನು ಸೆಳೆದಿದ್ದಾರೆ. ಅಲ್ಲದೆ ಅವರ ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿ ಎಲ್ಲರ ಗಮನವನ್ನು ಸೆಳೆದಿವೆ.

ಸೌಂದರ್ಯ ಅವರು ಮತ್ತೊಮ್ಮೆ ತಮ್ಮ ಹೊಸ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಈ ಮೊದಲು ಅವರಿಗೆ ಉದ್ಯಮಿ ಅಶ್ವಿನ್ ರಾಮ್ ಕುಮಾರ್ ಅವರ ಜೊತೆ ಮದುವೆ ಆಗಿತ್ತು. ಆದರೆ ಕಾರಣಾಂತರದಿಂದ ಅದು ಮುರಿದು ಬಿದ್ದ ಮೇಲೆ ಅವರು ಈಗ ಎರಡನೇ ಬಾರಿಗೆ ಹೊಸ ಜೀವನದ ಕನಸನ್ನು ವಿಶಗನ್ ವನಗಮುಡಿ ಎಂಬುವವರೊಂದಿಗೆ ಸಪ್ತ ಪದಿ ತುಳಿಯುವ ಮೂಲಕ ನನಸು ಮಾಡಿಕೊಳ್ಳಲು ಹೊರಟಿದ್ದಾರೆ. ರಜನಿಕಾಂತ್ ಅವರ ಮನೆಯಲ್ಲಿ ಮಗಳ ಮದುವೆಯ ಸಡಗರ ಸಂಭ್ರಮ ಮನೆ ಮಾಡಿದೆ. ಈಗ ವಿವಾಹ ಮುಗಿದ್ದಿದ್ದು ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲು ಅನುಮತಿ ಕೂಡಾ ದೊರೆತಿದೆ.

ರಜನಿಕಾಂತ್ ಅವರು ತಮ್ಮ ಮಗಳ ಮದುವೆಯಲ್ಲಿ ಡಾನ್ಸ್ ಮಾಡಿ ಕುಣಿದು ಕುಪ್ಪಳಿಸಿ, ಮಗಳ ಸಂತಸದಲ್ಲಿ ತಾನೂ ಭಾಗಿಯಾಗಿದ್ದಾರೆ. ಫೋಟೋ ಗಳಲ್ಲಿ ಸೌಂದರ್ಯ ಅವರು ತಮ್ಮ ಮಗನನ್ನು ಜೊತೆಯಲ್ಲಿ ಕುಳಿಸಿಕೊಂಡಿರುವ ಫೋಟೋಗಳನ್ನು ಸಹಾ ನೋಡಬಹುದಾಗಿದೆ. ರಜನಿಕಾಂತ್ ಅವರು ಡಾನ್ಸ್ ಮಾಡಿದ ವಿಡಿಯೋವನ್ನು ಅವರ ಫ್ಯಾನ್ ಕ್ಲಬ್ ಈಗಾಗಲೇ ಬಿಡುಗಡೆ ಮಾಡಿದೆ. ಚೆನ್ನೈನಲ್ಲಿ ವಿವಾಹ ಅದ್ದೂರಿಯಾಗಿ ನಡೆದಿದ್ದು ರಜನಿಕಾಂತ್ ಅವರು ಬಹಳ ಸಂತೋಷದಿಂದ ವಿವಾಹ ಸಮಾರಂಭದಲ್ಲಿ ಮಿಂಚಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here